ಬ್ಯಾಂಕ್ ಆಫ್ ಇಂಡಿಯಾ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಹಕ
ನಾಡಿಯಾದ್, ಫೆ. ೫: ಬ್ಯಾಂಕ್ ಸಿಬ್ಬಂದಿಗೆ ಗ್ರಾಹಕನೊಬ್ಬ ಮನಬಂದAತೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಗುಜರಾತ್ನಲ್ಲಿ ನಡೆದಿದೆ. ಬ್ಯಾಂಕ್ ಆಫ್ ಇಂಡಿಯಾ ನಾಡಿಯಾಡ್ ಶಾಖೆಯಲ್ಲಿ ಈ ಘಟನೆ ನಡೆದಿದೆ. ಕೊನೆಗೆ ಇಬ್ಬರು ಶಂಕಿತರನ್ನು ಪೊಲೀಸರು ಬಂಧಿಸಿದ್ದು, ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಹಲ್ಲೆಗೊಳಗಾದ ಬ್ಯಾಂಕ್ ಸಿಬ್ಬಂದಿಯನ್ನು ಮನೀಶ್ ಧಂಗರ್ ಎಂದು ಗುರುತಿಸಲಾಗಿದೆ. ಗ್ರಾಹಕ ಸಮರ್ಥ್ ಬ್ರಹ್ಮಭಟ್ ತನಗೆ ೨-೩ ಬಾರಿ ಕಪಾಳಕ್ಕೆ ಹೊಡೆದು, ಒದ್ದಿರುವುದಾಗಿ ಪೊಲೀಸ್ ದೂರಿನಲ್ಲಿ ಮನೀಶ್ ಧಂಗರ್ ಆರೋಪಿಸಿದ್ದಾರೆ. ಇತರ ಬ್ಯಾಂಕ್ ಉದ್ಯೋಗಿಗಳು ಸಮರ್ಥನನ್ನು ತಡೆಯಲು ಪ್ರಯತ್ನಿಸಿದಾಗ, ಆರೋಪಿಯ ಜೊತೆಗಿದ್ದ ಅವನ ಸ್ನೇಹಿತ ಪಾರ್ಥ್ ಕೂಡ ನನಗೆ ಒದ್ದಿದ್ದಾನೆ ಎಂದು ಧಂಗರ್ ಪೊಲೀಸರಿಗೆ ತಿಳಿಸಿದ್ದಾರೆ. ಬ್ಯಾಂಕ್ನಿAದ ಸಾಲ ಪಡೆದಿರುವ ಆರೋಪಿ ಸಮರ್ಥ್ ತನ್ನ ಮನೆ ವಿಮಾ ಪಾಲಿಸಿಯ ಪ್ರತಿಯನ್ನು ಪ್ರಸ್ತುತಪಡಿಸಲು ನಿರಂತರವಾಗಿ ಕೇಳಿದ್ದರಿಂದ ಅಸಮಾಧಾನಗೊಂಡಿದ್ದ, ವಿಮಾ ಪಾಲಿಸಿಯನ್ನು ಸಲ್ಲಿಸುವುದಿಲ್ಲ ಎಂದು ಫೋನ್ ಮೂಲಕ ಬೆದರಿಕೆ ಹಾಕಿದ್ದ ಎಂದು ಧಂಗರ್ ತಿಳಿಸಿದ್ದಾರೆ.
