ಚೆಯ್ಯಂಡಾಣೆ, ಫೆ ೫. ಎಡಪಾಲ ಅಂಡತ್‌ಮಾನಿ ಉರೂಸ್ ಸಮಾರಂಭಕ್ಕೆ ಇಂದು ಎಡಪಾಲ ಮುಸ್ಲಿಂ ಜಮಾಅತ್ ಅಧ್ಯಕ್ಷ ಕೆ.ಯು. ಶಾಫಿ ಧ್ವಜಾರೋಹಣ ನೆರವೇರಿಸುವುದರ ಮೂಲಕ ಚಾಲನೆ ನೀಡಿದರು.

ನಂತರ ಮಖಾಂ ಝಿಯಾರತ್ ಹಾಗೂ ದುಆ ನೇತೃತ್ವವನ್ನು ಕೊಡಗು ನಾಇಬ್ ಖಾಝಿ ಅಬ್ದುಲ್ಲ ಫೈಝಿ ನೆರವೇರಿಸಿದರು.

ಈ ಸಂದರ್ಭ ಮುದರಿಸ್ ನಿಝರ್ ಫೈಝಿ, ಹಮೀದ್ ದಾರಿಮಿ, ಕುಂಜಾ ಅಹ್ಮದ್, ಊರಿನ ಹಿರಿಯರು ಮತ್ತಿತ್ತರರು ಹಾಜರಿದ್ದರು. ರಾತ್ರಿ ಸಿರಾಜುದ್ದೀನ್ ದಾರಿಮಿ ಕಕ್ಕಾಡ್ ಧಾರ್ಮಿಕ ಉಪನ್ಯಾಸ ನೀಡಿದರು.

ತಾ ೬ ರಂದು (ಇಂದು) ಸಂಜೆ ಸನ್ಮಾನ ಹಾಗೂ ದುಆ ಮಜ್ಲಿಸ್ ನಡೆಯಲಿದ್ದು, ಸಯ್ಯದ್ ಹಮೀದಲಿ ಶಿಹಾಬ್ ತಂಗಳ್ ಪಾಣಕ್ಕಾಡ್ ನೇತೃತ್ವ ವಹಿಸಲಿದ್ದಾರೆ, ಮುಖ್ಯ ಭಾಷಣವನ್ನು ಅಲ್‌ಹಾಜ್ ಕೆ.ಎಂ. ಮೊಯ್ದು ಪೈಝಿ ಮಾಡಲಿದ್ದಾರೆ.

ರಾತ್ರಿ ಶಮೀರ್ ಆಶ್ರಫಿ ಕಾಟ್ಟಾಂಬಳ್ಳಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ತಾ ೭ ರಂದು ರಾತ್ರಿ ಉಸ್ತಾದ್ ಬಶೀರ್ ಪೈಝಿ ದೇಶಮಂಗಲA ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.

ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ನಾಇಬ್ ಖಾಝಿ ಅಬ್ದುಲ್ಲ ಪೈಝಿ, ಮುದರಿಸ್ ನಿಝರ್ ಪೈಝಿ ಸೇರಿದಂತೆ ಧಾರ್ಮಿಕ ಪಂಡಿತರು, ಧರ್ಮಗುರುಗಳು, ಸಮಾಜ ಸೇವಕರು, ಜನಪ್ರತಿನಿಧಿಗಳು ಹಾಗೂ ಮತ್ತಿತರರು ಭಾಗವಹಿಸಲಿದ್ದಾರೆ. ತಾ ೬ ಮತ್ತು ೭ ರಂದು ಎಲ್ಲಾ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಲಿದೆ.