ಮಡಿಕೇರಿ, ಫೆ. ೮ : ಮಾನವಸಂಪನ್ಮೂಲ ಇಲಾಖೆಯ ಅಡಿಯಲ್ಲಿ ನಡೆಯುವ ಗಾಳಿಬೀಡು ಜವಾಹರ ನವೋದಯ ವಿದ್ಯಾಲಯದಲ್ಲಿ ೨೦೨೩-೨೪ ನೇ ಸಾಲಿಗೆ ೬ನೇ ತರಗತಿಗೆ ಪ್ರವೇಶ ಪಡೆಯಲು ಬಯಸುವ ವಿದ್ಯಾರ್ಥಿಗಳಿಂದ ಆನ್‌ಲೈನ್ ಅಜಿಯನ್ನು ಈಗಾಗಲೇ ಆಹ್ವಾನಿಸಿದ್ದು ಅರ್ಜಿ ಸಲ್ಲಿಸುವ ದಿನಾಂಕವನ್ನು ತಾ. ೧೫ ರವರೆಗೆ ವಿಸ್ತರಿಸಲಾಗಿದೆ.
ಅರ್ಹ ಮತ್ತು ಆಸಕ್ತ ವಿದ್ಯಾರ್ಥಿಗಳು ಉಚಿತವಾಗಿ ಅರ್ಜಿ ಸಲ್ಲಿಸಬಹುದಾಗಿದೆ. ವಿದ್ಯಾರ್ಥಿಗಳು hಣಣಠಿs://ಟಿಚಿvoಜಚಿಥಿಚಿ.gov.iಟಿ oಡಿ hಣಣಠಿs://ಛಿbseiಣems.ಡಿಛಿiಟ.gov.iಟಿ/ಟಿvs ಗಳಲ್ಲಿ ಸೂಕ್ತ ವಿವರ ಮತ್ತು ದಾಖಲೆಗಳನ್ನು ಅಪ್‌ಲೋಡ್ ಮಾಡಬಹುದಾಗಿದೆ. ಈಗಾಗಲೇ ಅರ್ಜಿ ಸಲ್ಲಿಸಿರುವವರು ಮತ್ತು ೧೫ ಫೆಬ್ರುವರಿ ಒಳಗೆ ಅರ್ಜಿ ಸಲ್ಲಿಸಿದವರಿಗೆ (ಲಿಂಗ, ಜಾತಿ, ಪರೀಕ್ಷಾ ಮಾಧ್ಯಮ, ಅಂಗವೈಕಲ್ಯ ಹಾಗೂ ನಗರ/ಹಳ್ಳಿ ಮುಂತಾದ ಕೆಲವು ವಿಭಾಗಗಳಲ್ಲಿ) ಏನಾದರೂ ತಿದ್ದುಪಡಿ ಮಾಡಲು ಇಚ್ಛಿಸಿದಲ್ಲಿ ಅಂಥವರಿಗೆ ಅದೇ ವೆಬ್‌ಸೈಟ್‌ನಲ್ಲಿ ತಾ. ೧೬ ಮತ್ತು ೧೭ ರಂದು ಅವಕಾಶ ಕಲ್ಪಿಸಲಾಗಿದೆ. ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳುವಂತೆ ಗಾಳಿಬೀಡು ಜವಾಹರ ನವೋದಯ ವಿದ್ಯಾಲಯದ ಪ್ರಾಂಶುಪಾಲರು ತಿಳಿಸಿದ್ದಾರೆ.