ಗುಡ್ಡೆಹೊಸೂರು, ಫೆ. ೭: ಕುಶಾಲನಗರ ತಾಲೂಕು ಬಿಲ್ಲವ ಸಮಾಜದ ವಾರ್ಷಿಕ ಮಹಾಸಭೆ ಕುಶಾಲನಗರ ಕೊಡವ ಸಮಾಜ ಸಭಾಂಗಣದಲ್ಲಿ ಸಮಾಜದ ಅಧ್ಯಕ್ಷ ಹೆಚ್.ಬಿ. ರಮೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಭೆಯಲ್ಲಿ ಸಮಾಜದ ಏಳಿಗೆ ಮತ್ತು ಮುಂದಿನ ಕಾರ್ಯಚಟುವಟಿಕೆ, ಬಗ್ಗೆ ಸುದೀರ್ಘ ಚರ್ಚೆಗಳು ನಡೆಯಿತು.

ಈ ಸಂದರ್ಭ ಸಂಘದ ನೂತನ ಅಧ್ಯಕ್ಷರನ್ನು ಮತ್ತು ಆಡಳಿತ ಮಂಡಳಿಯನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಮಾದಪಟ್ಟಣ ಗ್ರಾಮದ ಮಾಜಿ ಸೈನಿಕ ಸುಧೀರ್ ಅವರನ್ನು ಆಯ್ಕೆ ಮಾಡಲಾಯಿತು. ಸಮಾಜದ ಮಾಜಿ ಅಧ್ಯಕ್ಷರು, ಮಾಜಿ ತಾ.ಪಂ. ಸದಸ್ಯ, ಮಾಜಿ ಅಧ್ಯಕ್ಷ ಸತೀಶ್ ಕುಂದರ್ ಹಾಗೂ ಇತರರು ಹಾಜರಿದ್ದರು.