ಗೋಣಿಕೊಪ್ಪಲು, ಫೆ. ೩: ಸಹಕಾರ ಕ್ಷೇತ್ರದಲ್ಲಿ ಕೊಡಗಿನ ಸಹಕಾರಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಹಲವು ಹಿರಿಯ ಸಹಕಾರಿಗಳ ಚಿಂತನೆಯಿAದ ಪ್ರಾರಂಭವಾದ ಸಹಕಾರ ಸಂಘಗಳು ಇಂದು ಕೋಡಗಿನಲ್ಲಿ ತನ್ನದೆ ಆದ ಛಾಪನ್ನು ಮೂಡಿಸಿದೆ. ಇದರಿಂದ ರೈತರಿಗೆ ಸಕಾಲದಲ್ಲಿ ಸಾಲ ಯೋಜನೆಗಳು ಸೇರಿದಂತೆ ಇನ್ನಿತರ ಸವಲತ್ತುಗಳು ಸಹಕಾರ ಸಂಘಗಳು ಸಮಯಕ್ಕೆ ಸರಿಯಾಗಿ ಒದಗಿಸುತ್ತಿದೆ ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಶ್ಲಾಘನೆ ವ್ಯಕ್ತಪಡಿಸಿದರು.
ಶ್ರೀಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಗೋದಾಮು ಹಾಗೂ ಕಚೇರಿ ಕಟ್ಟಡವನ್ನು ಲೋಕಾರ್ಪಣೆ ಮಾಡಿ ಗ್ರಾಮದ ಸಹಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಕೊಡಗು ಜಿಲ್ಲೆಯಲ್ಲಿ ಬಹುತೇಕ ಸಹಕಾರಿ ಸಂಘಗಳು ಅತ್ಯುತ್ತಮ ರೀತಿಯಲ್ಲಿ ರೈತರಿಗೆ ಸೇವೆ ನೀಡುತ್ತಿದ್ದು ಮುಂಜಾನೆ ಆರ್‌ಟಿಸಿ ಪತ್ರ ನೀಡಿದರೆ ಸಂಜೆಯ ವೇಳೆ ರೈತರಿಗೆ ಸಾಲವನ್ನು ಮಂಜೂರು ಮಾಡುವ ಮಟ್ಟಿಗೆ ಬೆಳೆದು ನಿಂತಿದೆ. ಉತ್ತಮ ಆಡಳಿತ ಮಂಡಳಿಯ ಕಾರ್ಯದಿಂದ ಇಂತಹ ಕೆಲಸಗಳು ಸಾರ್ವಜನಿಕರಿಗೆ ಅನುಕೂಲಕರ ವಾಗಿದೆ. ಈ ನಿಟ್ಟಿನಲ್ಲಿ ಶ್ರೀಮಂಗಲ ಸಹಕಾರ ಸಂಘವು ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ.
ಸಾಕಷ್ಟು ರೈತರಿಗೆ ಈ ಸುತ್ತಮುತ್ತಲಿನ ಜನತೆಗೆ ಇದರಿಂದ ಪ್ರಯೋಜನವಾಗುತ್ತಿದೆ. ಮುಂದೆಯೂ ಸಹಕಾರಿ ಸಂಘಗಳು ಮತ್ತಷ್ಟು ಉಪಯುಕ್ತ ಯೋಜನೆಗಳನ್ನು ನೀಡುವಂತಾಗಬೇಕು. ಕಾಲಕಾಲಕ್ಕೆ ತಕ್ಕಂತೆ ರಾಜ್ಯ ಹಾಗೂ ಕೇಂದ್ರ ಸರಕಾರಗಳು ರೈತರಿಗೆ ವಿವಿಧ ಯೋಜನೆಗಳನ್ನು ಮಂಜೂರು ಮಾಡುತ್ತಿದೆ. ಇದನ್ನು ಸಕಾಲದಲ್ಲಿ ಬಳಸಿಕೊಳ್ಳುವಂತೆ ಕರೆ ನೀಡಿದರು. ಸಹಕಾರಿ ಸಂಘಗಳಿಗೆ ಒಂದೇ ರೀತಿ ಬೈಲಾಗಳು ಇರುವಂತೆಯೂ, ಯಾವುದೇ ಸರ್ಕಾರಿ ಸಂಸ್ಥೆಯ ಹಿಡಿತದಲ್ಲಿ ಸಂಘಗಳು ಸಿಲುಕದಂತೆ ಕ್ರಮ ವಹಿಸುವ ಸಲುವಾಗಿ ಕೇಂದ್ರ ಸರ್ಕಾರ ದೇಶದಲ್ಲಿ ಒಂದೇ ರೀತಿಯ ಕಾನೂನನ್ನು ತರುವ ನಿಟ್ಟಿನಲ್ಲಿ ಕ್ರಮ ವಹಿಸಿದೆ. ಸಹಕಾರ ಸಂಘಗಳಿಗೆ ಸಂಪೂರ್ಣ ಸ್ವಾತಂತ್ರö್ಯ ನೀಡುವ ಸಲುವಾಗಿ ಈ ರೀತಿಯ ಕಾನೂನು ಜಾರಿಗೆ ಬರಲಿದೆ ಎಂದರು.
