ಮಡಿಕೇರಿ, ಫೆ. ೭: ಜೆಡಿಎಸ್ ಪಕ್ಷದಿಂದ ತಮ್ಮ ತಂದೆ ಅರಕಲಗೂಡು ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ; ಆದರೆ ತಾವು ಕಾಂಗ್ರೆಸ್ ಪಕ್ಷದಲ್ಲೇ ಮಡಿಕೇರಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದು, ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂಬುದಾಗಿ ಡಾ|| ಮಂಥರ್‌ಗೌಡ ಹೇಳಿದ್ದಾರೆ. ಮಡಿಕೇರಿ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಎ. ಮಂಜು ಅವರ ಪುತ್ರರಾಗಿರುವ ಡಾ|| ಮಂಥರ್‌ಗೌಡ ಅವರು ಕಳೆದ ಒಂದೂವರೆ ವರ್ಷದಿಂದ ತಾವು ಕಾಂಗ್ರೆಸ್‌ನಲ್ಲಿ ಕೊಡಗಿನಲ್ಲಿ ಸಕ್ರಿಯರಾಗಿದ್ದು, ಪಕ್ಷದ ಪರ ಕೆಲಸ ನಿರ್ವಹಿಸಿಕೊಂಡು ಬಂದಿದ್ದೇನೆ.

ಕೊಡಗಿನಿAದ ಎಂಎಲ್‌ಸಿ ಚುನಾವಣೆಗೆ ಸ್ಪರ್ಧಿಸಿದ್ದ ಸಂದರ್ಭದಲ್ಲೂ ತಮ್ಮ ತಂದೆ ಮಂಜು ಅವರು ಕಾಂಗ್ರೆಸ್‌ನಲ್ಲಿ ಇರಲಿಲ್ಲ. ಆ ಸಂದರ್ಭದಲ್ಲಿ ಅವರು ಬಿಜೆಪಿಯಲ್ಲಿದ್ದರು ಎಂಬದನ್ನು ಅರ್ಥೈಸಿಕೊಳ್ಳಬೇಕಿದೆ. ಇದೀಗ ಅವರು ಜೆಡಿಎಸ್‌ನಿಂದ ಅಭ್ಯರ್ಥಿಯಾಗುವದಕ್ಕೂ ತಮ್ಮ ನಿಲುವಿಗೂ ಸಂಬAಧ ಕಲ್ಪಿಸುವುದು ಸರಿಯಲ್ಲ. ತಾವು ಕಾಂಗ್ರೆಸ್‌ನಲ್ಲೇ ಟಿಕೆಟ್ ಆಕಾಂಕ್ಷಿಯಾಗಿದ್ದು, ಬೇರೆ ಚಿಂತನೆ ಇಲ್ಲ. ಸದ್ಯದಲ್ಲಿ ಪತ್ರಿಕಾಗೋಷ್ಠಿ ಮೂಲಕ ಈ ಕುರಿತು ಕೇಳಿಬರುತ್ತಿರುವ ಗೊಂದಲಗಳಿಗೆ ತೆರೆ ಎಳೆಯಲಿ ರುವುದಾಗಿ ಅವರು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ್ದಾರೆ.