ಮಡಿಕೇರಿ, ಫೆ. ೭: ಕೊಡಗು ಜಿಲ್ಲಾ ಬಂಟರ ಸಂಘದ ಟ್ರಸ್ಟ್ ವಿಚಾರಕ್ಕೆ ಸಂಬAಧಿಸಿದAತೆ ನ್ಯಾಯಾಲಯದಲ್ಲಿ ಮೊಕದ್ದಮೆ ಇದೆ. ಅಲ್ಲದೆ, ಯಾವದೇ ಸಭೆ-ಸಮಾರಂಭಗಳನ್ನು ನಡೆಸದಂತೆ ತಡೆಯಾಜ್ಞೆ ಇದ್ದರೂ ಕೂಡ ಅವುಗಳನ್ನು ಮರೆಮಾಚಿ ಬಂಟರ ಸಂಘದ ಹೆಸರಿನಲ್ಲಿ ಸಭೆ ನಡೆಸಿ ಅಧ್ಯಕ್ಷರು, ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಈ ಆಯ್ಕೆ ಅಕ್ರಮವಾಗಲಿದೆ ಎಂದು ವಕೀಲ ತಾವೇ ಕೊಡಗು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ಎಂದಿರುವ ಬಿ.ಆರ್.ರತ್ನಾಕರ ಶೆಟ್ಟಿ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು; ಕೊಡಗು ಜಿಲ್ಲಾ ಬಂಟರ ಸಂಘದ ವಿಚಾರಕ್ಕೆ ಸಂಬAಧಿಸಿದAತೆ ಸಭೆ ನಡೆಸಲು ಕೆಲವರು ನ್ಯಾಯಾಲಯದಲ್ಲಿ ಕೇವಿಯೆಟ್ ಸಲ್ಲಿಸಿದ್ದು, ಇದರ ಮೇಲೆ ತಡೆಯಾಜ್ಞೆ ಕೋರಿ ಬಂಟರ ಸಂಘದ ವತಿಯಿಂದ ವೀರಾಜಪೇಟೆ ನ್ಯಾಯಾಲಯದಲ್ಲಿ ಸಿವಿಲ್ ಮೊಕದ್ದಮೆ ಹೂಡಲಾಗಿದೆ. ನ್ಯಾಯಾಲಯವು ಈ ಸಂಬAಧ ಸಂಘದ ವಿಚಾರದಲ್ಲಿ ಯಾರೂ ಕೂಡ ಮೂಗು ತೂರಿಸದಂತೆ, ಯಾವದೇ ಸಭೆ, ಸಮಾರಂಭಗಳನ್ನು ನಡೆಸದಂತೆ ತುರ್ತು ನೋಟೀಸ್ ಜಾರಿ ಮಾಡಿದೆ. ನೋಟೀಸ್ಗೆ ಸಂಬAಧಿಸಿದAತೆ ಸಮನ್ಸ್ ಅನ್ನು ತಾ.೪ರಂದೇ ನ್ಯಾಯಾಲಯದ ಮೂಲಕ ಸಂಬAಧಿಸಿದವರಿಗೆ ತಲಪಿಸುವ ಸಂದರ್ಭ ಅವರುಗಳು ನೆಪ ಹೇಳಿ ತಲೆಮರೆಸಿಕೊಂಡಿದ್ದಾರೆ. ನಂತರ ತಾ.೫ರಂದು ಮಡಿಕೇರಿಯಲ್ಲಿ ಸಭೆ ನಡೆಸಿದ ಗುಂಪು ಸಂಘದ ಅಧ್ಯಕ್ಷರನ್ನು ಘೋಷಣೆ ಮಾಡಿದೆ ಎಂದೂ ಹೇಳಿದರು.
