ಗೋಣಿಕೊಪ್ಪಲು, ಫೆ. ೭: ಕಳೆದ ಹಲವು ದಿನಗಳ ಹಿಂದೆ ಗೋಣಿಕೊಪ್ಪ ನಗರದ ಹೃದಯ ಭಾಗದಲ್ಲಿ ಬೇರು ಪೈಂಟ್ ಅಂಗಡಿಗೆ ಬೆಂಕಿ ಅವಘಡ ಸಂಭವಿಸಿದ್ದು ಒಂದು ಕೋಟಿಗೂ ಅಧಿಕ ನಷ್ಟ ಸಂಭವಿಸಿದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಹಾಗೂ ಪದಾಧಿಕಾರಿಗಳು, ವರ್ತಕ, ಇಮ್ತರಾಮ್‌ರವರನ್ನು ಭೇಟಿ ಮಾಡಿ ಘಟನೆ ಬಗ್ಗೆ ಮಾಹಿತಿ ಪಡೆದರು.
ಸ್ಥಳದಿಂದ ಸೆಸ್ಕ್ನ ಹಾಸನ ಜಿಲ್ಲೆಯ ಹಿರಿಯ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿದ ರೈತ ಸಂಘದ ಮನು ಸೋಮಯ್ಯ ಘಟನೆ ಬಗ್ಗೆ ಮಾಹಿತಿ ಒದಗಿಸಿ, ಇಲಾಖೆ ವತಿಯಿಂದ ನೊಂದ ವರ್ತಕನಿಗೆ ನ್ಯಾಯ ಒದಗಿಸಲು ಅಗತ್ಯ ಕ್ರಮ ಒದಗಿಸಬೇಕು. ಕೋಟ್ಯಂತರ ಬೆಲೆ ಬಾಳುವ ವಸ್ತುಗಳು ಬೆಂಕಿಗೆ ಆಹುತಿಯಾಗಿರುವುದರಿಂದ ಇವರ ಜೀವನ ನಿರ್ವಹಣೆ ಕಷ್ಟಕ್ಕೆ ಸಿಲುಕಿದೆ ಎಂದು ಗಮನ ಸೆಳೆದರು. ಇದಕ್ಕೆ ಉತ್ತರಿಸಿದ ಹಿರಿಯ ಅಧಿಕಾರಿಗಳು ಬೆಂಕಿಯ ಅನಾಹುತಕ್ಕೆ ಸಂಬAಧಪಟ್ಟAತೆ ತಾಲೂಕು ಮಟ್ಟದ ಅಧಿಕಾರಿಗಳಿಂದ ಲಿಖಿತ ರೂಪದಲ್ಲಿ ಮಾಹಿತಿಯನ್ನು ಪಡೆದಿದ್ದೇವೆ. ನ್ಯಾಯ ರೀತಿಯಲ್ಲಿ ಇಲಾಖೆ ವತಿಯಿಂದ ನೀಡಬಹುದಾದ ಪರಿಹಾರದ ಬಗ್ಗೆ ಕೆಲವೇ ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ಭರವಸೆ ನೀಡಿದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ, ಪದಾಧಿಕಾರಿಗಳಾದ ಪುಚ್ಚಿಮಾಡ ರಾಯ್ ಮಾದಪ್ಪ, ತೀತರಮಾಡ ರಾಜ ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.