ಆಲೂರು ಸಿದ್ದಾಪುರ, ಫೆ. ೬: ರಾಜ್ಯದಲ್ಲಿ ಹೆಸರುವಾಸಿಯಾದ ಇತಿಹಾಸ ಪ್ರಸಿದ್ದ ಗುಡುಗಳಲೆ ಶ್ರೀ ಜಯದೇವ ಜಾನುವಾರುಗಳ ಜಾತ್ರೆ ಪ್ರಾರಂಭಗೊAಡು ೯ ದಿನಗಳು ಕಳೆದಿದೆ. ಜಾನುವಾರುಗಳನ್ನು ರೈತರು ಮಾರಾಟ ಮತ್ತು ಕೊಂಡುಕೊಳ್ಳುವ ಉದ್ದೇಶದಿಂದ ಹಲವಾರು ವರ್ಷಗಳಿಂದ ಜಾನುವಾರು ಜಾತ್ರೆ ನಡೆಯುವುದು ವಾಡಿಕೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಗ್ರಾಮೀಣ ಪ್ರದೇಶ ಆಧುನಿಕಗೊಳ್ಳುತ್ತಿದ್ದು ರೈತಾಪಿ ಜನರು ತಂತ್ರಜ್ಞಾನ ಹೊಂದಿರುವ ಕೃಷಿ ಪದ್ಧತಿಯನ್ನು ವೈಜ್ಞಾನಿಕವಾಗಿ ಬದಲಾವಣೆ ಮಾಡಿಕೊಂಡಿರುವುದ್ದರಿAದ ಮತ್ತು ಕೃಷಿ ಚಟುವಟಿಕೆಗಾಗಿ ಎತ್ತು, ಕೋಣವನ್ನು ಬಳಸಿ ನೇಗಿಲು ಬಳಸಿ ಉಳುಮೆ ಮಾಡುವ ಕ್ರಮಕ್ಕೆ ಇತಿಶ್ರೀ ಹಾಡಿ ಇದರ ಬದಲಿಗೆ ಟ್ರಾö್ಯಕ್ಟರ್, ಟಿಲ್ಲರ್ ಮುಂತಾದ ಕೃಷಿ ಯಂತ್ರೋಪಕರಣಗಳನ್ನು ಬಳಸಿ ಕೃಷಿ ಮಾಡುತ್ತಿರುವ ಪ್ರಭಾವದಿಂದ ಜಾನುವಾರುಗಳ ಸಾಕಾಣಿಕೆ ಪ್ರತಿವರ್ಷ ಇಳಿಮುಖವಾಗುತ್ತಿದೆ, ಇದರ ಪ್ರಭಾವದಿಂದ ಗುಡುಗಳಲೆ ಜಾನುವಾರುಗಳ ಜಾತ್ರೆಯಲ್ಲಿ ಪ್ರತಿವರ್ಷವೂ ಗಣನೀಯವಾಗಿ ಜಾನುವಾರುಗಳು ಸೇರುವುದು ಕಮ್ಮಿಯಾಗುತ್ತಿದೆ. ಜ ೨೫ ರಿಂದ ಜಾನುವಾರು ಜಾತ್ರೆ ಪ್ರಾರಂಭಗೊAಡಿದೆ.
ಜಾತ್ರೆಯಲ್ಲಿ ಜಾನುವಾರುಗಳು ಇಲ್ಲದಿದ್ದರೂ ೧೫ ದಿನಗಳವರೆಗೆ ನಡೆಯುವ ಈ ಜಾತ್ರೆಯಲ್ಲಿ ಜಾತ್ರಾ ಸಮಿತಿಯವರು ಜಾತ್ರೆಯ ಆಕರ್ಷಣೆ ಹೆಚ್ಚಿಸಲು ಮೊದಲೇ ಸಿದ್ಧತೆ ಮಾಡಿಕೊಂಡಿದ್ದಾರೆ. ಮನರಂಜನೆಗಾಗಿ ಕೊಲಂಬಸ್, ಜಾಯಿಂಟ್ ವೀಲ್, ಬ್ರೆಕ್ ಡ್ಯಾನ್ಸ್ ಆಟಿಕೆ. ಮುಂತಾದ ಉಪಕರಣ ಸಾಧನಗಳನ್ನು ಅಳವಡಿಸಲಾಗಿದೆ, ಬಗೆಬಗೆಯ ಆಟಿಕೆ ಅಂಗಡಿ, ಚಪ್ಪಲಿ, ಬಟ್ಟೆ, ಪ್ಯಾನ್ಸಿ ಅಂಗಡಿ, ಹಣ್ಣಿನ ಅಂಗಡಿ, ಹೊಟೇಲು, ಗೃಹಪಯೋಗಿ ವಸ್ತುಗಳು, ಕ್ಯಾಂಟೀನ್ ಮುಂತಾದವುಗಳನ್ನು ಜಾತ್ರೆಯಲ್ಲಿ ಹಾಕಿರುವುದ್ದರಿಂದ ಜಾತ್ರೆ ರಾತ್ರಿ ವೇಳೆಯಲ್ಲಿ ಕಳೆಗಟ್ಟುತ್ತಿದೆ. ಆ. ೨೮ ರಿಂದ ಪ್ರತಿದಿನ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಾರ್ವಜನಿಕರಿಗೆ ಕಬಡ್ಡಿ, ವಾಲಿಬಾಲ್, ಥ್ರೋಬಾಲ್ ಕ್ರೀಡಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಜಾತ್ರೆ ಜಾನುವಾರುಗಳಿಂದ ಪ್ರತಿ ವರ್ಷ ರಂಗೇರುತಿತ್ತು. ಆದರೆ ಈ ಬಾರಿ ಜಾನುವಾರುಗಳಿಗೆ ಗಂಟು ರೋಗ ಬಂದಿದ್ದರಿAದ ಜಾನುವಾರುಗಳನ್ನು ಜಾತ್ರೆಯಲ್ಲಿ ಕಟ್ಟಲು ಅವಕಾಶವಿರಲಿಲ್ಲ, ಆದರೂ ಸಹ ಜಾತ್ರೆಯಲ್ಲಿ ವಿವಿಧ ಮನರಂಜನ ಆಟಿಕೆಗಳು ವ್ಯವಸ್ತಿತವಾಗಿದೆ ಕಡಿಮೆ ದರದಲ್ಲಿ ಗೃಹಪಯೋಗಿ ವಸ್ತುಗಳು ಸಿಗುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಾತ್ರೆಗೆ ಬರುತಿದ್ದಾರೆ.