(ಕಾಯಪಂಡ ಶಶಿ ಸೋಮಯ್ಯ)
ಮಡಿಕೇರಿ, ಫೆ. ೮: ಶಿಕ್ಷಣ ಇಲಾಖೆಯು ರೂಪಿಸಿರುವ ಹೊಸತೊಂದು ಕಾರ್ಯಕ್ರಮವಿದು... ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ೨೦೨೨-೨೩ನೇ ಶೈಕ್ಷಣಿಕ ವರ್ಷದಲ್ಲಿ ಜಾರಿಗೆ ತಂದಿರುವ ಕಲಿಕಾ ಹಬ್ಬ ಎಂಬ ಹೆಸರಿನ ಹೊಸ ಪರಿಕಲ್ಪನೆಯ ಕಾರ್ಯಕ್ರಮ ಜಿಲ್ಲಾಮಟ್ಟದಲ್ಲಿ ತಾ. ೧೩ ರಿಂದ ೧೫ರ ವರೆಗೆ ಮೂರ್ನಾಡುವಿನಲ್ಲಿ ಆಯೋಜನೆಗೊಳ್ಳುತ್ತಿದೆ.
ಈ ಕಾರ್ಯಕ್ರಮದ ಯಶಸ್ಸಿಗೆ ಶಿಕ್ಷಣ ಇಲಾಖೆಯು ಅಗತ್ಯ ಸಿದ್ಧತೆಗಳನ್ನು ನಡೆಸುತ್ತಿದ್ದು, ಮೂರು ದಿನಗಳ ಕಾಲ ಮೂರ್ನಾಡುವಿನ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಚಿಣ್ಣರ ಕಲರವ ಮೂಡಿಬರಲಿದೆ.
ಕೋವಿಡ್-೧೯ರ ಸಾಂಕ್ರಾಮಿಕ ಭೀತಿಯ ಪರಿಣಾಮದಿಂದಾಗಿ ವಿದ್ಯಾರ್ಥಿಗಳಲ್ಲಿ ಉಂಟಾದ ಕಲಿಕಾ ಕೊರತೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ ಎಂಬAತೆ ಜಾರಿಗೆ ತಂದಿರುವುದೇ ಈ ಕಲಿಕಾ ಹಬ್ಬ ಎಂಬ ಯೋಜನೆಯಾಗಿದೆ. ೨೦೨೨-೨೩ನೇ ಶೈಕ್ಷಣಿಕ ವರ್ಷವನ್ನು ಕಲಿಕಾ ಚೇತರಿಕೆಯ ವರ್ಷವೆಂದು ಘೋಷಿಸಲಾಗಿದೆ. ಇದರಂತೆ ಪ್ರತಿ ವಿದ್ಯಾರ್ಥಿಯು ಹಿಂದಿನ ಎರಡು ವರ್ಷಗಳ ಮಹತ್ವದ ಹಾಗೂ ಮುಂದುವರಿಯುವ ಕಲಿಕಾ ಫಲಗಳನ್ನು ಮತ್ತು ಸದರಿ ವರ್ಷದ ಮಹತ್ವದ ಮುಂದುವರಿಕೆಯ ಭಾಗವಾಗಿ ವಿವಿಧ ಚಟುವಟಿಕೆಗಳ ಆಧಾರಿತವಾಗಿ ‘ಕಲಿಕಾ ಹಬ್ಬ’ವನ್ನು ರಾಜ್ಯಾದ್ಯಂತ ವಿವಿಧ ಹಂತಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಮಕ್ಕಳು ಬಾಯಿ ಪಾಠ ಮಾಡುವ ಶಿಕ್ಷಣವನ್ನು ಕೈಬಿಟ್ಟು ಅನ್ವಯಿಕ, ವೈಜ್ಞಾನಿಕ ವಿಮರ್ಶಾತ್ಮಕವಾಗಿ ಯೋಚಿಸುವ ಶಿಕ್ಷಣವನ್ನು ನೀಡಬೇಕಾಗಿದೆ. ಕಲಿಕೆ ಸಂತೋಷದಾಯಕದೊAದಿಗೆ ಜೀವನ ಕೌಶಲ್ಯವನ್ನು ಬೆಳೆಸಬೇಕಾಗಿದೆ ಎಂಬುದು ರಾಷ್ಟಿçÃಯ ಶಿಕ್ಷಣ ನೀತಿಯ ಮುಖ್ಯ ಆಶಯಗಳಲ್ಲೂ ಒಂದಾಗಿದ್ದು, ಇದರಂತೆ ಈ ಕಲಿಕಾ ಹಬ್ಬವನ್ನು ಆಯೋಜಿಸಲಾಗುತ್ತಿದೆ.
