ಕಡಂಗ, ಫೆ. ೪: ಸಮೀಪದ ಕರಡ ಗ್ರಾಮದಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದೆ. ಕಾಫಿ ಫಸಲನ್ನು ಕಾಡಾನೆಗಳು ತಿಂದು ನಾಶಪಡಿಸುತ್ತಿದ್ದು, ಕಾಫಿ ಬೆಳೆಗಾರರು, ಕರಡ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು ಬೆಳೆಗಾರರ ಜೀವನಕೆ ಆಸರೆಯಾಗಿರುವ ಕಾಫಿ ಫಸಲನ್ನು ಕಾಡನೆಗಳು ತಿಂದು ನಾಶಪಡಿಸುತಿದ್ದು, ಬೆಳೆಗಾರರು ನಷ್ಟ ಅನುಭವಿಸುವಂತಾಗಿದೆ.
ಕಳೆದ ಹಲವಾರು ವರ್ಷಗಳಿಂದ ಈ ಭಾಗದಲ್ಲಿ ಕಾಡಾನೆಗಳ ಹಾವಳಿ ನಿರಂತರವಾಗಿದ್ದು, ಹಲವಾರು ಬಾರಿ ಅರಣ್ಯ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅರಣ್ಯ ಇಲಾಖೆ ಈ ಬಗ್ಗೆ ಗಮನ ಹರಿಸಿ ಪರಿಹಾರ ಒದಗಿಸಿಕೊಡುವಂತೆ ಪಂಚಾಯತ್ ಸದಸ್ಯ ವಿಲಿನ್ ಬೇಪಡಿಯಂಡ ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.