ಮಡಿಕೇರಿ, ಫೆ. ೬: ಗದ್ದೆ ಪ್ರದೇಶವನ್ನು ವಾಣಿಜ್ಯ ಉದ್ದೇಶಕ್ಕಾಗಿ ವ್ಯಕ್ತಿಯೊಬ್ಬರು ಪರಿವರ್ತಿಸಿಕೊಂಡು ನಿವೇಶನಗಳಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದಾರೆ, ಇದರಿಂದಾಗಿ ಇದರ ಸುತ್ತಲೂ ಇರುವ ಸುಮಾರು ನೂರು ಎಕರೆಯಷ್ಟು ಗದ್ದೆ ಪ್ರದೇಶಕ್ಕೆ ಮಳೆಗಾಲದ ಸಂದರ್ಭ ಪ್ರವಾಹದ ಭೀತಿ ಎದುರಾಗಿದ್ದು, ಇದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಗುಟಗೇರಿ ಗ್ರಾಮದ ರೈತರು ಆಗ್ರಹಿಸಿದ್ದಾರೆ. ಈ ಸಂಬAಧ ಕೊಡಗು ಜಿಲ್ಲಾಧಿಕಾರಿ ಬಿ.ಸಿ. ಸತೀಶ ಅವರಿಗೂ ಲಿಖಿತ ದೂರು ನೀಡಿದ್ದು ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆಯಿತ್ತಿದ್ದಾರೆ ಗ್ರಾಮದ ರೈತರು ನೀಡಿರುವ ದೂರಿನ ಪ್ರಮುಖಾಂಶ ಈ ಕೆಳಗಿನಂತಿದೆ.

ಮುಗುಟಗೇರಿ ಗ್ರಾಮದ ಸ. ನಂ. ೩೫/೨ ರ ೪.೧೯ ಎಕರೆ ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡಲಾಗಿದೆ. ರಾಜ್ಯ ಹೆದ್ದಾರಿ ಎಸ್ ಹೆಚ್. ೮೯ ಕ್ಕೆ ಹೊಂದಿಕೊAಡAತಿರುವ ಈ ಭೂಮಿಯನ್ನು ನಿವೇಶನಗಳಾಗಿ ಮತ್ತು ವಾಣಿಜ್ಯ ಉದ್ದೇಶಕ್ಕಾಗಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಭೂ ಪರಿವರ್ತನೆ ಮಾಡಲಾಗಿದೆ.

ಸುಳ್ಳು ದಾಖಲೆಗಳ ಮೂಲಕ ಭೂ ಮಾಲೀಕರು ಅಧಿಕ ವಿದ್ಯುತ್ ಪ್ರಸರಣ ಇರುವ ತಂತಿಗಳು ಹಾದು ಹೋಗುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಆದರೆ, ಇದಕ್ಕೆ ವ್ಯತಿರಿಕ್ತವಾಗಿ ತಂತಿಗಳು ಹಾದು ಹೋಗುವ ಸಾಕ್ಷö್ಯ ಚಿತ್ರಗಳು ನಮ್ಮ ಬಳಿಯಿವೆ. ಭೂ ಪರವರ್ತನೆಯ ಆದೇಶದ ಪ್ರತಿಯೂ ನಮ್ಮ ಬಳಿಯಿದೆ. ಅದರ ಅನ್ವಯ ಪರಿವರ್ತನೆ ಮಾಡಿರುವ ಆಸ್ತಿಯು ರಾಷ್ಟಿçÃಯ ಹೆದ್ದಾರಿಯಿಂದ ೩೦ ಮೀಟರ್ ಅಂತರದಲ್ಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಆದರೆ, ಅಂತಹ ಯಾವುದೇ ನಿಯಮವನ್ನು ಪಾಲಿಸಿರುವುದಿಲ್ಲ. ಅಲ್ಲದೆ, ಹೆದ್ದಾರಿಯ ಸನಿಹವೇ ಕಟ್ಟಡಗಳನ್ನು ನಿರ್ಮಿಸಲಾಗಿದೆ.