೪ ರಿಂದ ೯ನೇ ತರಗತಿಯವರೆಗಿನ ಎಲ್ಲಾ ಮಕ್ಕಳು ಇದರಲ್ಲಿ ಭಾಗವಹಿಸಬೇಕೆಂಬುದು ಪರಿಕಲ್ಪನೆಯಾಗಿದ್ದು,
(ಮೊದಲ ಪುಟದಿಂದ) ಈಗಾಗಲೇ ಜಿಲ್ಲೆಯಲ್ಲಿ ವಿವಿಧ ಕ್ಲಸ್ಟರ್ ಮಟ್ಟದಲ್ಲಿ ಆಯಾ ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳನ್ನು ಒಳಗೊಂಡAತೆ ಈ ಕಾರ್ಯಕ್ರಮವನ್ನು ಪೂರ್ಣಗೊಳಿಸಲಾಗಿದೆ. ಇದೀಗ ಜಿಲ್ಲಾಮಟ್ಟದ ಕಲಿಕಾ ಹಬ್ಬಕ್ಕೆ ವೇದಿಕೆ ಸಿದ್ಧವಾಗಿದೆ. ಮೂರ್ನಾಡು ಮಾದರಿ ಪ್ರಾಥಮಿಕ ಶಾಲೆಯನ್ನು ಇದಕ್ಕಾಗಿ ಆಯ್ಕೆ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಮೂರ್ನಾಡು ಶಾಲೆಯ ೧೫೦ ವಿದ್ಯಾರ್ಥಿಗಳು (ಆತಿಥೇಯ) ಸೇರಿದಂತೆ ಮಡಿಕೇರಿ, ವೀರಾಜಪೇಟೆ ಹಾಗೂ ಸೋಮವಾರಪೇಟೆ ತಾಲೂಕಿನ ತಲಾ ೫೦ ವಿದ್ಯಾರ್ಥಿಗಳು ಸೇರಿ ಒಟ್ಟು ೩೦೦ ವಿದ್ಯಾರ್ಥಿಗಳು (೧೫೦ ಬಾಲಕರು-೧೫೦ ಬಾಲಕಿಯರು) ಈ ಜಿಲ್ಲಾಮಟ್ಟದ ಹಬ್ಬದಲ್ಲಿ ಭಾಗವಹಿಸಲಿದ್ದಾರೆ. ಕ್ಲಸ್ಟರ್ ಮಟ್ಟದಲ್ಲಿ ಭಾಗವಹಿಸಿದ ಮಕ್ಕಳನ್ನು ಹೊರತುಪಡಿಸಿ ಈ ೧೫೦ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ.
ವಿಶೇಷತೆ: ಮೂರ್ನಾಡು ಶಾಲೆಯ ಆತಿಥೇಯ ೧೫೦ ಮಕ್ಕಳೊಂದಿಗೆ ಜಿಲ್ಲೆಯ ಇತರೆಡೆಯಿಂದ ಆಯ್ಕೆಯಾಗಿರುವ ೧೫೦ ಮಕ್ಕಳು ಬೆರೆಯುತ್ತಾರೆ. ಮೂರು ದಿನಗಳಲ್ಲಿ ಎರಡು ದಿನ ರಾತ್ರಿ ಒಬ್ಬ ವಿದ್ಯಾರ್ಥಿ, ಆತಿಥೇಯ ಶಾಲೆಯ ಒಬ್ಬ ವಿದ್ಯಾರ್ಥಿಯೊಂದಿಗೆ ಅವರ ಮನೆಗೆ ತೆರಳಿ ತಂಗುವುದು ವಿಶೇಷತೆಯಾಗಿದೆ. ಇದಕ್ಕಾಗಿ ಈಗಾಗಲೇ ಸಿದ್ಧತೆ ನಡೆದಿದ್ದು, ಪ್ರತಿ ವಿದ್ಯಾರ್ಥಿಗೆ ಅವರ ಜೋಡಿಯನ್ನು (ಸಹಪಾಠಿ) ಪರಿಚಯಿಸಲಾಗಿದೆ. ಪರಸ್ಪರ ದೂರವಾಣಿ ಸಂಪರ್ಕದ ಮೂಲಕ ಬಾಲಕರು-ಬಾಲಕಿಯರು ಪ್ರತ್ಯೇಕವಾಗಿ ಈಗಾಗಲೇ ಸ್ನೇಹಿತರುಗಳಾಗಿದ್ದಾರೆ ಎಂದು ಕಾರ್ಯಕ್ರಮದ ನೋಡಲ್ ಅಧಿಕಾರಿ ಬಿಂದು ಅವರು ಮಾಹಿತಿ ನೀಡಿದ್ದಾರೆ. ಮೂರ್ನಾಡು ಶಾಲೆಯವರು ಇದರ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ.
ಜಿಲ್ಲಾಮಟ್ಟದ ಕಾರ್ಯಕ್ರಮಕ್ಕಾಗಿ ಕಲಿಕಾ ಹಬ್ಬದ ತರಬೇತಿ ಪಡೆದಿರುವ ಶಿಕ್ಷಕರು ತಾ. ೯ ರಿಂದಲೇ (ಇಂದಿನಿAದ) ಮೂರ್ನಾಡುವಿನಲ್ಲಿ ಪೂರ್ವ ತಯಾರಿ ನಡೆಸಲಿದ್ದಾರೆ.
೩೦೦ ವಿದ್ಯಾರ್ಥಿಗಳಿರುವುದರಿಂದ ನಡೆಸಬೇಕಾಗಿರುವ ನಾಲ್ಕು ನಿಗದಿತ ಕಾರ್ನರ್‌ನ ಚಟುವಟಿಕೆಯನ್ನು ೮ ಕಾರ್ನರ್‌ಗಳಾಗಿ ಆಯೋಜಿಸಲು ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾಮಟ್ಟದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸುಮಾರು ೭೫ ಶಿಕ್ಷಕರುಗಳು ಪಾಲ್ಗೊಳ್ಳಲಿದ್ದಾರೆ ಎಂದು ಡಿಡಿಪಿಐ ರಂಗಧಾಮಯ್ಯ ಅವರು ಮಾಹಿತಿಯಿತ್ತಿದ್ದಾರೆ.