ಪೊನ್ನಂಪೇಟೆ, ಫೆ. ೪: ಪೊನ್ನಂಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಬೆಸಗೂರು ಗ್ರಾಮದಲ್ಲಿ ನಿಯಂತ್ರಣ ತಪ್ಪಿ ಟಿಲ್ಲರ್ ಮಗುಚಿ ಬಿದ್ದ ಪರಿಣಾಮ ಟಿಲ್ಲರ್‌ನ ಕೆಳಗೆ ಸಿಲುಕಿ ಚಾಲಕ ಸ್ಥಳದಲ್ಲೇ ಸಾವಿಗೀಡಾದ ಘಟನೆ ನಡೆದಿದೆ. ಇಲ್ಲಿನ ಜಯಂತಿ ಕಾಲೋನಿಯ ನಿವಾಸಿ ಕಾರ್ಮಿಕ ವೆಂಕಟೇಶ್ (೫೧) ಎಂಬವರೇ ಮೃತಪಟ್ಟ ದುರ್ದೈವಿ. ಟಿಲ್ಲರ್‌ನಲ್ಲಿ ಮರಗೆಲಸದ ಯಂತ್ರವನ್ನು ತೆಗೆದುಕೊಂಡು ತೆರಳುತಿದ್ದ ಸಂದರ್ಭ ನಿಯಂತ್ರಣ ತಪ್ಪಿದ ಟಿಲ್ಲರ್ ರಸ್ತೆ ಬದಿ ಕಲ್ಲಿಗೆ ಡಿಕ್ಕಿ ಹೊಡೆದು ಮಗುಚಿಕೊಂಡ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಈ ಬಗ್ಗೆ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.