ಈ ಭೂ ಪರಿವರ್ತನೆಯಿಂದ ಅನೇಕ ತೊಂದರೆಗಳು ಮುಂದಿನ ದಿನಗಳಲ್ಲಿ ಉದ್ಭವಿಸುವ ಸಾಧ್ಯತೆÀಯಿದೆ. ಪ್ರಮುಖವಾಗಿ ಇದರ ಹಿಂಬದಿಯಲ್ಲಿರುವ ಗದ್ದೆಗಳಲ್ಲಿ ಮಳೆಗಾಲದಲ್ಲಿ ನೀರು ನಿಂತು ರೈತರ ಬೆಳೆೆಗಳಿಗೆ ತೀರಾ ಹಾನಿಯಾಗುವ ಸಂಭವವಿದೆ. ನೂರು ಎಕರೆಗಿಂತ ಹೆಚ್ಚಿನ ಗದ್ದೆಗಳಿದ್ದು ಆ ಭಾಗದಲ್ಲಿ ಹಿನ್ನೀರು ನಿಂತು ಎಲ್ಲ ರೈತರು ತೀವ್ರ ನಷ್ಟ ಅನುಭವಿಸುವ ಸನ್ನಿವೇಶವಿದೆ. ಐದು ಅಡಿಗಳಿಗಿಂತಲೂ ಅಧಿಕ ಎತ್ತರದಲ್ಲಿ ನೀರು ನಿಲ್ಲುವ ಭಯವಿದೆ. ಇದು ಕುಯ್ಲಿನವರೆಗೂ ಮುಂದುವರಿಯಬಹುದಾಗಿದ್ದು ಅದಕ್ಕೆ ಸಾಕ್ಷö್ಯ ಚಿತ್ರಗಳು ನಮ್ಮ ಬಳಿಯಿವೆ.

ಈ ಭೂಪರಿವರ್ತನೆ ನಡೆಸಲು ನೂರುಗಟ್ಟಲೆ ಟ್ರಕ್ ಲೋಡ್‌ಗಳಲ್ಲಿ ದೂರದ ಹುದಿಕೇರಿಯ ಗುಡ್ಡವೊಂದನ್ನು ಕೊರೆದು ಮಣ್ಣನ್ನು ತಂದು ಸುರಿಯಲಾಗಿದೆ. ಸುಮಾರು ೧೦ ಅಡಿಯಷ್ಟು ಎತ್ತರಕ್ಕೆ ಏರಿಸಲಾಗಿದೆ. ಇದರಿಂದಾಗಿ ಇದರ ಹಿಂಬದಿ ಇರುವ ರೈತರ ೧೦೦ ಎಕರೆಯಷ್ಟು ಗದ್ದೆಗಳು ಮುಳುಗಡೆಯಾಗುವ ಅಪಾಯವಿದೆ. ಇದಕ್ಕೆ ಪೂರಕವಾದ ಸಾಕ್ಷö್ಯ ಚಿತ್ರವನ್ನು ಒದಗಿಸುತ್ತಿದ್ದೇವೆ,

ಈ ಪರಿವರ್ತನೆಗೊಂಡ ಕೃಷಿ ಭೂಮಿಯು ತಗ್ಗು ಪ್ರದೇಶದಲ್ಲಿ ಇದೆ. ಈಗ ಮೇಲ್ಭಾಗದ ನೂರಾರು ಎಕರೆ ಗದ್ದೆಗಳಿಂದ ಬರುವ ನೀರು ಹಾದು ಹೋಗುವ ತೋಡಿನ ಮೂಲಕ ಲಕ್ಷö್ಮಣ ತೀರ್ಥ ಸೇರುತ್ತಿದೆ. ಆದರೆ ಇದೀಗ ಆ ನೀರು ಹರಿಯುವ ನಾಲಾವನ್ನು ಮುಚ್ಚಲಾಗಿದ್ದು ಇದೀಗ ಹರಿಯುವ ನೀರು ಅಲ್ಲಿಯೇ ತಡೆಗೊಂಡು ಹಿಂಭಾಗದಲ್ಲಿರುವ ಎಲ್ಲ ಗದ್ದೆಗಳನ್ನು ಆವರಿಸುತ್ತದೆ. ಬೆಳೆ ನಾಶವಾಗುತ್ತದೆ.

ಈ ಹಿನ್ನೆಲೆಯನ್ನು ಪರಿಗಣಿಸಿ ರೈತರ ಬಾಳಿಗೆ ತೀರಾ ಅಪಾಯ ತಂದೊಡ್ಡುವ ಈ ಕಾರ್ಯವನ್ನು ಸ್ಥಗಿತಗೊಳಿಸುವಂತೆ ರೈತರು ಜಿಲ್ಲಾಧಿಕಾರಿಯವರಲ್ಲಿ ಮನವಿ ಮಾಡಿದ್ದಾರೆ.