ಪೊನ್ನಂಪೇಟೆ, ಫೆ. ೯: ಪೊನ್ನಂಪೇಟೆ ತಾಲೂಕಿನ ಕಿರುಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಳಕೆರೆ ಕಾಲೋನಿಗೆ ಕಿರುಗೂರು ಗ್ರಾಮದಿಂದ ಸಂಪರ್ಕ ಕಲ್ಪಿಸುವ ಸೇತುವೆಯು ಕಳೆದ ನಾಲ್ಕು ವರ್ಷಗಳ ಹಿಂದೆ ಪ್ರವಾಹಕ್ಕೆ ಸಿಲುಕಿ ಕುಸಿದು ಹೋಗಿತ್ತು. ಆದರೆ ಇದುವರೆಗೂ ಕೂಡ ಈ ಸೇತುವೆ ದುರಸ್ತಿಯಾಗದೇ ಇರುವ ಕಾರಣ ಈ ಕಾಲೋನಿಯಲ್ಲಿ ವಾಸಮಾಡುತ್ತಿರುವ ಸುಮಾರು ೨೦ ರಿಂದ ೨೫ ಕುಟುಂಬಗಳು ರಸ್ತೆ ಇಲ್ಲದೆ ಸಂಕಷ್ಟ ಎದುರಿಸುತ್ತಿದ್ದಾರೆ.

ಸೇತುವೆ ಸಂಪರ್ಕ ಕಡಿತಗೊಂಡಿರುವ ಪರಿಣಾಮ ಇಲ್ಲಿನ ನಿವಾಸಿಗಳು ಖಾಸಗಿ ವ್ಯಕ್ತಿಗಳ ಜಾಗದಲ್ಲಿ ಸುತ್ತಿ ಬಳಸಿ ಕಾಲೋನಿಗೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸಿಲಿಂಡರ್ ಸೇರಿದಂತೆ ದಿನನಿತ್ಯ ಸಾಮಗ್ರಿಗಳನ್ನು ಮನೆಗೆ ಕೊಂಡೊಯ್ಯಬೇಕೆAದರೆ, ತಲೆಯ ಮೇಲೆ ಹೊತ್ತುಕೊಂಡೇ ತೆರಳಬೇಕಾಗಿದೆ. ಯಾರಿಗಾದರೂ ಅನಾರೋಗ್ಯ ಸಂಭವಿಸಿದರೆ ಕಾಲೋನಿಗೆ ಆಂಬ್ಯುಲೆನ್ಸ್ ಬರಲು ರಸ್ತೆ ಇಲ್ಲದ ಹಿನ್ನೆಲೆ ರೋಗಿಯನ್ನು ಹೊತ್ತುಕೊಂಡೇ ಆಸ್ಪತ್ರೆಗೆ ತೆರಳಬೇಕಾದ ಪರಿಸ್ಥಿತಿ ಇದೆ. ಕುಸಿದು ಹೋಗಿರುವ ಸೇತುವೆ ಸರಿಪಡಿಸಿ ಕಾಲೋನಿಗೆ ಸಂಪರ್ಕ ಕಲ್ಪಿಸಿಕೊಡಿ ಎಂದು ಸಂಬAಧಿಸಿದ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಕಾಲೋನಿ ನಿವಾಸಿಗಳು ಮನವಿ ಮಾಡಿದರೂ ಸಹ ಯಾವುದೇ ಪ್ರಯೋಜವಾಗಿಲ್ಲ.

ಈ ಹಿನ್ನೆಲೆ ತಮ್ಮ ಸಂಕಷ್ಟಕ್ಕೆ ಸ್ಪಂದಿಸುವAತೆ ಹೊಳಕೆರೆ ನಿವಾಸಿಗಳು ಕರ್ನಾಟಕ ರಾಜ್ಯ ರೈತ ಸಂಘಕ್ಕೆ ಈ ಬಗ್ಗೆ ಮನವಿ ಮಾಡಿದ್ದರು ಇದರಂತೆ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಹಾಗೂ ಪದಾಧಿಕಾರಿಗಳು ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಪ್ರಶಾಂತ್, ಲೋಕೋಪಯೋಗಿ ಇಲಾಖೆಯ ಅಭಿಯಂತರ ರಾಮಣ್ಣಗೌಡ ಅವರೊಂದಿಗೆ ಸ್ಥಳಕ್ಕೆ ತೆರಳಿ ಕಾಲೋನಿ ನಿವಾಸಿಗಳ ಸ್ಥಿತಿಯನ್ನು ಅಧಿಕಾರಿಗಳ ಗಮನಕ್ಕೆ ತಂದರು. ಸೇತುವೆ ಇಲ್ಲದೇ ಸ್ಥಳೀಯ ನಿವಾಸಿಗಳು ಸಂಕಷ್ಟದಲ್ಲಿ ಬದುಕು ದೂಡುತ್ತಿರುವ ಬಗ್ಗೆ ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅವರು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟು, ಕೂಡಲೇ ಸೇತುವೆ ನಿರ್ಮಿಸಲು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.

