ಮಡಿಕೇರಿ, ಫೆ. ೭: ನಗರದ ಅಂಬೇಡ್ಕರ್ ಅಭಿವೃದ್ಧಿ ನಿಗಮ ಕಚೇರಿಯಲ್ಲಿ ನಿನ್ನೆ ನಡೆದಿದ್ದ ಲಂಚ ಸ್ವೀಕಾರ ಪ್ರಕರಣದಲ್ಲಿ ಬಂಧಿತರಾಗಿದ್ದ ಮೂವರು ಸಿಬ್ಬಂದಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ವಿಜಯಲಕ್ಷಿö್ಮ ಎಂಬವರಿAದ ಸಬ್ಸಿಡಿ ಸಾಲ ಮಂಜೂರಾತಿ ಸಂಬAಧ ೧೦ ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ನಿಗಮದ ಕಚೇರಿ ವ್ಯವಸ್ಥಾಪಕಿ ಚೆಲುವಾಂಭ, ಜಿಲ್ಲಾ ವ್ಯವಸ್ಥಾಪಕ ಚಂದ್ರಶೇಖರ್ ಹಾಗೂ ಚಾಲಕ ತಿರುಮಲ ಇವರುಗಳನ್ನು ನಿನ್ನೆ ದಿನ ಲೋಕಾಯುಕ್ತ ಪೊಲೀಸರು ಬಂಧಿಸಿದ್ದು, ಬಳಿಕ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.