ಸುಂಟಿಕೊಪ್ಪ, ಫೆ. ೯: ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಮತ್ತು ಜಿಲ್ಲಾ ಅಕ್ಷರ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ ಶ್ರೀ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಸರಕಾರಿ ಪ್ರಾಥಮಿಕ ಶಾಲೆಯ ೪ರಿಂದ ೬ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಗ್ರಾಮ ಪಂಚಾಯಿತಿ ಮಟ್ಟದ ಗಣಿತ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ ಮಹೇಶ್ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು.
ಪಂಚಾಯಿತಿ ಸದಸ್ಯರಾದ ಹೆಚ್.ಯು. ರಫೀಕ್ ಖಾನ್ ಮತ್ತು ಎ. ಶಬೀರ್, ಅಕ್ಷರ ಫೌಂಡೇಶನ್ನ ಜಿಲ್ಲಾ ಸಂಯೋಜಕ ಕುಮಾರಸ್ವಾಮಿ ಅವರುಗಳು ಮಾತನಾಡಿದರು. ಪಂಚಾಯಿತಿ ಉಪಾಧ್ಯಕ್ಷ ಕೆ.ಕೆ. ಪ್ರಸಾದ್ ಕುಟ್ಟಪ್ಪ, ದ್ವಿತೀಯ ದರ್ಜೆ ಲೆಕ್ಕ ಸಹಾಯಕಿ ಹೆಚ್.ಕೆ. ಚಂದ್ರಕಲಾ, ಸಿಬ್ಬಂದಿಗಳಾದ ಎಸ್.ಎ. ಶ್ರೀನಿವಾಸ್, ಮಂಜುನಾಥ್, ಇ.ಎಸ್. ಸಂಧ್ಯಾ ಸುಂಟಿಕೊಪ್ಪ ಮತ್ತು ಗದ್ದೆಹಳ್ಳ ಸರಕಾರಿ ಪ್ರಾಥಮಿಕ ಶಾಲೆಗಳ ಶಿಕ್ಷಕಿಯರು ಉಪಸ್ಥಿತರಿದ್ದರು. ಸುಂಟಿಕೊಪ್ಪ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಸೌಭಾಗ್ಯ ಅವರು ಸ್ವಾಗತಿಸಿ, ನಿರೂಪಿಸಿದರು. ಕೂಡಿಗೆ ಡಯಟ್ ತರಬೇತಿ ಸಂಸ್ಥೆಯ ಶ್ರೇಯ ಮತ್ತು ರಿಯಾ ಅವರು ಗಣಿತ ಸ್ಪರ್ಧೆಯನ್ನು ನಡೆಸಿಕೊಟ್ಟರು.
ಗಣಿತ ಸ್ಪರ್ಧೆಯ ೪ನೇ ತರಗತಿ ವಿಭಾಗದಲ್ಲಿ ಸುಂಟಿಕೊಪ್ಪ ಜಿ.ಎಂ.ಪಿ. ಶಾಲೆಯ ವಿದ್ಯಾರ್ಥಿನಿ ಹಂಸಿಕಾ ಅವರು ಪ್ರಥಮ ಸ್ಥಾನ ಪಡೆದಿದ್ದಾರೆ. ಗದ್ದೆಹಳ್ಳ ಜಿ.ಹೆಚ್.ಪಿ. ಶಾಲೆಯ ಜಸ್ಮಿತಾ ದ್ವಿತೀಯ ಮತ್ತು ಸನಾ ತೃತೀಯ ಸ್ಥಾನ ಗಳಿಸಿದ್ದಾರೆ.
೫ನೇ ತರಗತಿ ವಿಭಾಗದಲ್ಲಿ ಸುಂಟಿಕೊಪ್ಪ ಜಿ.ಎಂ.ಪಿ. ಶಾಲೆಯ ಆಯಿಷಾ ಪ್ರಥಮ, ಪಂಚಮಿ ದ್ವಿತೀಯ ಮತ್ತು ಫಾತಿಮತ್ ಆನ್ ಶಿಫಾ ತೃತೀಯ ಸ್ಥಾನ ಪಡೆದರು. ೬ನೇ ತರಗತಿ ವಿಭಾಗದಲ್ಲಿ ಸುಂಟಿಕೊಪ್ಪ ಜಿ.ಎಂ.ಪಿ. ಶಾಲೆಯ ಸುಜೈನ್ ಪ್ರಥಮ, ಮಹಮ್ಮದ್ ಅಜ್ಮಲ್ ದ್ವಿತೀಯ ಮತ್ತು ಗದ್ದೆಹಳ್ಳ ಜಿ.ಹೆಚ್.ಪಿ. ಶಾಲೆಯ ದೀಕ್ಷಿತ್ ತೃತೀಯ ಸ್ಥಾನ ಗಳಿಸಿದ್ದಾರೆ.