ಟ್ರಸ್ಟ್ ಮೇಲೆ ಮೊಕದ್ದಮೆ
ಬಂಟರ ಸಂಘಕ್ಕೆAದು ದಾನಿಗಳಾಗಿರುವ ಡಾ.ಪ್ರೇಮನಾಥ ಪೂಂಜ ಅವರು ೫೪ ಸೆಂಟ್ ಜಾಗ ನೀಡಿದ್ದಾರೆ. ಇದನ್ನು ಸಂಘದ ಮೂಲಕ ಟ್ರಸ್ಟ್ ರಚನೆ ಮಾಡಿ ಮುಂದಿನ ಯೋಜನೆ ಮಾಡಬೇಕಿತ್ತು. ಆದರೆ, ೨೦೧೨ರಲ್ಲಿ ಹತ್ತು ಮಂದಿಯ ಹೆಸರಿನಲ್ಲಿ ಟ್ರಸ್ಟ್ ಸ್ಥಾಪನೆ ಮಾಡಿ ಜಾಗವನ್ನು ಸ್ವಂತಕ್ಕೆ ಬಳಸಿಕೊಳ್ಳಲು ಕೆಲವರು ಪ್ರಯತ್ನಿಸಿದ್ದಾರೆ. ಅದೂ ಅಲ್ಲದೆ, ಟ್ರಸ್ಟ್ಗೆ ಯಾವದೇ ಕಚೇರಿಯಿಲ್ಲ, ಬೈಲಾದಲ್ಲಿರುವ ಯಾವದೇ ನಿಯಮಗಳು ಕಾರ್ಯಗತಗೊಳ್ಳದೆ, ಕೇವಲ ಕಾಗದಗಳಿಗೆ ಸೀಮಿತವಾಗಿದೆ. ಟ್ರಸ್ಟ್ನ ಅವಧಿ ಹತ್ತು ವರ್ಷಗಳಾಗಿದ್ದು, ಇದೀಗ ಹನ್ನೊಂದು ವರ್ಷ ಕಳೆದರೂ ಸಂಘಕ್ಕೆ ಹಸ್ತಾಂತರಿಸಿಲ್ಲ. ಹಾಗಾಗಿ ಟ್ರಸ್ಟ್ ಅನ್ನು ರದ್ದುಗೊಳಿಸುವಂತೆ ಕೋರಿ ಪ್ರೇಮನಾಥ ಪೂಂಜಾ ಅವರು ಉಚ್ಚ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದಾರೆ. ಇದನ್ನೆಲ್ಲ ಸಮುದಾಯ ಬಾಂಧವರಿAದ ಮರೆಮಾಚಿ ನೂತನ ಅಧ್ಯಕ್ಷರನ್ನು ಘೋಷಣೆ ಮಾಡಿದ್ದಾರೆ. ಹೀಗಿರುವಾಗ ಈ ಪ್ರಕರಣಗಳು ಇತ್ಯರ್ಥವಾಗದೇ ಇರುವದರಿಂದ ಈ ಆಯ್ಕೆ ಸಕ್ರಮವಾಗುವದಿಲ್ಲವೆಂದು ಪ್ರತಿಪಾದಿಸಿದರು.
ಬೈಲಾ ತಿದ್ದುಪಡಿ
ಟ್ರಸ್ಟ್ ಅನ್ನು ಸಂಘಕ್ಕೆ ಹಸ್ತಾಂತರಿಸದೆ ಇದೀಗ ದಿಢೀರನೇ ಬೈಲಾ ತಿದ್ದುಪಡಿ ಮಾಡಿ ಅದಕ್ಕೆ ಅಂಗೀಕಾರ ಕೂಡ ಮಾಡಿಕೊಂಡಿದ್ದಾರೆ. ಬೈಲಾ ತಿದ್ದುಪಡಿ ಮಾಡಲು ಸಭೆ ನಡೆಸಬೇಕು, ಕರಡು ತಿದ್ದುಪಡಿಯ ಪ್ರತಿಗಳನ್ನು ನೀಡಬೇಕಿದೆ. ಯಾವದನ್ನೂ ಮಾಡದೆ ಸತ್ಯವನ್ನು ಮರೆಮಾಚಿ ತಿದ್ದುಪಡಿ ಮಾಡಿದ್ದು ಮತ್ತೆ ಮುಂದಿನ ಹತ್ತು ವರ್ಷಗಳವರೆಗೆ ಅದೇ ಪದಾಧಿಕಾರಿ ಗಳನ್ನು ಮುಂದುವರಿಸಲಾಗಿದೆ. ಅದರಲ್ಲಿದ್ದವರು ಕೆಲವರು ತೀರಿಕೊಂಡಿದ್ದರೂ ಯಾವದೇ ವ್ಯವಸ್ಥೆ ಮಾಡಿರುವದಿಲ್ಲ. ಇದೀಗ ಟ್ರಸ್ಟ್ನ ಅವಧಿ ೨೦ ವರ್ಷಗಳಾದಂತಾಗಿದೆ ಎಂದು ಅವರು ಆರೋಪಿಸಿದರು.
