ಪೆರಾಜೆ, ಫೆ. ೭: ಮಾರ್ಚ್ ೩ ರಿಂದ ೫ ರವರೆಗೆ ಪೆರಾಜೆ ಗ್ರಾಮದ ಕುಂಬಳಚೇರಿಯಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ವಯನಾಟ್ ಕುಲವನ್ ದೇವಸ್ಥಾನದಲ್ಲಿ ನಡೆಯುವ ದೈವಕಟ್ಟು ಮಹೋತ್ಸವದ ಪೂರ್ವಭಾವಿ ಕೆಲಸ ಕಾರ್ಯಗಳ ಕುರಿತು ಶಾಸಕ ಕೆ.ಜಿ. ಬೋಪಯ್ಯ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.
ಈ ಸಂದರ್ಭ ಮಡಿಕೇರಿ ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ವಯನಾಟ್ ಕುಲವನ್ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಪದ್ಮಯ್ಯ ಕುಂಬಳಚೇರಿ, ದೈವಕಟ್ಟು ಮಹೋತ್ಸವದ ಅಧ್ಯಕ್ಷ ಹೊನ್ನಪ್ಪ ಕೊಳಂಗಾಯ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.