ಮಡಿಕೇರಿ, ಫೆ. ೯ : ಕರ್ಣಂಗೇರಿಯ ಶ್ರೀ ರಾಜರಾಜೇಶ್ವರಿ ದೇವಾಲಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ತಾ. ೧೮ ರಂದು ವಿವಿಧ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಾಲಯದ ಧರ್ಮದರ್ಶಿ ಗೋವಿಂದಸ್ವಾಮಿ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಅಂದು ಬೆಳಿಗ್ಗೆ ೯ ಗಂಟೆಯಿAದ ಕಾಶಿಲಿಂಗಕ್ಕೆ ಕ್ಷೀರಾಭಿಷೇಕ ಹಾಗೂ ಪಂಚಾಮೃತ ಅಭಿಷೇಕ ನಡೆಯಲಿದೆ.
ಮಧ್ಯಾಹ್ನ ೧೨ ಗಂಟೆಗೆ ಮಹಾಮಂಗಳಾರತಿ ನಂತರ ಭಕ್ತಾದಿಗಳಿಂದ ಪಂಚಲಿAಗಕ್ಕೆ ಪವಿತ್ರ ಗಂಗಾಜಲದಿAದ ಅಭಿಷೇಕ ಮತ್ತು ಶಿವನ ಮೂರ್ತಿಗೆ ಪುಷ್ಪಾರ್ಚನೆ ಯಾಗಲಿದೆ. ಸಂಜೆ ೭ ಗಂಟೆಗೆ ಭಕ್ತಾದಿಗಳಿಗೆ ದೀಪಾಲಂಕಾರ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ರಾತ್ರಿ ೮ ಗಂಟೆಗೆ ತಾಯಿಯ ದರ್ಶನ ಇರುತ್ತದೆ.
ಮಧ್ಯಾಹ್ನ ಹಾಗೂ ರಾತ್ರಿ ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸಂಜೆ ಭಕ್ತಿ ಪ್ರದಾನ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಗಂಗಾಜಲ ಅಭಿಷೇಕ
ಪಂಚಲಿAಗಕ್ಕೆ ಪವಿತ್ರ ಗಂಗಾಜಲದಿAದ ಅಭಿಷೇಕ ಮತ್ತು ಶಿವನಮೂರ್ತಿಗೆ ಪುಷ್ಪಾರ್ಚನೆಯನ್ನು ಖುದ್ದು ತಾವೇ ಮಾಡಲಿಚ್ಛಿಸುವವರು ದೇವಾಲಯದ ಕಚೇರಿಯನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗೆ ೦೮೨೭೨ ೨೯೫೬೬೮, ೯೪೮೦೭೩೦೫೨೩, ೯೪೮೧೯೫೯೦೮೦ಗೆ ಕರೆ ಮಾಡಬಹುದೆಂದು ಹೇಳಿದ್ದಾರೆ.
ದೇವಾಲಯದಲ್ಲಿ ೫೨ ಅಡಿ ಎತ್ತರದ ಶಿವನ ವಿಗ್ರಹವನ್ನು ೨೦೧೬ ರಲ್ಲಿ ಪ್ರತಿಷ್ಠಾಪಿಸಲಾಗಿದೆ. ಗರ್ಭಗುಡಿಯಲ್ಲಿ ಕಾಶಿಲಿಂಗ, ವಿಗ್ರಹದ ಸುತ್ತ ಪಂಚಲಿAಗಗಳು ಮತ್ತು ೧೦೯ ಲಿಂಗಗಳಿರುವುದು ಕ್ಷೇತ್ರದ ವಿಶೇಷ.