ಮಡಿಕೇರಿ, ಫೆ. ೫: ಜಂಬೂರು ಗ್ರಾಮದಲ್ಲಿ ಕೈಗೊಂಡ ಹರ್ ಘರ್ ತಿರಂಗ ಕಾರ್ಯಕ್ರಮಕ್ಕಾಗಿ ಮಡಿಕೇರಿಯ ರೋಟರಿ ವುಡ್ಸ್ ಸಂಸ್ಥೆಗೆ ಜಿಲ್ಲಾ ರೋಟರಿ ಸಂಸ್ಥೆಯಿAದ ಉತ್ತಮ ಯೋಜನೆ ಪ್ರಶಂಸನಾ ಪತ್ರ ದೊರಕಿದೆ.
ಇತ್ತೀಚಿಗೆ ಮಂಗಳೂರಿನಲ್ಲಿ ಆಯೋಜಿತವಾಗಿದ್ದ ರೋಟರಿ ಜಿಲ್ಲೆ ೩೧೮೧ನ ಜಿಲ್ಲಾ ಸಮಾವೇಶದಲ್ಲಿ ರೋಟರಿ ವುಡ್ಸ್ ಅಧ್ಯಕ್ಷ ಎಸ್.ಎಸ್. ಸಂಪತ್ ಕುಮಾರ್, ಕಾರ್ಯದರ್ಶಿ ವಸಂತ್ ಕುಮಾರ್ ಈ ಪ್ರಶಂಸನಾ ಪತ್ರವನ್ನು ರೋಟರಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ಅವರಿಂದ ಸ್ವೀಕರಿಸಿದರು.
ಕಳೆದ ಆಗಸ್ಟ್ ೧೫ ರಂದು ಜಂಬೂರು ಗ್ರಾಮದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಬಡಾವಣೆಯಲ್ಲಿ ಸ್ವಾತಂತ್ರ್ಯೋತ್ಸವದAದು ರೋಟರಿ ವುಡ್ಸ್ನಿಂದ ಬಡಾವಣೆಯ ಪ್ರತೀ ಮನೆಗೂ ರಾಷ್ಟçಧ್ವಜ ವಿತರಿಸಿ ಧ್ವಜ ಹಾರಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಯೋಜನೆಯನ್ನು ಉತ್ತಮ ಯೋಜನೆ ಎಂದು ಪರಿಗಣಿಸಿ ಪ್ರಶಂಸನಾ ಪತ್ರ ನೀಡಲಾಗಿದೆ.
ರೋಟರಿ ವಲಯ ಸಹಾಯಕ ಗವರ್ನರ್ ರತನ್ ತಮ್ಮಯ್ಯ, ವಲಯ ಸೇನಾನಿ ಎನ್.ಡಿ. ಅಚ್ಚಯ್ಯ, ಕ್ಲಬ್ ಸಲಹೆಗಾರ ಬಿ.ಜಿ. ಅನಂತಶಯನ, ಪಬ್ಲಿಕ್ ಇಮೇಜ್ ಜಿಲ್ಲಾ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ., ಕ್ಲಬ್ನ ಸಲಹೆಗಾರ ಮೋಹನ್ ಪ್ರಭು ಸೇರಿದಂತೆ ವುಡ್ಸ್ನ ಸದಸ್ಯರು ಹಾಜರಿದ್ದರು.