ಕುಶಾಲನಗರ, ಫೆ. ೬: ಮೊಬೈಲ್‌ಗಳಿಗೆ ತಪ್ಪು ಸಂದೇಶ ನೀಡಿ ಹಣ ವಂಚನೆ ಮಾಡುವ ತಂಡಗಳು ಕಾರ್ಯಾಚರಣೆ ಮಾಡುತ್ತಿದ್ದು, ಬಹುತೇಕ ಗ್ರಾಹಕರು ಹಣ ಕಳೆದುಕೊಳ್ಳುತ್ತಿರುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಏರತೊಡಗಿದೆ.

ಸಾಮಾಜಿಕ ಜಾಲತಾಣಗಳ ಮೂಲಕ ಭಾರತ್ ಸಂಚಾರ್ ನಿಗಮದ ಅಧಿಕಾರಿಗಳೆಂದುಕೊAಡು ಗ್ರಾಹಕರನ್ನು ನಂಬಿಸುವ ಮೂಲಕ ಅವರ ಬ್ಯಾಂಕ್ ಖಾತೆ, ಮೊಬೈಲ್ ದಾಖಲೆಗಳನ್ನು ಪಡೆದು ವಂಚಿಸುವ ದಂಧೆ ಇದಾಗಿದೆ. ಮಹಾರಾಷ್ಟç ಮೂಲದ ಸಮೀರ್ ಎಂಬಾತ (ಮೊ.ಸಂ: ೭೫೮೮೫೩೦೭೨೬) ಮೊಬೈಲ್‌ಗಳಿಗೆ ಸಂದೇಶ ಕಳುಹಿಸುತ್ತಿದ್ದು, ಅವಿನಾಶ್ ಶರ್ಮ ಎಂಬಾತ (೭೮೪೬೯೫೬೧೫೭) ಗ್ರಾಹಕರನ್ನು ಸಂಪರ್ಕಿಸಿ ಮೊಬೈಲ್ ಸದÀ್ಯದಲ್ಲಿಯೇ ಬ್ಲಾಕ್ ಆಗಲಿದೆ ಎಂಬ ಮಾಹಿತಿ ನೀಡುವುದರೊಂದಿಗೆ ದಾಖಲೆಗಳನ್ನು ಸಂಗ್ರಹಿಸಿ ವಂಚನೆಗೆ ದಾಳ ಹಾಕುತ್ತಿರುವುದು ನಡೆಯುತ್ತಿದೆ. ಈ ಬಗ್ಗೆ ನಾಗರಿಕರು ವಂಚನೆಗೆ ಒಳಗಾಗದಂತೆ ಎಚ್ಚರ ವಹಿಸುವುದು ಒಳಿತು. -ಸಿಂಚು