ಪಾಲಿಬೆಟ್ಟ, ಫೆ. ೭ : ಭಾವೈಕ್ಯತೆಯ ಧಾರ್ಮಿಕ ಕೇಂದ್ರ ಎಂದೇ ಪ್ರಸಿದ್ಧಿಯಾಗಿರುವ ಪಾಲಿಬೆಟ್ಟ ಆರ್ಕಾಡ್ ಪಟ್ಟಾಣ್ ಬಾಬ ಶಾಹ್ ವಲಿಯವರ ಉರೂಸ್‌ಗೆ ಭಕ್ತ ಸಾಗರ ಹರಿದು ಬಂತು. ಸಮಾರೋಪ ಸಮಾರಂಭದ ಸರ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿದ ಧಾರ್ಮಿಕ ಮುಖಂಡರುಗಳು ಆಚಾರ-ವಿಚಾರ, ಸಂಸ್ಕೃತಿ-ಪರAಪರೆ ಹಿನ್ನೆಲೆಯುಳ್ಳ ಭಾರತÀದಲ್ಲಿ ಶಾಂತಿ ಸಹಬಾಳ್ವೆ ಸಹೋದರತ್ವದಿಂದ ಒಂದಾಗಿ ಜೀವನ ನಡೆಸುತ್ತಿದ್ದು ಯಾವುದೇ ಕಾರ್ಯಕ್ರಮಗಳಿದ್ದರು ನಾವೆಲ್ಲರೂ ಒಗ್ಗೂಡಿ ಮುನ್ನಡೆಯಬೇಕು. ಪ್ರತಿಯೊಬ್ಬರು ಧಾರ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ದರ್ಗಾ ಆವರಣದ ವೇದಿಕೆಯಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಕನ್ನಡ ಮಠದ ಮಠಾಧಿಕಾರಿ ಚನ್ನಬಸವ ದೇಶಿಕೇಂದ್ರ ಸ್ವಾಮಿ, ಪಾಲಿಬೆಟ್ಟ ಲೂರ್ಡ್ಸ್ ಚರ್ಚ್ ರ.ಫಾ. ಮರಿಯಾ ರಾಜ್ ಜಾರ್ಜ್, ಧಾರ್ಮಿಕ ಪಂಡಿತ ಕಕ್ಕಿಂಜೆ ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ, ಕೊಡಗು ಜಿಲ್ಲಾ ಖಾಝಿಗಳಾದ ಶಾದುಲಿ ಪೈಝಿ, ಎಂ.ಎA ಅಬ್ದುಲ್ ಪೈಝಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮೂಕೊಂಡ ವಿಜು ಸುಬ್ರಮಣಿ, ಕಸಾಪ ಜಿಲ್ಲಾಧ್ಯಕ್ಷ ಕೇಶವ ಕಾಮತ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಅಜಿತ್ ಕರುಂಬಯ್ಯ, ಜಮ್ಮ ಮಸೀದಿ ಕಮಿಟಿ ಅಧ್ಯಕ್ಷ ಪಿ.ಕೆ. ಇಸ್ಮಾಯಿಲ್ ಹಾಜಿ ಸೇರಿದಂತೆ ಧಾರ್ಮಿಕ ಪಂಡಿತರು, ಧರ್ಮಗುರುಗಳು, ಸಮಾಜ ಸೇವಕರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭಾಗವಹಿಸಲಿದ್ದರು.
ಉರೂಸ್ ಅಂಗವಾಗಿ ಅನ್ನಸಂತರ್ಪಣೆ ನಡೆಯಿತು.