ಕುಶಾಲನಗರ. ಫೆ. ೩: ಕುಶಾಲನಗರ ಪಟ್ಟಣದ ಸ್ವಚ್ಛತೆಗಾಗಿ ನೂತನವಾಗಿ ಖರೀದಿಸಿದ ನಾಲ್ಕು ಸ್ವಚ್ಛತಾ ವಾಹನ ಗಳಿಗೆ ಕ್ಷೇತ್ರ ಶಾಸಕ ಅಪ್ಪಚ್ಚು ರಂಜನ್ ಚಾಲನೆ ನೀಡುವ ಮೂಲಕ ಲೋಕಾ ರ್ಪಣೆಗೊಳಿಸಿದರು. ಸುಮಾರು ರೂ. ೨೮ ಲಕ್ಷ ವೆಚ್ಚದಲ್ಲಿ ಪುರಸಭೆ ನಾಲ್ಕು ವಾಹನಗಳನ್ನು ಖರೀದಿಸಿದ್ದು, ಇವುಗಳನ್ನು ಪಟ್ಟಣದ ಸ್ವಚ್ಛತಾ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತದೆ ಎಂದು ಪುರಸಭೆ ಅಧ್ಯಕ್ಷ ಜಯವರ್ಧನ್ ತಿಳಿಸಿದ್ದಾರೆ.