ಮಡಿಕೇರಿ, ಫೆ. ೭: ಅಹ್ಮದಿಯ ಮುಸ್ಲಿಂ ಕಮ್ಯುನಿಟಿ ವತಿಯಿಂದ `ನ್ಯೂಕ್ಲಿಯರ್ ಯುದ್ಧದ ವಿನಾಶಕಾರಿ ಪರಿಣಾಮ ಹಾಗೂ ನ್ಯಾಯದ ಅವಶ್ಯಕತೆ' ಎಂಬ ವಿಷಯದಡಿ ಶಾಂತಿ ವಿಚಾರ ಸಂಕಿರಣ ಏರ್ಪಡಿಸಲಾಗಿದೆ. ಗಾಳಿಬೀಡು ಅವ್ರಿಕಾ ರೆಸಾರ್ಟ್ನಲ್ಲಿ ತಾ. ೧೨ ರಂದು ಬೆ. ೧೧ ಗಂಟೆಗೆ ವಿಚಾರ ಸಂಕಿರಣ ನಡೆಯಲಿದೆ. ಮಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಪಿ ಸುಬ್ರಮಣ್ಯ ಯಡಪಡಿತ್ತಾಯ, ಅಹ್ಮದಿಯ ಮುಸ್ಲಿಂ ಜಮಾತ್ ಮಿಷನರಿ ಜನಾಬ್ ಹುಸಾಮ್ ಅಹ್ಮದ್, ನಿವೃತ್ತ ಏರ್ ಮಾರ್ಷಲ್ ಕೆ.ಸಿ. ನಂದಾ ಕಾರ್ಯಪ್ಪ, ಸಿ.ಆರ್.ಪಿ.ಎಫ್. ನಿವೃತ್ತ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಕೆ. ಅರ್ಕೇಶ್, ವಕೀಲ ಬಾಲಸುಬ್ರಮಣ್ಯ ಕಂಜರ್ಪಣೆ, ಮಡಿಕೇರಿ ಬ್ರೆöÊನ್ ಒ ಬ್ರೆöÊನ್ ಮುಖ್ಯಸ್ಥೆ ಎಂ. ಕವಿತಾ ಕರುಂಬಯ್ಯ ಅವರುಗಳು ವಿಚಾರ ಸಂಕಿರಣದಲ್ಲಿ ಮಾತನಾಡಲಿ ದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಹ್ಮದಿಯ ಮುಸ್ಲಿಂ ಜಮಾತ್ ಮಡಿಕೇರಿ ಅಧ್ಯಕ್ಷ ಜಿ.ಎಂ. ಮೊಹಮ್ಮದ್ ಶರೀಫ್ ಅವರು ವಹಿಸಲಿದ್ದಾರೆ.