ಮಡಿಕೇರಿ, ಫೆ. ೯: ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿರುವ ಐಮುಡಿಯಂಡ ರಾಣಿ ಮಾಚಯ್ಯ ಅವರನ್ನು ದೇಚೂರು ಕೊಡವ ಕೇರಿ ವತಿಯಿಂದ ಸನ್ಮಾನಿಸಲಾಯಿತು. ಕೇರಿಯ ಅಧ್ಯಕ್ಷ ಮೂವೇರ ಜಯರಾಂ ಅವರ ಮುಂದಾಳತ್ವದಲ್ಲಿ ರಾಣಿ ಮಾಚಯ್ಯ ಮನೆಗೆ ತೆರಳಿದ ಕೇರಿಯ ಪ್ರಮುಖರು ಶಾಲು ಹೊದಿಸಿ, ಫಲ ತಾಂಬೂಲ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಶುಭ ಹಾರೈಸಿದರು.