ಕಾಶ್ಮೀರ: ಮನೆಗಳಲ್ಲಿ ಬಿರುಕು, ಐದು ಕುಟುಂಬಗಳ ಸ್ಥಳಾಂತರ
ಜಮ್ಮು, ಫೆ. ೫: ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯಲ್ಲಿ ಹೆದ್ದಾರಿಯೊಂದರ ವಿಸ್ತರಣೆ ಕಾಮಗಾರಿಯ ನಂತರ ಕೆಲವು ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದರಿAದ ಐದು ಕುಟುಂಬಗಳನ್ನು ಶಾಲಾ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಬಸ್ತಿ ಪ್ರದೇಶದಲ್ಲಿ ಗುಡ್ಡ ಕುಸಿಯಲು ಆರಂಭಿಸಿದ ನಂತರ ಹೆದ್ದಾರಿ ನಿರ್ಮಾಣ ಕಂಪೆನಿ ಕಟಿಂಗ್ ಚಟುವಟಿಕೆ ನಡೆಸಿದ ಪರಿಣಾಮ ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಠಾಣಾಧಿಕಾರಿ (ಎಸ್ಹೆಚ್ಒ) ಮತ್ತು ತಹಶೀಲ್ದಾರ್, ಐದು ಕುಟುಂಬಗಳನ್ನು ಶಾಲೆಗೆ ಸ್ಥಳಾಂತರಿಸಿದ್ದಾರೆ. ಹೆದ್ದಾರಿ ವಿಸ್ತರಣೆ ಕಾಮಗಾರಿಯಿಂದ ಈ ಪ್ರದೇಶದ ೨೦ ರಿಂದ ೨೫ ಮನೆಗಳು ಅಸುರಕ್ಷಿತವಾಗಿವೆ ಎಂದು ಆರೋಪಿಸಿರುವ ಅಲ್ಲಿನ ನಿವಾಸಿಗಳು, ನಿರ್ಮಾಣ ಕಂಪೆನಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಕಾಂಗ್ರೆಸ್ನಿAದ ಇಂದು ದೇಶಾದ್ಯಂತ ಪ್ರತಿಭಟನೆ
ನವದೆಹಲಿ, ಫೆ. ೫: ಹಿಂಡೆನ್ಬರ್ಗ್-ಅದಾನಿ ವಿವಾದ ಸಂಬAಧ ಕಾಂಗ್ರೆಸ್ ತಾ. ೬ ರಂದು (ಇಂದು) ಸಂಸತ್ತಿನಿAದ ಬೀದಿಗಿಳಿದು ಪ್ರತಿಭಟನೆ ನಡೆಸಲಿದೆ. ಜೀವ ವಿಮಾ ನಿಗಮದ ಕಚೇರಿಗಳು ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗಳ ಮುಂದೆ ದೇಶಾದ್ಯಂತ ಪ್ರತಿಭಟನೆ ನಡೆಸಲು ಪಕ್ಷ ನಿರ್ಧರಿಸಿದೆ. ರಾಷ್ಟç ರಾಜಧಾನಿಯ ಎಸ್ಬಿಐ ಕಚೇರಿ ಮತ್ತು ಪಾರ್ಲಿಮೆಂಟ್ ಪೊಲೀಸ್ ಠಾಣೆಯಲ್ಲಿರುವ ಎಲ್ಐಸಿ ಕಚೇರಿಯ ಹೊರಗೆ ಎನ್ಎಸ್ಯುಐ-ಯೂತ್ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ. ದೇಶಾದ್ಯಂತ ಕಾಂಗ್ರೆಸ್ ನಾಯಕರು ಎಸ್ಬಿಐ ಕಚೇರಿ ಮತ್ತು ಎಲ್ಐಸಿ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಲಿದ್ದು, ರಾಜ್ಯಗಳ ನಾಯಕರು ಇದರಲ್ಲಿ ಭಾಗವಹಿಸಲಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಬಾಂಬ್ ಸ್ಫೋಟ; ಟಿಎಂಸಿ ಕಾರ್ಯಕರ್ತ ಬಲಿ