ಶ್ರೀಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಜ್ಜಮಾಡ ಚಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಜನತೆಗೆ ಉತ್ತಮ ಸೇವೆ ನೀಡುವ ಸಲುವಾಗಿ ರೂ. ೧.೩೦ ಕೋಟಿ ವೆಚ್ಚದಲ್ಲಿ ನೂತನ ಕಟ್ಟಡವನ್ನು ಕಟ್ಟಲಾಗಿದೆ. ಹಿರಿಯರು ಕಟ್ಟಿ ಬೆಳೆಸಿದ ಸಂಘವನ್ನು ಆಡಳಿತ ಮಂಡಳಿ ಉತ್ತಮವಾಗಿ ಮುನ್ನಡೆಸಿಕೊಂಡು ತೆರಳುತ್ತಿವೆ. ಶಾಸಕರ ರೂ. ೫ ಲಕ್ಷ ಅನುದಾನ ಹಾಗೂ ಡಿಸಿಸಿ ಬ್ಯಾಂಕಿನ ಸಹಕಾರ ಪಡೆಯಲಾಗಿದೆ. ಮುಂದಿನ ದಿನದಲ್ಲಿ ಸಂಘದ ಆವರಣದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಎಟಿಎಂ ಕೇಂದ್ರವನ್ನು ಸ್ಥಾಪಿಸ ಲಾಗುತ್ತದೆ. ಆರಂಭದ ದಿನದಲ್ಲಿ ಕಟ್ಟಡ ನಿರ್ಮಾಣಕ್ಕೆ ನಾಡಿನ ಕೆಲವು ಮಂದಿ ವಿರೋಧ ವ್ಯಕ್ತಪಡಿಸಿದ್ದರು. ಈ ವೇಳೆ ಶಾಸಕರು ಮುಂದೆ ನಿಂತು ಸಮಸ್ಯೆಯನ್ನು ಬಗೆಹರಿಸಿದ್ದಾರೆ. ಇಂದು ಬೃಹತ್ ಕಟ್ಟಡವು ಲೋಕಾರ್ಪಣೆ ಯಾಗಿದೆ. ಸುತ್ತಮುತ್ತಲಿನ ರೈತರಿಗೆ ಉತ್ತಮ ಸೇವೆ ನೀಡುವುದು ಸಂಘದ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಆಡಳಿತ ಮಂಡಳಿಯು ಉತ್ತಮ ನಿರ್ಧಾರಗಳನ್ನು ಕೈಗೊಂಡು ಗ್ರಾಹಕರಿಗೆ ಸೇವೆ ನೀಡಲು ಮುಂದಾಗುತ್ತಿದೆ ಎಂದರು.
ಕಟ್ಟಡದ ಅಡಿಪಾಯ ಸಂದರ್ಭ ಕಾಣದ ಕೈಗಳು ಸಾಕಷ್ಟು ಪ್ರಮಾಣದಲ್ಲಿ ಕಿರುಕುಳ ನೀಡಿದ್ದವು. ಪೊಲೀಸ್ ಠಾಣೆ, ನ್ಯಾಯಾಲಯದ ಮೆಟ್ಟಿಲೇರುವ ಪರಿಸ್ಥಿತಿ ಎದುರಾಗಿತ್ತು. ಈ ವೇಳೆ ಶಾಸಕರು ಮುಂದೆ ನಿಂತು ಧೈರ್ಯ ತುಂಬಿದರು. ಶಾಸಕರ ಕಾರ್ಯವನ್ನು ಸದಾ ಸ್ಮರಿಸುತ್ತೇವೆ. ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಯಾರೂ ಕೂಡ ತೊಂದರೆ ನೀಡಬಾರದು ಎಂದು ತಮ್ಮ ನೋವನ್ನು ಸಭೆಯ ಮುಂದೆ ತೋಡಿಕೊಂಡರು.
