ಸುಂಟಿಕೊಪ್ಪ, ಫೆ. ೯: ಮಾದಾಪುರ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಬಿ.ಆರ್.ಮಾನಸ ಅವರು ಗುರುವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಾದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಬಿ.ನಿರೂಪ ಅವರು ಜನವರಿ ೫ ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯಿತು.
ಸದಸ್ಯರಾದ ಬಿ.ಆರ್. ಮಾನಸ ಅವರು ಮಾತ್ರ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಸೋಮವಾರಪೇಟೆ ತಾಲೂಕು ಪಂಚಾಯಿತಿ ಇ ಓ ಜಯಣ್ಣ ಅವರು ಮಾನಸ ಅವರನ್ನು ಅಧ್ಯಕ್ಷರೆಂದು ಘೋಷಿಸಿದರು.
ಈ ಸಂದರ್ಭ ಗ್ರಾ.ಪಂ. ಉಪಾಧ್ಯಕ್ಷೆ ಜ್ಯೋತಿ ಸದಸ್ಯರುಗಳಾದ ಪಿ.ಡಿ. ಅಂತೋಣಿ, ಬಿದ್ದಪ್ಪ, ಗಿರೀಶ್, ಸೋಮಣ್ಣ, ನಿರೂಪ, ಗೋಪಿ ಬೀಮಯ್ಯ, ಸುರೇಶ ಬಾವೆ, ಜೆರ್ಮಿ, ದಮಯಂತಿ, ಕೆ.ಎ.ಲತೀಫ್, ಶೀಲಾ, ಪಂಚಾಯಿತಿ ಪ್ರÀಬಾರ ಅಭಿವೃದ್ಧಿ ಅಧಿಕಾರಿ ಪೂರ್ಣಿಮ, ಗ್ರಾ.ಪಂ. ಲೆಕ್ಕಾಧಿಕಾರಿ ಅನಿತಾ ಸಿಬ್ಬಂದಿಗಳು ಉಪಸ್ಥಿತರಿದ್ದರು.