ಸೋಮವಾರಪೇಟೆ, ಫೆ. ೮ : ತಾಲ್ಲೂಕು ೮ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ತಾ.೧೧ರಂದು ಗೌಡಳ್ಳಿ ಬಿ.ಜಿ.ಎಸ್. ಶಾಲಾ ಮೈದಾನದಲ್ಲಿ ಅರ್ಥಪೂರ್ಣವಾಗಿ ಆಚರಿಸಲು ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಸಮ್ಮೇಳನದ ಪ್ರಚಾರ ಸಮಿತಿ ಅಧ್ಯಕ್ಷ ಹಿರಿಕರ ರವಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಕ.ಸಾ.ಪ. ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್, ತಾಲೂಕು ಅಧ್ಯಕ್ಷ ಎಸ್.ಡಿ. ವಿಜೇತ್ ನೇತೃತ್ವದಲ್ಲಿ, ವಿವಿಧ ಸಮಿತಿಗಳ ಪದಾಧಿಕಾರಿಗಳು ಕನ್ನಡ ಹಬ್ಬವನ್ನು ಯಶಸ್ವಿಗೊಳಿಸಲು ಸಿದ್ಧತೆಯಲ್ಲಿ ತೊಡಗಿಕೊಂಡಿದ್ದಾರೆ ಎಂದರು.
ತಾ.೧೧ರಂದು ಬೆಳಿಗ್ಗೆ ೭.೩೦ಕ್ಕೆ ದೊಡ್ಡಮಳ್ತೆ ಶ್ರೀ ಹೊನ್ನಮ್ಮನ ಕೆರೆಯಿಂದ ಬೈಕ್ ಜಾಥಾ ಹೊರಡಲಿದೆ. ಬೆಳಿಗ್ಗೆ ೮ ಗಂಟೆಗೆ ಸೋಮವಾರಪೇಟೆ ತಹಶೀಲ್ದಾರ್ ಎಸ್.ಎನ್. ನರಗುಂದ್ ಅವರು ಬಿಜಿಎಸ್ ಶಾಲಾ ಆವರಣದಲ್ಲಿ ರಾಷ್ಟç ಧ್ವಜಾರೋಹಣ ನೆರವೇರಿಸಲಿದ್ದಾರೆ. ಕ.ಸಾ.ಪ. ಜಿಲ್ಲಾಧ್ಯಕ್ಷ ಎಂ. ಪಿ. ಕೇಶವ ಕಾಮತ್, ಕನ್ನಡ ಧ್ಜಜ ಹಾಗೂ ತಾಲೂಕು ಅಧ್ಯಕ್ಷ ಎಸ್.ಡಿ. ವಿಜೇತ್ ಕನ್ನಡ ಪರಿಷತ್ ಧ್ವಜಾರೋಹಣ ನೆರವೇರಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಬೀಟಿಕಟ್ಟೆ ಕೆನರಾ ಬ್ಯಾಂಕ್ ಜಂಕ್ಷನ್‌ನಿAದ ೯ ಗಂಟೆಗೆ ಸಮ್ಮೇಳನಾಧ್ಯಕ್ಷರಾದ ಶ.ಗ. ನಯನತಾರಾ ಅವರನ್ನು ಮಂಗಳವಾದ್ಯ, ಪೂರ್ಣಕುಂಭ, ಕಲಾ ತಂಡಗಳು, ಸ್ತಬ್ಧಚಿತ್ರಗಳೊಂದಿಗೆ ಮೆರವಣಿಗೆಯೊಂದಿಗೆ ಕರೆತರಲಾಗುವುದು. ಕನ್ನಡಾಭಿಮಾನಿಗಳು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.
೯ ಗಂಟೆಗೆ ಗಣ್ಯರ ನೆನಪಿನ ವಿವಿಧ ಧ್ವಾರಗಳ ಉದ್ಘಾಟನೆ ನಡೆಯಲಿದೆ. ಬೆಳ್ಳಿಯಪ್ಪಗೌಡ, ಹಾರಳ್ಳಿ ಶ್ರೀ ಚನ್ನಕೇಶವ ಸ್ವಾಮಿ, ಹಿರಿಕರ ದಿ.ಜಿ.ಎ. ಸುಬ್ಬೇಗೌಡ, ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್, ಶ್ರೀ ಚೌಡೇಶ್ವರಿ ಯುವಕ ಸಂಘದ, ದಿ. ವೆಂಕಟರಮಣಾಚಾರ್ಯ, ಪುಲಿಗೇರಿ ಬಸವೇಶ್ವರ ಸ್ವಾಮಿ,
ದಿ. ಗುರಪ್ಪ ಮಾಸ್ಟರ್, ದೊಡ್ಡಮಳ್ತೆ ಶ್ರೀ ಹೊನ್ನಮ್ಮ ತಾಯಿ ಪುಣ್ಯಕ್ಷೇತ್ರ, ಹಣಕೋಡು ಶ್ರೀ ಬಸವೇಶ್ವರ ಸ್ವಾಮಿ, ಕೂಗೇಕೋಡಿ ಕನ್ನಂಬಾಡಿಯಮ್ಮ ನೆನಪಿನ ಧ್ವಾರಗಳನ್ನು ಗಣ್ಯರು ಉದ್ಘಾಟಿಸಲಿದ್ದಾರೆ.
