ಕೂಡಿಗೆ, ಫೆ. ೯: ಕೂಡುಮಂಗಳೂರು ಗ್ರಾ.ಪಂ. ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದ ಆನೆಕೆರೆಯ ಜಾಗವನ್ನು ಕೆಲವರು ಒತ್ತುವರಿ ಮಾಡಿದ್ದಾರೆ. ಇದರಿಂದ ಆನೆ ಕೆರೆಯಲ್ಲಿರುವ ಜಲಮೂಲಗಳ ನಾಶವಾಗುತ್ತಿವೆ. ಒತ್ತುವರಿ ಜಾಗವನ್ನು ತೆರವುಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿ ಗ್ರಾ.ಪಂ.ಗೆ ಮನವಿ ಸಲ್ಲಿಸಿದ್ದಾರೆ.

ಗ್ರಾ.ಪಂ. ಅಧೀನಕ್ಕೆ ಒಳಪಡುವ ಆನೆಕೆರೆಯ ವ್ಯಾಪ್ತಿಯನ್ನು ಕಾನೂನು ಬದ್ಧವಾಗಿ ಹದ್ದುಬಸ್ತು ಸರ್ವೆ ನಡೆಸಿ ರಕ್ಷಿಸಬೇಕು. ಒತ್ತುವರಿಯನ್ನು ತೆರವು ಗೊಳಿಸದಿದ್ದರೆ ಕೂಡುಮಂಗಳೂರು ಹೋರಾಟ ಸಮಿತಿ ಮತ್ತು ಗ್ರಾಮಸ್ಥರ ಸಹಕಾರದೊಂದಿಗೆ ಅಹೋರಾತ್ರಿ ಹೋರಾಟವನ್ನು ಗ್ರಾ.ಪಂ. ಎದುರು ಮಾಡಲಾಗುವುದು ಎಂದು ಸಿ.ವಿ. ನಾಗೇಶ್, ಕಾರ್ಯದರ್ಶಿ ಸುಂದರ್ ದಾಸ್ ಎಚ್ಚರಿಸಿದರು.