ಗ್ರಾಮಸ್ಥರಾದ ಶಶಿಕುಮಾರ್ ಮಾತನಾಡಿ, ೨೦೧೯ ರಲ್ಲಿ ಸೇತುವೆ ಕುಸಿದಿದ್ದು, ಅಂದಿನಿAದ ಇಲ್ಲಿಯವರೆಗೂ ರಸ್ತೆ ಹಾಗೂ ಸೇತುವೆಯನ್ನು ನಿರ್ಮಿಸಿಕೊಡುವಂತೆ ಹಲವು ಬಾರಿ ಸಂಬAಧಿಸಿದವರ ಗಮನ ಸೆಳೆದರೂ ಏನೂ ಪ್ರಯೋಜನವಾಗಿಲ್ಲ ಎಂದು ಅಸಹಾಯಕತೆ ತೋಡಿಕೊಂಡರು. ಪಿ.ಡಬ್ಲ್ಯೂ.ಡಿ. ಇಂಜನಿಯರ್ ರಾಮಣ್ಣಗೌಡ ಮಾತನಾಡಿ, ಮಳೆಗಾಲದ ಪ್ರವಾಹ ಸಂದರ್ಭ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿ ಸೇತುವೆ ಹಾಗೂ ಹೊಳೆಬದಿ ಪ್ರದೇಶ ಮುಳುಗಡೆಯಾಗುವ ಹಿನ್ನೆಲೆ ಸೇತುವೆಯನ್ನು ಈಗಿರುವ ಮಟ್ಟಕ್ಕಿಂತ ಸುಮಾರು ೫ ರಿಂದ ೬ ಅಡಿ ಎತ್ತರಕ್ಕೆ ನಿರ್ಮಿಸಬೇಕಿದೆ. ಅಲ್ಲದೇ ಸೂಕ್ತ ರಸ್ತೆ ನಿರ್ಮಾಣವಾಗಬೇಕಿರುವ ಹಿನ್ನೆಲೆ ಅಂದಾಜು ರೂ. ೧ ಕೋಟಿ ೭೦ ಲಕ್ಷ ವೆಚ್ಚವಾಗಬಹುದು ಎಂದರು. ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಪ್ರಶಾಂತ್ ಮಾತನಾಡಿ, ಕಿರುಗೂರು ಗ್ರಾಮದಿಂದ ಹೊಳಕೆರೆ ಕಾಲೋನಿಗೆ ಸಂಪರ್ಕ ಕಲ್ಪಿಸುವ ಸೇತುವೆ ಹಾಗೂ ರಸ್ತೆ ನಿರ್ಮಾಣಕ್ಕೆ ಸಂಬAಧಿಸಿದ ವರದಿ ತಯಾರಿಸಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗುವುದು ಎಂದರು. ಈ ಸಂದರ್ಭ ರೈತ ಸಂಘದ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್, ಕಾರ್ಯದರ್ಶಿ ಚಟ್ರುಮಾಡ ಸುಜಯ್ ಬೋಪಯ್ಯ, ಪೊನ್ನಂಪೇಟೆ ತಾಲೂಕು ರೈತ ಸಂಘದ ಅಧ್ಯಕ್ಷ ಆಲೇಮಾಡ ಮಂಜುನಾಥ್, ಪುಚ್ಚಿಮಾಡ ರಾಯ್ ಮಾದಪ್ಪ, ಚೊಟ್ಟೆಕಾಳಪಂಡ ಮನು, ಗಾಂಡAಗಡ ಉತ್ತಯ್ಯ, ಕೋದೇಗಂಡ ಸುರೇಶ್ ಚಂಗಪ್ಪ, ಚೆಪ್ಪುಡಿರ ಬೋಪಣ್ಣ, ಹೆಚ್.ಕೆ. ದಿನೇಶ್, ಮಡಿವಾಳರ ಅಶೋಕ್, ಮೋಹನ್, ಸುರೇಶ್, ಚೆಪ್ಪುಡಿರ ಕಿರಣ್ ಕುಟ್ಟಪ್ಪ, ರೈತ ಸಂಘದ ಪದಾಧಿಕಾರಿಗಳು, ಕಂದಾಯ ಅಧಿಕಾರಿ ಸುದೀಂದ್ರ ಹಾಗೂ ಗ್ರಾಮಸ್ಥರು ಹಾಜರಿದ್ದರು.