ದಿ. ವಿ.ಟಿ. ಈರಪ್ಪ ಅವರ ನೆನಪಿನ ಮುಖ್ಯದ್ವಾರ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ನೆನಪಿನ ಧ್ವಾರ, ಶ್ರೀ ಬಾಲಗಂಗಾಧರನಾಥ ಸ್ವಾಮಿ ಮುಖ್ಯ ವೇದಿಕೆಯನ್ನು ಗಣ್ಯರು ಉದ್ಘಾಟಿಸಲಿದ್ದಾರೆ.
೧೧ ಗಂಟೆಗೆ ನಡೆಯುವ ಸಮ್ಮೇಳನವನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಉದ್ಘಾಟಿಸಲಿದ್ದಾರೆ. ಆದಿಚುಂಚನಗಿರಿ ಶಾಖಾ ಮಠದ
ಶ್ರೀ ಶಂಭುನಾಥ ಸ್ವಾಮೀಜಿ ದಿವ್ಯಸಾನಿಧ್ಯ ವಹಿಸಲಿದ್ದಾರೆ. ಮೈಸೂರು ರತ್ನಪುರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಡಾ. ಮಹದೇವಸ್ವಾಮಿ ಮುಖ್ಯ ಭಾಷಣ ಮಾಡಲಿದ್ದು, ಮಾಜಿ ಸಚಿವ ಬಿ.ಎ. ಜೀವಿಜಯ ಅವರು ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ.
ಬೇಸೂರು ಮೋಹನ್ ಪಾಳೇಗಾರ್ ಅವರ ‘ವಲಸೆ ಹಕ್ಕಿಯ ಹಾಡು ಪಾಡು’ ಹಾಗೂ ಜಲಕಾಳಪ್ಪ ಅವರ ‘ಭರವಸೆಯ ಬೆಳಕು’ ಪುಸ್ತಕಗಳನ್ನು ಕ.ಸಾ.ಪ. ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ. ರಮೇಶ್ ಬಿಡುಗಡೆ ಮಾಡಲಿದ್ದಾರೆ. ಸಮ್ಮೇಳನಾಧ್ಯಕ್ಷರಾದ ಶ.ಗ. ನಯನತಾರ ಸಮ್ಮೇಳನಾ ಭಾಷಣ ಮಾಡಲಿದ್ದಾರೆ. ಗೌಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಲ್ಲಿಕಾ, ದೊಡ್ಡಮಳ್ತೆ ಗ್ರಾ.ಪಂ. ಅಧ್ಯಕ್ಷೆ
ಕೆ.ಎಂ. ಬಿಂದು ಮತ್ತಿತರರು ಭಾಗವಹಿಸಲಿದ್ದಾರೆ.
ಮಧ್ಯಾಹ್ನ ೧.೩೦ ರಿಂದ ೨.೩೦ರ ತನಕ ಗೀತಾಗಾಯನ ಸ್ಪರ್ಧೆ ನಡೆಯಲಿದೆ. ೩ ಗಂಟೆಗೆ ವಿಚಾರಗೋಷ್ಠಿ ಪ್ರಾರಂಭವಾಗಲಿದೆ. ‘ಸಾಹಿತ್ಯ, ಕಲೆ, ‘ಸಾಂಸ್ಕೃತಿಕ ಕ್ಷೇತ್ರಕ್ಕೆ ಸೋಮವಾರಪೇಟೆ ತಾಲ್ಲೂಕಿನ ಕೊಡುಗೆ’ ವಿಷಯದ ಬಗ್ಗೆ ಸೋಮವಾರಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ತಿಲೋತ್ತಮೆ ನಂದಕುಮಾರ್, ‘ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಸಾಮರಸ್ಯ’ ವಿಷಯದ ಕುರಿತು ಶನಿವಾರಸಂತೆ ವಿಘ್ನೇಶ್ವರ ಪ್ರೌಢಶಾಲೆಯ ಶಿಕ್ಷಕ
ಕೆ.ಪಿ. ಜಯಕುಮಾರ್ ಉಪನ್ಯಾಸ ನೀಡಲಿದ್ದಾರೆ.