ಕೋಲ್ಕತ್ತಾ, ಫೆ. ೫: ಬಿರ್ಭೂಮ್ ಜಿಲ್ಲೆಯ ಮಾರ್ಗ್ರಾಮ್ನಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತ ಸಾವಿಗೀಡಾಗಿದ್ದು, ಆಡಳಿತ ಪಕ್ಷದ ಪಂಚಾಯಿತಿ ಮುಖ್ಯಸ್ಥನ ಸಹೋದರನಿಗೆ ಗಾಯವಾಗಿದೆ. ಈ ದಾಳಿಗೆ ಕಾಂಗ್ರೆಸ್ ಬೆಂಬಲಿಗರೇ ಕಾರಣ ಎಂದು ಮೃತ ನ್ಯೂಟನ್ ಶೇಖ್ ಅವರ ಕುಟುಂಬ ಸದಸ್ಯರು ಆರೋಪಿಸಿದರೆ, ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಅವರು ಯಾವುದೇ ರೀತಿಯ ದೈಹಿಕ ದಾಳಿಯಲ್ಲಿ ಭಾಗಿಯಾಗಲು ಮಾರ್ಗ್ರಾಮ್ನಲ್ಲಿ ಪಕ್ಷವು ಕಡಿಮೆ ಅಸ್ತಿತ್ವವನ್ನು ಹೊಂದಿದೆ ಎಂದು ಹೇಳಿದ್ದಾರೆ. ಬಾಂಬ್ ದಾಳಿಯಲ್ಲಿ ನ್ಯೂಟನ್ ಶೇಖ್ ಮೃತಪಟ್ಟಿದ್ದರೆ, ಗಾಯಗೊಂಡ ಲಾಲ್ತು ಶೇಖ್ ಅವರನ್ನು ಚಿಕಿತ್ಸೆಗಾಗಿ ಕೋಲ್ಕತ್ತಾದ ಸರ್ಕಾರಿ ಎಸ್ಎಸ್ಕೆಎಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಿರ್ಭೂಮ್ ಜಿಲ್ಲೆ ಜಾರ್ಖಂಡ್ನೊAದಿಗೆ ಗಡಿಯನ್ನು ಹಂಚಿಕೊAಡಿರುವ ಕಾರಣ ಮಾವೋವಾದಿಗಳು ದಾಳಿಯಲ್ಲಿ ಭಾಗಿಯಾಗಿರಬಹುದೆಂಬ ಶಂಕೆ ವ್ಯಕ್ತಪಡಿಸಿದ ಪಶ್ಚಿಮ ಬಂಗಾಳ ನಗರಾಭಿವೃದ್ಧಿ ಸಚಿವ ಫಿರ್ಹಾದ್ ಹಕೀಮ್, ದಾಳಿಯನ್ನು ಹೇಗೆ ಮತ್ತು ಏಕೆ ನಡೆಸಲಾಗಿದೆ ಎಂಬುದನ್ನು ಕಂಡುಹಿಡಿಯಲು ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಬೇಕು ಎಂದು ಹೇಳಿದರು. ಇದರ ಹಿಂದೆ ದೊಡ್ಡ ಪಿತೂರಿ ಇದೆ ಎಂದು ನಾನು ಭಾವಿಸುತ್ತೇನೆ ಮತ್ತು ಈ ಬಾಂಬ್ಗಳನ್ನು ತಯಾರಿಸಲು ಸಂಗ್ರಹಿಸಿದ ಸಾಮಗ್ರಿಗಳ ಮೂಲವನ್ನು ತನಿಖೆ ಮಾಡಬೇಕು ಎಂದು ಅವರು ಮಾರ್ಗ್ರಾಮ್ನಲ್ಲಿ ಗಾಯಗೊಂಡ ಲಾಲ್ತು ಅವರನ್ನು ಭೇಟಿಯಾದ ನಂತರ ಟಿಎಂಸಿ ಪಂಚಾಯಿತಿ ಮುಖ್ಯಸ್ಥರು ಸುದ್ದಿಗಾರರಿಗೆ ತಿಳಿಸಿದರು. ಮಾರ್ಗ್ರಾಮ್ದಲ್ಲಿ ಕಾಂಗ್ರೆಸ್ಗೆ ಯಾವುದೇ ಸಂಘಟನಾ ಶಕ್ತಿ ಇಲ್ಲ ಎಂದು ಹೇಳಿದ ಚೌಧರಿ, ಈ ವಿಷಯ ತಿಳಿದಿದ್ದರೂ ಪಕ್ಷಕ್ಕೆ ಪ್ರಚಾರ ನೀಡಲು ಯಾರಾದರೂ ಬಯಸಿದರೆ, ಅದರ ಬಗ್ಗೆ ನನಗೆ ಯಾವುದೇ ಸಮಸ್ಯೆ ಇಲ್ಲ. ದಾಳಿಕೋರರು ಮತ್ತು ಸಂತ್ರಸ್ತರು ಇಬ್ಬರೂ ಟಿಎಂಸಿಗೆ ಸೇರಿದವರು ಎಂಬುದು ಎಲ್ಲರಿಗೂ ತಿಳಿಸಿದೆ ಎಂದು ಹೇಳಿದರು.
ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ನಿಧನ
ಇಸ್ಲಾಮಾಬಾದ್, ಫೆ. ೫: ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಭಾನುವಾರ ದುಬೈನ ಆಸ್ಪತ್ರೆಯಲ್ಲಿ ನಿಧನರಾದರು. ೭೯ ವರ್ಷದ ಮುಷರಫ್ ಅಮಿಲಾಯ್ಡೋಸಿಸ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದರು. ಇದು ದೇಹದಾದ್ಯಂತ ಅಂಗಗಳು ಮತ್ತು ಅಂಗಾAಶಗಳಲ್ಲಿ ಅಮಿಲಾಯ್ಡ್ ಎಂಬ ಅಸಹಜ ಪ್ರೊಟೀನ್ ಸಂಗ್ರಹವಾಗುವುದರಿAದ ಉಂಟಾಗುವ ಅಪರೂಪದ ಕಾಯಿಲೆಯಾಗಿದೆ. ದುಬೈನ ಅಮೆರಿಕನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜನರಲ್ (ನಿವೃತ್ತ) ಮುಷರಫ್ ಅವರು ನಿಧನರಾಗಿದ್ದಾರೆ.
ಚೀನಾದಲ್ಲಿ ವಾಹನಗಳ ಸರಣಿ ಅಪಘಾತ, ೧೬ ಮಂದಿ ಸಾವು
ಬೀಜಿಂಗ್, ಫೆ. ೫: ಮಧ್ಯ ಚೀನಾದ ಹುನಾನ್ ಪ್ರಾಂತ್ಯದಲ್ಲಿ ಸಂಭವಿಸಿದ ಸರಣಿ ಅಪಘಾತದಲ್ಲಿ ಕನಿಷ್ಟ ೧೬ ಮಂದಿ ಸಾವನ್ನಪ್ಪಿದ್ದಾರೆ ಮತ್ತು ೬೬ ಜನ ಗಾಯಗೊಂಡಿದ್ದಾರೆ. ಶನಿವಾರ ಸಂಜೆ ಹುನಾನ್ ಪ್ರಾಂತ್ಯದ ಚಾಂಗ್ಶಾ ನಗರದ ಕ್ಸುಚಾಂಗ್-ಗುವಾAಗ್ಝೌ ಹೆದ್ದಾರಿಯಲ್ಲಿ ೧೦ ನಿಮಿಷಗಳಲ್ಲಿ ಒಟ್ಟು ೪೯ ವಾಹನಗಳು ಪರಸ್ಪರ ಡಿಕ್ಕಿ ಹೊಡೆದು ಈ ಸರಣಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ೧೬ ಜನ ಸಾವನ್ನಪ್ಪಿದ್ದಾರೆ ಮತ್ತು ೬೬ ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಸಂಚಾರ ಪೊಲೀಸ್ ಇಲಾಖೆ ಮಾಹಿತಿ ನೀಡಿದ್ದಾರೆ. ಎಲ್ಲಾ ಗಾಯಾಳುಗಳನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ, ಅವರಲ್ಲಿ ಎಂಟು ಮಂದಿಯ ಸ್ಥಿತಿ ಗಂಭೀರವಾಗಿದೆ.