ಸುಂಟಿಕೊಪ್ಪ, ಫೆ. ೫: ಕೊಡಗರಹಳ್ಳಿ, ಕಂಬಿಬಾಣೆ, ಚಿಕ್ಲಿಹೊಳೆ ಕಾಂಕ್ರೀಟ್ ರಸ್ತೆ ನಿರ್ಮಾಣದ ಮುಂದುವರಿದ ಕಾಮಗಾರಿಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಕೊಡಗರಹಳ್ಳಿಯ ಸಂಜೀವ ಗಲ್ಲಿಯಲ್ಲಿ ಭೂಮಿಪೂಜೆ ನೆರವೇರಿಸಿದರು.

ಭೂಮಿಪೂಜೆ ನೇರವೇರಿಸಿ ಮಾತನಾಡಿದ ಅವರು, ಈ ವ್ಯಾಪ್ತಿಯ ಮಣ್ಣು ಎರೆಮಣ್ಣಾದ ಹಿನ್ನಲೆಯಲ್ಲಿ ಡಾಂಬರೀಕರಣ ಮಾಡಿದರೂ ಅದು ನಿಲ್ಲದೆ ರಸ್ತೆ ಗುಂಡಿ ಬಿದ್ದು ಸಂಚಾರಕ್ಕೆ ದುಸ್ತರವೆನ್ನಿಸಿತ್ತು. ಹೀಗಾಗಿ ಕಾಂಕ್ರೀಟ್ ರಸ್ತೆಗೆ ಅನುಮೋದನೆ ಮಾಡಿ ಈಗಾಗಲೇ ೨ನೇ ಹಂತದ ಕಾಮಗಾರಿ ಪೂರೈಸಿದ್ದು, ಇದೀಗ ೩ನೇ ಹಂತದ ಮುಂದುವರಿದ ಕಾಮಗಾರಿಯನ್ನು ರೂಪಾಯಿ ಒಂದೂವರೆ ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದ್ದು ಗುಣಮಟ್ಟದ ಕಾಮಗಾರಿಯನ್ನು ಅಧಿಕಾರಿಗಳು ಮತ್ತು ಸಾರ್ವಜನಿಕರು ಗುತ್ತಿಗೆದಾರರಿಂದ ಮಾಡಿಸಿ ಕೊಳ್ಳಬೇಕೆಂದು ಕಿವಿಮಾತು ಹೇಳಿದರು.

ಈ ಸಂದರ್ಭ ಸೋಮವಾರ ಪೇಟೆ ತಾಲೂಕು ಭೂನ್ಯಾಯ ಮಂಡಳಿ ಸದಸ್ಯ ಡಾ. ಶಶಿಕಾಂತ್ ರೈ ಮಾತನಾಡಿ, ಈಗಾಗಲೇ ರಸ್ತೆ ಕಾಮಗಾರಿ ಅಂತಿಮ ಹಂತಕ್ಕೆ ಬಂದಿದ್ದು ಸರಿ ಸುಮಾರು ೨ ಕಿ.ಮೀ. ರಸ್ತೆ ಬಾಕಿಯಿದ್ದು ಇದನ್ನು ಕೂಡ ಶಾಸಕರು ಆದಷ್ಟು ಅನುದಾನ ಒದಗಿಸುವ ಮೂಲಕ ಕಾವiಗಾರಿ ಯನ್ನು ಪೂರ್ಣಗೊಳಿಸಲು ಸಹಕರಿಸುವಂತೆ ಮನವಿ ಮಾಡಿದರು. ತಕ್ಷಣ ಪ್ರತಿಕ್ರಿಯಿಸಿದ ಶಾಸಕರು ೨ ತಿಂಗಳ ಒಳಗಾಗಿ ಅನುದಾನ ವiಂಜೂರು ಮಾಡಿಸಿ ಕಾಮಗಾರಿಯನ್ನು ಪೂರೈಸುವುದಾಗಿ ಖಚಿತ ಭರವಸೆ ನೀಡಿದರು.

ಈ ಸಂದರ್ಭ ಕೊಡಗರಹಳ್ಳಿ ಗ್ರಾ.ಪಂ. ಅಧ್ಯಕ್ಷ ಸುನಿತ್, ಪಿಡಿಓ ರಾಜಶೇಖರ್, ಸದಸ್ಯರುಗಳು, ಕಂಬಿಬಾಣೆ ಗ್ರಾ.ಪಂ. ಅಧ್ಯಕ್ಷೆ ಮಧುನಾಗಪ್ಪ ಪಿಡಿಓ ಮಧುಮತಿ, ಸದಸ್ಯರುಗಳು, ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಬ್ಯಾಂಕ್ ಅಧ್ಯಕ್ಷ ದಾಸಂಡ ರಮೇಶ್ ಚಂಗಪ್ಪ, ಯುವ ಮೋರ್ಚಾ ಅಧ್ಯಕ್ಷ ಚಂದ್ರಶೇಖರ್ ಮತ್ತಿತರರು ಇದ್ದರು.