೪ ಗಂಟೆಗೆ ಕವಿಗೋಷ್ಠಿ ಹಾಗೂ ಸಂಜೆ ೪.೩೦ಕ್ಕೆ ಬಹಿರಂಗ ಅಧಿವೇಶನ ನಡೆಯಲಿದೆ. ಕ.ಸಾ.ಪ. ತಾಲೂಕು ಗೌರವ ಕಾರ್ಯದರ್ಶಿ ಎ.ಪಿ. ವೀರರಾಜು ನಿರ್ಣಯ ಮಂಡಿಸಲಿದ್ದಾರೆ. ಸಂಜೆ ೫ ಗಂಟೆಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಕೃಷಿ ಕ್ಷೇತ್ರದಲ್ಲಿ ಕೆರಹಳ್ಳಿ ಕೆ.ಎಂ.ಕಾAತರಾಜು, ಗೌಡಳ್ಳಿ ತಾಯಮ್ಮ, ಶಿಕ್ಷಣ ಕ್ಷೇತ್ರದಲ್ಲಿ ಕೊಡ್ಲಿಪೇಟೆ ಸತೀಶ್, ಗೌಡಳ್ಳಿ ಬಿ.ಬಿ. ದಿನೇಶ್, ಶಾಂತಳ್ಳಿ ಎಸ್.ವಿ. ವಿಠಲ, ಪತ್ರಿಕಾ ಕ್ಷೇತ್ರದಲ್ಲಿ ರವಿ ಹಿರಿಕರ, ನಾಟಿ ವೈದ್ಯೆ ಸಜ್ಜಳ್ಳಿ ಜೇನುಕುರುಬರ ಸೀತೆ, ಗುಡಿ ಕೈಗಾರಿಕೆ ಶನಿವಾರಸಂತೆ ಸುಶೀಲಾ ನಾಗರಾಜು, ಉತ್ತಮ ದಾದಿ ಹಿರಿಕರ ಗ್ರಾಮದ ಅಕ್ಕಮ್ಮ ಮುತ್ತಣ್ಣ, ಸಮಾಜ ಸೇವೆ ಗೌಡಳ್ಳಿ ಫ್ರಾನ್ಸಿಸ್ ಡಿಸೋಜ, ಸೋಮವಾರಪೇಟೆ ಎಚ್.ಎ. ನಾಗರಾಜ್, ಕಿಬ್ಬೆಟ್ಟದ ನಿವೃತ್ತ ಯೋಧ ಕೆ.ಕೆ. ವಿಜಯಕುಮಾರ್, ಕಲಾಕ್ಷೇತ್ರ ಕವಿತ ಪೀಟರ್, ಸಹಕಾರ ಕ್ಷೇತ್ರ ಕೊಡ್ಲಿಪೇಟೆ ತಮ್ಮಯ್ಯ, ರಕ್ಷಣಾ ಕ್ಷೇತ್ರದಲ್ಲಿ ನಿವೃತ್ತ ಡಿವೈಎಸ್‌ಪಿ ಕೂಡಕಂಡಿ ಎ. ಸೋಮಣ್ಣ ಅವರುಗಳನ್ನು ಸನ್ಮಾನ ಮಾಡಲಾಗುವುದು ಎಂದರು.
ಸAಜೆ ೫.೩೦ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಮೈಸೂರು ವಿಶ್ವವಿದ್ಯಾಲಯ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಕಾಳೇಗೌಡ ನಾಗವಾರ ಸಮಾರೋಪ ಭಾಷಣ ಮಾಡಲಿದ್ದಾರೆ. ಸಂಜೆ ೬.೩೦ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಕ.ಸಾ.ಪ. ತಾಲೂಕು ಅಧ್ಯಕ್ಷ ಎಸ್.ಡಿ. ವಿಜೇತ್, ಗೌರವ ಕಾರ್ಯದರ್ಶಿಗಳಾದ ಜ್ಯೋತಿ ಅರುಣ್, ಎ.ಪಿ. ವೀರರಾಜು, ಖಜಾಂಚಿ ಕೆ.ಪಿ. ದಿನೇಶ್ ಇದ್ದರು.