ಕುಶಾಲನಗರ, ಫೆ. ೯: ಕುಶಾಲನಗರ ಬೈಚನಹಳ್ಳಿ ಯೋಗಾನಂದ ಬಡಾವಣೆಯ ಶ್ರೀ ಮುತ್ತಪ್ಪ ದೇವಾಲಯದಲ್ಲಿ ತಾ. ೧೧ ರಿಂದ ಎರಡು ದಿನಗಳ ಕಾಲ ತೆರೆ ಮಹೋತ್ಸವ ನಡೆಯಲಿದೆ.
ಶ್ರೀ ಮುತ್ತಪ್ಪ ಸೇವಾ ಟ್ರಸ್ಟ್ ಆಶ್ರಯದಲ್ಲಿ ತಾ. ೧೧ ರಂದು ಬೆಳಿಗ್ಗೆ ೫.೩೦ಕ್ಕೆ ಗಣಪತಿ ಹೋಮ, ೧೦.೩೦ಕ್ಕೆ ಧ್ವಜಾರೋಹಣ, ಮಧ್ಯಾಹ್ನ ೨ ಗಂಟೆಗೆ ಮುತ್ತಪ್ಪನ ಮಲೈ ಇರಕ್ಕಲ್, ಸಂಜೆ ೪ ಗಂಟೆಗೆ ಮುತ್ತಪ್ಪನ ವೆಳ್ಳಾಟಂ, ಸಂಜೆ ೫ ಗಂಟೆಗೆ ತಾಲಪೊಲಿ, ರಾತ್ರಿ ೮ ಗಂಟೆಗೆ ಸಿಡಿಮದ್ದು ಪ್ರದರ್ಶನ, ೮.೩೦ ಅನ್ನದಾನ, ೯ ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ೧೧ ಗಂಟೆಗೆ ಕಳಿಗ ಪಾಟು, ರಾತ್ರಿ ೧೨ ಗಂಟೆಗೆ ಕಲಶ ಆಗಮನವಾಗಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾ. ೧೨ ರಂದು ಬೆಳಿಗ್ಗೆ ೫ ಗಂಟೆಗೆ ತಿರುವಪ್ಪನ, ಮಧ್ಯಾಹ್ನ ೧೨ ಗಂಟೆಗೆ ಅನ್ನದಾನ ಕಾರ್ಯಕ್ರಮ ನಡೆಯಲಿದೆ.