ಕೂಡಿಗೆ, ಫೆ. ೬: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ದಲಿಂಗಪುರ ಅರಸಿನಗುಪ್ಪೆ ಶ್ರೀ ಮಂಜುನಾಥ ಸ್ವಾಮಿ ದೇವಾಲಯದ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೋಮವಾರಪೇಟೆ, ಸಾಮೂಹಿಕ ಸತ್ಯನಾರಾಯಣ ಸಮಿತಿ, ಪ್ರಗತಿ ಬಂಧು ಸ್ವ-ಸಹಾಯ ಸಂಘ ಒಕ್ಕೂಟ, ಹೆಬ್ಬಾಲೆ ವಲಯ ಇವರ ಜಂಟಿ ಆಶ್ರಯದಲ್ಲಿ ವಲಯ ಮಟ್ಟದ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಸ್ವ-ಸಹಾಯ ತಂಡಗಳ ಸಾಧನ ಸಮಾವೇಶ ತಾ. ೭ ರಂದು (ಇಂದು) ಶ್ರೀ ರಾಜೇಶನಾಥ್ ಜೀ ಅವರ ಉಪಸ್ಥಿತಿಯಲ್ಲಿ ಸಿದ್ದಲಿಂಗಪುರ ಅರಸಿನಗುಪ್ಪಯ ಶ್ರೀ ಮಂಜುನಾಥ ಸ್ವಾಮಿ ದೇವಾಲಯದ ಆವರಣದಲ್ಲಿ ನಡೆಯಲಿದೆ.
ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸತ್ಯನಾರಾಯಣ ಪೂಜಾ ಸಮಿತಿಯ ಅಧ್ಯಕ್ಷ ಪಿ.ಡಿ. ರವಿಕುಮಾರ್ ವಹಿಸಲಿದ್ದಾರೆ. ದಿವ್ಯ ಸಾನಿದ್ಯ ಮತ್ತು ಆಶೀರ್ವಚನವನ್ನು ಮನೆಹಳ್ಳಿ ಮಠದ ಶ್ರೀ ಮಹಾಂತ ಶಿವಲಿಂಗ ಸ್ವಾಮಿಜಿ, ಅಸರಿನಗುಪ್ಪೆಯ ಶ್ರೀ ರಾಜೇಶನಾರ್ಥ್ ಜೀ ನೀಡಲಿದ್ದಾರೆ ಗೌರವ ಉಪಸ್ಥಿತಿಯಲ್ಲಿ ತೊರೆನೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ರೂಪ ಮಹೇಶ್, ಯೋಜನಾಧಿಕಾರಿ ಹೆಚ್. ಮಹೇಶ್, ದೇವಾಲಯ ಸಮಿತಿಯ ಅಧ್ಯಕ್ಷ ಎಂ.ಸಿ. ಮೋಹನ್, ಹೆಬ್ಬಾಲೆ ಇಂಜಿನಿಯರ್ ರಾಮಪ್ಪ, ಗೋಣಿಮರೂರು ಬಸವೇಶ್ವರ ಸಮಿತಿಯ ಅಧ್ಯಕ್ಷ ಹೆಚ್.ಸಿ. ಸಿದ್ದಪ್ಪ ಭಾಗವಹಿಸಲಿದ್ದಾರೆ ಎಂದು ಪೂಜಾ ಸಮಿತಿಯ ಅಧ್ಯಕ್ಷ ತಿಳಿಸಿದ್ದಾರೆ.
ಬೆಳಿಗ್ಗೆ ೭.೩೦ ಗಂಟೆಗೆ ಶ್ರೀ ಸತ್ಯನಾರಾಯಣ ಪೂಜೆ ೧೧ ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ, ಸಾಧನ ಸಮಾವೇಶ ಸೇರಿದಂತೆ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ.