ಚೆಯ್ಯಂಡಾಣೆ, ಫೆ. ೫: ತಾ. ೭ ರಂದು ಪಯ್ಯವೂರ್ ಕ್ಷೇತ್ರದ ಕೋಮರತಚ್ಚನ್ ಬೋವ್ವೆರಿಯಂಡ ಐನ್‌ಮನೆಯಲ್ಲಿ ರಾತ್ರಿ ತಂಗಿ ಮಾರನೇ ದಿನ ತಾ ೮ ರಂದು ಬುಧವಾರ ಬೆಳಿಗ್ಗೆ ೮.೩೦ ಗಂಟೆಗೆ ದೇವರ ದರ್ಶನ ನೀಡಿ ಬೋವ್ವೆರಿಯಂಡ ಕುಟುಂಬಸ್ಥರಿಗೆ ಐನ್‌ಮನೆಯಲ್ಲಿ ಕುಡಿಪಣ ನೀಡಿ ನಂತರ ಫಲಹಾರ ಸೇವಿಸಿ ಹೋರಡುತ್ತಾರೆ.

ಅಲ್ಲಿಂದ ಪೆಬ್ಬಟ್ಟಾಣೆ ಮಂದ್ ನಲ್ಲಿ ನೆರೆದವರಿಗೆ ಕುಡಿಪಣ ನೀಡಿ ನಾಡಿನ ಜನತೆಗೆ ಆಶೀರ್ವದಿಸಿ ಕೇರಳದ ಪಯ್ಯವೂರ್ ಗೆ ತೆರಳುತ್ತಾರೆ. ತಾ. ೧೦ ರಂದು ಬೆಳಿಗ್ಗೆ ೮ ಗಂಟೆಗೆ ಬೋವೈರಿಯಂಡ ಐನ್ ಮನೆಯಿಂದ ಎತ್ತು ಪೋರಾಟ ಹೊರಟು ತಾ. ೧೨ ರಂದು ಬೆಳಿಗ್ಗೆ ೭ ಗಂಟೆಗೆ ಪಯ್ಯವೂರ್ ಕ್ಷೇತ್ರದಲ್ಲಿ ಅಕ್ಕಿ ಅರ್ಪಿಸುತ್ತಾರೆ. ತಾ. ೨೧ ರಂದು ಎಂಟನೇ ಊಟ್ ಹಬ್ಬ ತಾ. ೨೩ ರಂದು ೧೦ ನೇ ಊಟ್ ಹಬ್ಬ ನಡೆಯಲಿದೆ. ನಾಡಿನ ಭಕ್ತರೆಲ್ಲರೂ ಊಟ್ ಹಬ್ಬದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಲು ಬೋವ್ವೆರಿಯಂಡ ತಕ್ಕ ಮುಖ್ಯಸ್ಥರು ಕೊರಿದ್ದಾರೆ.