ಮಡಿಕೇರಿ, ಫೆ. ೮ : ಭಾರತೀಯ ಕ್ರೀಡಾ ಪ್ರಾಧಿಕಾರ ಹಾಗೂ ರಾಜ್ಯ ಕೇಲೋ ಇಂಡಿಯಾ ಆಶ್ರಯದಲ್ಲಿ ಇಲ್ಲಿನ ಸಾಯಿ ಟರ್ಫ್ ಮೈದಾನದಲ್ಲಿ ನಡೆದ ದಕ್ಷಿಣ ವಲಯ ಅಂತರ ಸಾಯಿ ಬಾಲಕಿಯರ ಹಾಕಿ ಪಂದ್ಯಾಟ ದಲ್ಲಿ ಮಡಿಕೇರಿ ಸಾಯಿ ಎ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.
ಇಂದು ನಡೆದ ಫೈನಲ್ ಪಂದ್ಯಾವಳಿಯಲ್ಲಿ ಮಡಿಕೇರಿ ಎ ತಂಡ ಮಡಿಕೇರಿ ಬಿ ತಂಡವನ್ನು ೩-೦ ಗೋಲುಗಳಿಂದ ಮಣಿಸಿ ಚಾಂಪಿಯನ್ ಪಟ್ಟ ಗಳಿಸಿತು. ಮಡಿಕೇರಿ ಬಿ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ವಿಜೇತ ತಂಡಗಳಿಗೆ ನಗದು ಬಹುಮಾನ ವಿತರಣೆ ಮಾಡಲಾಯಿತು.
ಪಂದ್ಯಾವಳಿಯಲ್ಲಿ ಭಾಗವಹಿಸಿದ ಐದು ತಂಡಗಳ ಆಟಗಾರರ ಪೈಕಿ ಉತ್ತಮ ಆಟ ಪ್ರದರ್ಶಿಸಿದ ಆಟಗಾರ್ತಿಯರನ್ನು ಆಯ್ಕೆ ಮಾಡಿ ಒಂದು ತಂಡವನ್ನಾಗಿ ರಚಿಸಿ ದಕ್ಷಿಣ ವಲಯದಿಂದ ರಾಷ್ಟçಮಟ್ಟದ ಪಂದ್ಯಾವಳಿಗೆ ಕಳುಹಿಸಿ ಕೊಡಲಾಗುತ್ತದೆ.
(ಮೊದಲ ಪುಟದಿಂದ)
ಬಹುಮಾನ ವಿತರಣೆ
ಸಂಜೆ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅತಿಥಿಗಳು ಬಹುಮಾನ ವಿತರಣೆ ಮಾಡಿದರು.
ಸಾಯಿ ಕೇಂದ್ರದ ಆಡಳಿತಾಧಿಕಾರಿ ಮಿನಿ ಉನ್ನಿರಾಜ್, ತರಬೇತು ಗಾರ್ತಿಯರಾದ ಮಡಿಕೇರಿ ಯ ಕೋಮಲ್, ಹೈದರಾಬಾದ್‌ನ ಗ್ಲೋರಿಯಾ, ಕೊಲ್ಲಂನ ರಾಧಾಮಣಿ, ಮಡಿಕೇರಿ ಸಾಯಿ ಕೇಂದ್ರದ ಲೆಕ್ಕಾಧಿಕಾರಿ ರಾಣಿ ಕರುಂಬಯ್ಯ, ಸಿಬ್ಬಂದಿಗಳಾದ ಬೋಜಪ್ಪ, ಈಶ್ವರ್, ಇತರರಿದ್ದರು.
ಮಡಿಕೇರಿ ಸಾಯಿ ಕೇಂದ್ರದ ಆಟಗಾರ್ತಿಯರಾದ ಬೊಳ್ಳಮ್ಮ ನಿರೂಪಿಸಿದರೆ, ಹೇತಲ್ ಗೋಸ್ವಾಮಿ ಸ್ವಾಗತಿಸಿದರು. ಲಿಖಿತ ಬಹುಮಾನ ವಿತರಣಾ ಕಾರ್ಯ ನಡೆಸಿಕೊಟ್ಟರು. ಅಕ್ಷತಾ ವಂದಿಸಿದರು. ಹಾಕಿ ಕೂರ್ಗ್ನ ತೀರ್ಪುಗಾರರಾದ ಕರವಂಡ ಅಪ್ಪಣ್ಣ, ಕುಪ್ಪಂಡ ದಿಲನ್, ಚಂದಪAಡ ಆಕಾಶ್ ತೀರ್ಪು ಗಾರರಾಗಿ ಕಾರ್ಯ ನಿರ್ವಹಿಸಿದರು.