ಚುನಾವಣೆ ಪ್ರಕ್ರಿಯೆ ಆಗಿಲ್ಲ
ಜಿಲ್ಲೆಯಲ್ಲ್ಲಿ ೧೮ ಸಾವಿರ ಮಂದಿ ಬಂಟರಿದ್ದಾರೆ. ೩೦೦-೪೦೦ ಮಂದಿಯನ್ನು ಕರೆತಂದು ಸಭೆ ಮಾಡುವದಲ್ಲ. ಅಧ್ಯಕ್ಷರ ಆಯ್ಕೆ ಸಂಬAಧ ನೋಟೀಸ್ ಕಳುಹಿಸಿ, ಹೆಚ್ಚಿನ ಆಕಾಂಕ್ಷಿಗಳಿದ್ದರೆ ಚುನಾವಣಾ ಅಧಿಕಾರಿಯನ್ನು ನೇಮಕ ಮಾಡಿ ಚುನಾವಣೆ ಮೂಲಕ ಅಧ್ಯಕ್ಷರ ಆಯ್ಕೆ ಮಾಡಬೇಕಿದೆ. ಆಜೀವ ಸದಸ್ಯರಿಗೆ ಮಾತ್ರ ಮತದಾನದ ಅಧಿಕಾರವಿದ್ದು, ಸಭೆಯಲ್ಲಿ ಭಾಗವಹಿಸುವ ಎಲ್ಲರಿಗೂ ಅಧಿಕಾರವಿರುವದಿಲ್ಲ. ಇದು ಪ್ರತಿಷ್ಠೆಗಾಗಿ ಮಾಡಿಕೊಂಡ ಆಯ್ಕೆಯಾಗಿದೆ ಎಂದು ಅವರು ಆರೋಪಿಸಿದರು.
ಉಚ್ಚಾಟನೆ ಅಧಿಕಾರವಿಲ್ಲ
ಮೊನ್ನೆ ನಡೆದ ಸಭೆಯಲ್ಲಿ ತನ್ನನ್ನು ಸಂಘದಿAದ ಉಚ್ಚಾಟನೆ ಮಾಡಿರುವದಾಗಿ ಹೇಳಿಕೊಂಡಿದ್ದಾರೆ. ಸಂಘದಿAದ ಉಚ್ಚಾಟನೆ ಮಾಡಲು ಯಾರಿಗೂ ಅಧಿಕಾರವಿಲ್ಲ. ವೀರಾಜಪೇಟೆ ಸಂಘದವರನ್ನು ಒತ್ತಾಯವಾಗಿ ಕರೆಸಿಕೊಂಡಿದ್ದಾರೆ. ಸೋಮವಾರಪೇಟೆ ಸಂಘದವರು ಬಹಳ ವರ್ಷದ ಹಿಂದೆಯೇ ಜಿಲ್ಲಾ ಸಂಘದಿAದ ಹೊರಬಂದು ತಮ್ಮದೇ ತಾಲೂಕು ಸಂಘ ರಚಿಸಿಕೊಂಡಿದ್ದಾರೆ ಎಂದು ಹೇಳಿದರು.
ಬ್ಯಾಂಕ್ ವ್ಯವಹಾರಕ್ಕೆ ದಾಖಲೆ
ಈಗಾಗಲೇ ಮೂಲ ಬಂಟರ ಸಂಘದ ಪದಾಧಿಕಾರಿಗಳನ್ನು ನೇಮಕಾತಿ ಮಾಡಲಾಗಿದ್ದು, ಸಂಘದ ಖಾತೆ ಇರುವ ಬ್ಯಾಂಕ್ ಆಫ್ ಬರೋಡದಲ್ಲಿ ಸಂಘದ ನಿಲುವಳಿಗಳ ದಾಖಲೆಗಳನ್ನು ನೀಡಲಾಗಿದೆ. ಅಧಿಕೃತ ಆಡಳಿತ ಮಂಡಳಿಯ ಬಗ್ಗೆ ದಾಖಲೆ ಒದಗಿಸಲಾಗಿದ್ದು, ಬೇರೆ ಯಾರೂ ಕೂಡ ಬ್ಯಾಂಕ್ನಲ್ಲಿ ವ್ಯವಹರಿಸದಂತೆ ಪತ್ರ ಸಲ್ಲಿಸಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಶಭರೀಶ್ ಶೆಟ್ಟಿ ತಿಳಿಸಿದರು. ಟ್ರಸ್ಟ್ನ ಬಗ್ಗೆ ಈಗಾಗಲೇ ದಾನಿ ಪ್ರೇಮನಾಥ ಪೂಂಜಾ ಅವರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಪ್ರದೀಪ್ ಶೆಟ್ಟಿ ಇದ್ದರು.