ಮಡಿಕೇರಿ, ಫೆ. ೯: ಸಾಮಾನ್ಯವಾಗಿ ಗಂಟೆ ಬಾರಿಸಿದರೆ ‘ಡಣ್’ ಎಂಬ ಸದ್ದು ಬರುವದು ಸಹಜ. ಕೆಲವೊಂದು ಸಣ್ಣ ಗಂಟೆಗಳು ‘ಟಣ್’ ಅಂತಲೂ ಸದ್ದು ಮಾಡುತ್ತವೆ. ಆದರೆ, ಉತ್ತರ ಭಾರತದ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಐತಿಹಾಸಿಕ ಶ್ರೀ ರಾಮ ಮಂದಿರಕ್ಕೆAದೇ ವಿಶೇಷವಾಗಿ ನಿರ್ಮಿಸಲಾಗಿರುವ ಬೃಹತ್ ಗಾತ್ರದ ಗಂಟೆ ಬಾರಿಸಿದರೆ ‘ಓಂ’ ಎಂದು ‘ಓಂಕಾರ’ ನಾದವನ್ನು ಮೊಳಗಿಸುತ್ತದೆ. ಈ ನಾದ ಸುಮಾರು ನಾಲ್ಕು ಕಿಲೋ ಮೀಟರ್‌ವರೆಗೆ ಕೇಳಿಸುತ್ತದೆ.
ಕೋಟ್ಯಂತರ ಹಿಂದೂಗಳ ಕನಸಾಗಿದ್ದ ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ಕೊನೆಗೂ ಹಸಿರು ನಿಶಾನೆ ಸಿಕ್ಕಿದ್ದು, ಕಳೆದ ಆಗಸ್ಟ್ನಲ್ಲಿ ಭೂಮಿಪೂಜೆ ಆರಂಭಗೊAಡು ಬಹುತೇಕ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿವೆ. ಈ ನಡುವೆ ರಾಮ ಮಂದಿರಕ್ಕೆAದೇ ವಿಶೇಷವಾಗಿ ನಿರ್ಮಿಸಲಾಗಿರುವ ಬೃಹತ್ ಗಾತ್ರದ ಗಂಟೆಯನ್ನು ಅಯೋಧ್ಯೆಗೆ ತಲಪಿಸಲಾಗಿದ್ದು, ಅದನ್ನು ಮಂದಿರದಲ್ಲಿ ಅಳವಡಿಸ ಲಾಗುತ್ತದೆ. ತಮಿಳುನಾಡಿನ ಪುಟ್ಟ ಗ್ರಾಮವೊಂದರಲ್ಲಿ ತಯಾರಾದ ಈ ಗಂಟೆ ದೊಡ್ಡ ಸದ್ದು ಮಾಡುತ್ತಿದೆ..!
೪.೧ ಅಡಿ ಗಾತ್ರ
ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸ್ರಿವೈಕುಂಟA ತಾಲೂಕಿನ ಎರಳ್ ಎಂಬ ಪುಟ್ಟ ಗ್ರಾಮದಲ್ಲಿ ತಯಾರಾದ ಈ ವಿಶೇಷ ಗಂಟೆ ೪.೧ ಅಡಿಗಳಷ್ಟು ಎತ್ತರವಿದೆ. ‘ಜೈ ಶ್ರೀ ರಾಂ’ ಎಂಬ ಉಬ್ಬು ಬರವಣಿಗೆಯಿರುವ ಈ ಗಂಟೆಯನ್ನು ಎರಳ್‌ನ ರಾಮಕೃಷ್ಣ ನಾಡರ್ ವೆಸ್ಸೆಲ್ಸ್ ಶಾಪ್‌ನಲ್ಲಿ ತಯಾರಿಸಲಾಗಿದೆ. ಕಂಚುವಿನಲ್ಲಿ ತಯಾರಾಗಿರುವ ೬೫೦ ಕೆ.ಜಿ. ತೂಕವಿರುವ ಈ ಗಂಟೆಯಲ್ಲಿ ಕಳೆದ ಎರಡು ವರ್ಷಗಳಿಂದ ನುರಿತ ೨೦ ಮಂದಿ ಕಲಾವಿದರ ಶ್ರಮ ಅಡಗಿದೆ. ಇದರ ತಯಾರಿಕೆಗೆ ರೂ. ೨ ಲಕ್ಷದಷ್ಟು ವೆಚ್ಚವಾಗಿದೆ ಎಂದು ತಯಾರಕ ಸಂಸ್ಥೆಯ ಮಾಲೀಕ ಆರ್. ರಾಮನಾಥನ್ ಹೇಳುತ್ತಾರೆ.
