ಚೆಯ್ಯAಡಾಣೆ, ಫೆ. ೯: ಚೆಯ್ಯಂಡಾಣೆ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ತಾ. ೧೧ ಮತ್ತು ೧೨ ರಂದು ಎಡಪಾಲ ಪ್ರೀಮಿಯರ್ ಲೀಗ್ ಸೀಸನ್ -೯ ಕ್ರಿಕೆಟ್ ಪಂದ್ಯಾಟ ನಡೆಯಲಿದೆ ಎಂದು ಇಪಿಎಲ್ ಪಂದ್ಯಾಟದ ಸ್ಥಾಪಕ ಅಧ್ಯಕ್ಷ ಹನೀಫ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಈ ವರ್ಷದ ಪಂದ್ಯಾಟವು ಹುತಾತ್ಮ ವೀರ ಯೋಧ ಅಲ್ತಾಫ್ ಅಹ್ಮದ್ ಸ್ಮರಣಾರ್ಥ ನಡೆಯಲಿದೆ. ಒಟ್ಟು ೮ ತಂಡಗಳು ಭಾಗವಹಿಸಲಿವೆ.

ಚೆಯ್ಯಂಡಾಣೆ ವ್ಯಾಪ್ತಿಗೆ ಒಳಪಟ್ಟ ನರಿಯಂದಡ, ಕೊಕೇರಿ, ಚೇಲಾವರ ಗ್ರಾಮಕ್ಕೆ ಒಳಪಟ್ಟ ಕ್ರೀಡಾಪಟುಗಳನ್ನು ಈ ಕ್ರೀಡಾಕೂಟದಲ್ಲಿ ಬಿಡ್ಡಿಂಗ್ ಮೂಲಕ ಆಯ್ಕೆ ಮಾಡಲಾಗಿದ್ದು, ೮ ತಂಡಕ್ಕೆ ಲೀಗ್ ಮಾದರಿ ಪಂದ್ಯಾಟ ನಡೆಯಲಿದೆ.

ತಂಡದ ಹೆಸರು ಔಟ್‌ಲುಕ್ ಬ್ಲಾಸ್ಟರ್ಸ್, ಬ್ಲೂ ಈಗಲ್, ಸ್ಟಾರ್ ಕ್ರಿಕೆಟರ್ಸ್, ವಿಲೇಜ್ ಪ್ಯಾಂಥರ್ಸ್, ದಿಲ್ ದಾರ್, ರಾಯಲ್ ಚಾಲೆಂಜರ್ಸ್, ರಿಸಿಂಗ್ ಬಾಯ್ಸ್, ಸೈಲೆಂಟ್ ಕಿಲ್ಲರ್ ಎಂಬ ೮ ತಂಡಗಳ ನಡುವೆ ಪೈಪೋಟಿ ನಡೆಯಲಿದೆ. ಪ್ರಥಮ ಬಹುಮಾನವಾಗಿ ೨೫ ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನವಾಗಿ ೧೫ ಸಾವಿರ ರೂಪಾಯಿ ನಗದು ಹಾಗೂ ಆಕರ್ಷಕ ಟ್ರೋಫಿ ಹಾಗೂ ಹಲವಾರು ವೈಯಕ್ತಿಕ ಬಹುಮಾನಗಳನ್ನು ಕೂಡ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಕ್ರೀಡಾಕೂಟದ ಉದ್ಘಾಟನೆ ಯನ್ನು ತಾ. ೧೧ ರಂದು ಬೆಳಿಗ್ಗೆ ೮ ಗಂಟೆಗೆ ಗ್ರಾ.ಪಂ. ಅಧ್ಯಕ್ಷ ಬಿದ್ದಂಡ ರಾಜೇಶ್ ಅಚ್ಚಯ್ಯ ನೆರವೇರಿಸಲಿದ್ದಾರೆ. ತಾ. ೧೨ರ ಸಂಜೆ ೪ ಗಂಟೆಗೆ ಸಮಾರೋಪ ಸಮಾರಂಭ ನಡೆಯ ಲಿದ್ದು, ಹಲವಾರು ಸಾಮಾಜಿಕ, ರಾಜಕೀಯ ಪ್ರಮುಖರು ಭಾಗ ವಹಿಸಲಿದ್ದಾರೆಎಂದು ತಿಳಿಸಿದರು.

ಗೋಷ್ಠಿಯಲ್ಲಿ ಎಡಪಾಲ ಪ್ರಿಮಿಯರ್ ಲೀಗ್ ಕ್ರೀಡಾಕೂಟದ ಅಧ್ಯಕ್ಷ ಷಂಷುದ್ದೀನ್, ಉಪಾಧ್ಯಕ್ಷ ನಾಸರ್, ಕೋಶಾಧಿಕಾರಿ ಶಾನೀಫ್, ಸದಸ್ಯ ನೌಫಲ್, ಆಶೀದ್ ಉಪಸ್ಥಿತರಿದ್ದರು.