ಮಡಿಕೇರಿ, ಫೆ. ೭: ಕೊಡಗಿನ ಐರಿ ಜನಾಂಗದ ಮಧ್ಯೆ ಈ ಬಾರಿ ಒಂಭತ್ತನೇ ವರ್ಷದ ಕೌಟುಂಬಿಕ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದ್ದು, ಈ ವರ್ಷ ಐರಿ ಮಕ್ಕಡ ಕೂಟ ಆತಿಥ್ಯ ವಹಿಸಿದೆ. ಕೊಡಗು ಐರಿ ಸಮಾಜ
ಸಹಯೋಗದಲ್ಲಿ ಏಪ್ರಿಲ್ ೨೨ ಮತ್ತು ೨೩ ರಂದು ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಪಂದ್ಯಾವಳಿ ನಡೆಯಲಿದೆ.
ಕ್ರಿಕೆಟ್ ಮಾತ್ರವಲ್ಲದೆ ಮಹಿಳೆಯರಿಗೆ ಹಗ್ಗ ಜಗ್ಗಾಟ, ಜನಾಂಗದ ಹೆಣ್ಣುಮಕ್ಕಳಿಗೆ ಪ್ರದರ್ಶನ ಕ್ರಿಕೆಟ್ ಪಂದ್ಯಾಟ ಹಾಗೂ ಇತರ ಆಟೋಟ ಸ್ಪರ್ಧೆಗಳು ನಡೆಯಲಿವೆ. ಅಲ್ಲದೆ ಪುರುಷರಿಗೆ ಮತ್ತು ಮಹಿಳೆಯರಿಗೆ ೧೦೦ ಮೀಟರ್ ಓಟ, ಹಿರಿಯ ಪುರುಷರು ಮತ್ತು ವಿವಾಹಿತ ಮಹಿಳೆಯರಿಗೆ ೧೦೦ ಮೀಟರ್ ಓಟ, ಪುಟಾಣಿಗಳಿಗೆ ವಿವಿಧ ಬಗೆಯ ಆಟೋಟ ಹಾಗೂ ಹಲವು ಬಗೆಯ ಮನರಂಜನಾ ಸ್ಪರ್ಧೆಗಳನ್ನು ಆಯೋಜಿ ಸಲಾಗುತ್ತದೆ ಎಂದು ಆಯೋಜನಾ ಸಮಿತಿ ಸಂಚಾಲಕ ಐಮಂಡ ಗೋಪಾಲ್ ಸೋಮಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
(ಮೊದಲ ಪುಟದಿಂದ)
ಐನ್ಮನೆ ಪ್ರಶಸ್ತಿ!
ಕ್ರಿಕೆಟ್ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಸಮಗ್ರ ಚಾಂಪಿಯನ್ ಆಗುವ ಕುಟುಂಬಕ್ಕೆ ಜಿಲ್ಲೆಯಲ್ಲೇ ಇದೇ ಮೊದಲ ಬಾರಿಗೆ ಮರದಲ್ಲಿ ಕೆತ್ತನೆ ಮಾಡಲಾಗುವ ಆಕರ್ಷಕ ಐನ್ಮನೆಯ ಮಾದರಿಯನ್ನು ಪ್ರಶಸ್ತಿಯಾಗಿ ನೀಡಲಾಗುತ್ತದೆ.
ಈ ಐನ್ಮನೆ ಮಾದರಿಯನ್ನು ಹೊಸ್ಕೇರಿ ಗ್ರಾಮದ ಕರಕುಶಲಕರ್ಮಿ ಐನಂಗಡ ಉದಯ್ ಕುಮಾರ್ (ವಾಸು) ಅವರು ಕೆತ್ತನೆ ಮಾಡಲಿದ್ದಾರೆ.
ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಐರಿ ಜನಾಂಗದ ವಿವಿಧ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕಾರ್ಯವೂ ನಡೆಯಲಿದೆ.
ಕ್ರಿಕೆಟ್ ಪಂದ್ಯಾಟದಲ್ಲಿ ಈ ಬಾರಿ ೨೫ ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ವಿನ್ನರ್ ಮತ್ತು ರನ್ನರ್ ಅಪ್ ತಂಡಕ್ಕೆ ಆಕರ್ಷಕ ನಗದು ಮತ್ತು ಟ್ರೋಫಿ ನೀಡಲಾಗುತ್ತದೆ. ಬೆಸ್ಟ್ ಬ್ಯಾಟ್ಸ್ಮೆನ್, ಬೆಸ್ಟ್ ಬೌಲರ್, ಅತ್ಯಧಿಕ ರನ್ ಸ್ಕೋರರ್ ಸೇರಿದಂತೆ ಹಲವು ವೈಯಕ್ತಿಕ ವಿಭಾಗಗಳಲ್ಲೂ ಆಕರ್ಷಕ ನಗದು ಮತ್ತು ಟ್ರೋಫಿ ನೀಡಲಾಗುತ್ತದೆ.
ಕ್ರಿಕೆಟ್ ಪಂದ್ಯಾಟದಲ್ಲಿ ಪಾಲ್ಗೊಳ್ಳುವ ತಂಡಗಳು ೯೫೩೫೬೧೯೬೮೪, ೮೮೬೧೨೮೭೭೪೦, ೯೪೪೨೩೬೩೨೪೯, ೮೧೯೭೬೦೨೦೫೧ ಕ್ರೀಡಾಕೂಟದ ಬಗ್ಗೆ ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.