೪೫೫೫ ಕಿ.ಲೋ. ದೂರದಿಂದ ರವಾನೆ
ಎರಳ್‌ನಲ್ಲಿ ತಯಾರಾದ ಈ ಗಂಟೆಯನ್ನು ರಾಮೇಶ್ವರಕ್ಕೆ ಕೊಂಡೊಯ್ದು ಅಲ್ಲಿಂದ ಅಯೋಧ್ಯೆಗೆ ತಲಪಿಸಲಾಗಿದೆ. ರಾಮ ರಥಯಾತ್ರೆಯ ಮೂಲಕ ಗಂಟೆಯನ್ನು ರಾಮೇಶ್ವರದಿಂದ ಅಯೋಧ್ಯೆಗೆ ತಲಪಿಸಲು ಹನ್ನೊಂದು ರಾಜ್ಯಗಳನ್ನು ಕ್ರಮಿಸಲಾಗಿದೆ.
೨೧ ದಿನಗಳ ಕಾಲ ನಡೆದ ರಥಯಾತ್ರೆ ಸುಮಾರು ೪೫೫೫ ಕಿಲೋ ಮೀಟರ್ ದೂರವನ್ನು ಕ್ರಮಿಸಿರುವದಾಗಿ ಯಾತ್ರೆ ಆಯೋಜಿಸಿದ್ದ ಕಾನೂನು ಹಕ್ಕುಗಳ ಪ್ರಧಾನ ಕಾರ್ಯದರ್ಶಿ ರಾಜಲಕ್ಷಿö್ಮ ಹೇಳಿದ್ದಾರೆ. ೬೫೦ ಕೆ.ಜಿ. ತೂಕದ ಗಂಟೆಯನ್ನು ಕ್ರೇನ್ ಬಳಸಿ ವಾಹನಕ್ಕೆ ಏರಿಸಲಾಗಿದ್ದು, ಕ್ರೇನ್ ಮೂಲಕವೇ ಇಳಿಸಲಾಗಿದೆ.
‘ಓಂ’ ನಾದ
ಬೃಹತ್ ಗಾತ್ರದ ಗಂಟೆ ಅಯೋಧ್ಯೆಯ ಶ್ರೀ ರಾಮ ಮಂದಿರ ದಲ್ಲಿ ರಾರಾಜಿಸಲಿದ್ದು, ಈ ಗಂಟೆ ಯನ್ನು ಬಾರಿಸಿದೊಡನೆ ‘ಓಂಕಾರ’ ನಾದದ ‘ಓಂ’ ಎಂಬ ನಾದ ಹೊರಹೊಮ್ಮುತ್ತದೆ. ಈ ಒಂದು ನೂತನ ತಂತ್ರಜ್ಞಾನವನ್ನು ಕಲಾವಿದರು ಗಂಟೆಯಲ್ಲಿ ಅಳವಡಿಸಿ ದ್ದಾರೆ. ವಿಶೇಷವೆಂದರೆ ಈ ‘ಓಂಕಾರ’ನಾದ ಸುತ್ತಲಿನ ನಾಲ್ಕು ಕಿಲೋಮಿಟರ್‌ವರೆಗೆ ಮೊಳಗಲಿದೆ. ಭವ್ಯ ರಾಮ ಮಂದಿರ ನಿರ್ಮಾಣ ಪೂರ್ಣಗೊಂಡ ಬಳಿಕ ಮಂದಿರಕ್ಕೆ ತೆರಳುವ ಭಕ್ತರಿಗೆ ಈ ನಾದ ಸ್ವರದ ಆನಂದ ಕಿವಿ ತುಂಬಿಸಿ ಕೊಳ್ಳಬಹುದಾಗಿದೆ.
- ಸಂತೋಷ್