ಮಡಿಕೇರಿ, ಫೆ. ೮: ಮಾದಾಪುರದ ಜಂಬೂರು ಬಾಣೆಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಗ್ರಾಮಾಭಿವೃದ್ಧಿ ಯುವಕ ಸಂಘದ ರಜತ ಮಹೋತ್ಸವ ಹಾಗೂ ಫೀ.ಮಾ. ಕಾರ್ಯಪ್ಪ ಜನ್ಮದಿನದ ಅಂಗವಾಗಿ ಸಾಂಸ್ಕೃತಿಕ ಹಾಗೂ ಕ್ರೀಡಾಕೂಟ ಆಯೋಜನೆ ಮಾಡಲಾಗಿದೆ ಎಂದು ಸಂಘದ ಪ್ರಮುಖರು ಮಾಹಿತಿ ನೀಡಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ನಿರ್ದೇಶಕ ಎಂ.ಎ. ಮಜೀದ್, ತಾ. ೧೧ ಹಾಗೂ ೧೨ ರಂದು ಕಾರ್ಯಕ್ರಮ ನಡೆಯಲಿದ್ದು, ಮೊದಲ ದಿನ ಬೆಳಿಗ್ಗೆ ೯ ಗಂಟೆಗೆ ಮಾದಾಪುರದ ಮುಖ್ಯ ಬೀದಿಯಲ್ಲಿ ಮೆರವಣಿಗೆ ನಡೆದು ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಲಿದ್ದಾರೆ. ಅಂದು ವಿವಿಧ ವಿಭಾಗಗಳಲ್ಲಿ ಕಪ್ಪೆ ಓಟ, ವಿವಿಧ ಹಂತದ ಓಟದ ಸ್ಪರ್ಧೆ, ಲೆಮೆನ್ ಮತ್ತು ಸ್ಪೂನ್, ಮೂರುಕಾಲು ಓಟ ನಡೆಯಲಿದೆ. ಜೊತೆಗೆ ಪುರುಷರಿಗೆ ವಾಲಿಬಾಲ್, ಸ್ಲೋ ಬೈಕ್ ರೇಸ್, ಮಹಿಳೆಯರಿಗೆ ಥ್ರೋಬಾಲ್, ಪಾಸಿಂಗ್ ದ ಬಾಲ್, ೧೬ ವರ್ಷದೊಳಗಿನ ಮಕ್ಕಳಿಗೆ ಫುಟ್ಬಾಲ್ ಪಂದ್ಯಾಟ, ಸ್ಲೋ ಸೈಕಲ್ ರೇಸ್, ಸಂಜೆ ೬ ಗಂಟೆಗೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ತಾ. ೧೨ ರಂದು ಸಂಜೆ ೪ ಗಂಟೆಯಿAದ ರಸಮಂಜರಿ ಕಾರ್ಯಕ್ರಮ ಹಾಗೂ ಬಹುಮಾನ ವಿತರಣೆ ನಡೆಯಲಿದೆ ಎಂದು ವಿವರಿಸಿದರು.

ಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಕೆ.ಜೆ. ಅಂತೋಣಿ, ಉಪಾಧ್ಯಕ್ಷ ಬಿ.ಕೆ. ಸತೀಶ್ ಕುಮಾರ್, ನಿರ್ದೇಶಕ ಪಿ.ಬಿ. ಉದಯ್ ಕುಮಾರ್, ಸದಸ್ಯರುಗಳಾದ ಪಿ.ಆರ್. ಮಧು, ಕ್ಷೇವಿಯರ್ ಇದ್ದರು.