ವಿಧಾನಪರಿಷತ್ತು ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಸಂಘದ ನೂತನ ನಗದು ಕೊಠಡಿಯನ್ನು ಉದ್ಘಾಟಿಸಿದರು. ಗ್ರಾಮೀಣ ಭಾಗದಲ್ಲಿ ರೈತರಿಗೆ ಉತ್ತಮ ಸೇವೆ ನೀಡುವ ಸಲುವಾಗಿ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿದೆ ಎಂದರು. ಮುಖ್ಯ ಅತಿಥಿಗಳಾಗಿ ಮಾತನಾಡಿದ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷ ಕೊಡಂದೇರ ಪಿ. ಗಣಪತಿ, ಕೊಡಗು ಜಿಲ್ಲೆಯಲ್ಲಿ ೧೮ಕ್ಕೂ ಅಧಿಕ ಸಹಕಾರ ಸಂಘಗಳು ನೂತನ ಕಟ್ಟಡ ನಿರ್ಮಾಣಕ್ಕೆ ಮುಂದಾಗಿವೆ. ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿವೆ. ಸಹಕಾರ ಸಂಘಗಳಿಗೆ ಡಿಸಿಸಿ ಬ್ಯಾಂಕ್ ಸಕಾಲದಲ್ಲಿ ಸ್ಪಂದನ ನೀಡುತ್ತಿದೆ. ಸಂಘಗಳಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳಬೇಕು. ಗ್ರಾಹಕರಿಗೆ ಹಾಗೂ ರೈತರಿಗೆ ಸರ್ಕಾರದ ಯೋಜನೆಗಳನ್ನು ಸಕಾಲದಲ್ಲಿ ತಲುಪಿಸುವಂತಾಗಬೇಕು ಇದರಿಂದ ಸಂಘದ ಬೆಳವಣಿಗೆಗೆ ಅನುಕೂಲಕರವಾಗಲಿದೆ ಎಂದರು. ಗ್ರಾಮದ ಹಿರಿಯರಾದ ಅಜ್ಜಮಾಡ ಕಟ್ಟಿ ಮಂದಯ್ಯ ಮಾತನಾಡಿ, ಸಂಘದ ಬೆಳವಣಿಗೆಗೆ ಸಾಕಷ್ಟು ಮಂದಿ ದುಡಿದಿದ್ದಾರೆ. ಇಂದು ಸಂಘವು ಉತ್ತಮವಾಗಿ ಬೆಳೆಯಲು ಹಿರಿಯರ ಮಾರ್ಗದರ್ಶನ ಕಾರಣವಾಗಿದೆ ಎಂದರು.
ಸAಘದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದ ಮಾಜಿ ಅಧ್ಯಕ್ಷರುಗಳಾದ ಬಿ. ಪರಶಿವ, ಸುಳ್ಳಿಮಾಡ ಪಿ. ತಿಮ್ಮಯ್ಯ, ಬಾಚಂಗಡ ಎಂ. ಮುದ್ದಪ್ಪ, ಅಜ್ಜಮಾಡ ಎನ್. ಕರುಂಬಯ್ಯ, ಅಜ್ಜಮಾಡ ಎಸ್. ಮಂದಯ್ಯ, ಕಳ್ಳಂಗಡ ಪಿ. ಬಾಲಕೃಷ್ಣ, ಅಜ್ಜಮಾಡ ಎಸ್. ಕುಶಾಲಪ್ಪ, ಕೆ.ಎನ್. ಸಂದೀಪ್ ಹಾಗೂ ಗುತ್ತಿಗೆದಾರ ಬಿ.ಎಸ್. ಪ್ರಕಾಶ್ ಇವರುಗಳನ್ನು ಗಣ್ಯರು ಸನ್ಮಾನಿಸಿ ಗೌರವಿಸಿದರು.
ವೇದಿಕೆಯಲ್ಲಿ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ವಿ.ವಿ. ರಮೇಶ್‌ಬಾಬು, ಸಹಕಾರ ಸಂಘದ ಉಪನಿಬಂಧಕ ಎಂ.ಇ. ಮೋಹನ್, ಸೇರಿದಂತೆ ಶ್ರೀಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಅಯ್ಯಮಾಡ ಎ. ಉದಯ, ನಿರ್ದೇಶಕರುಗಳಾದ ಕೆ.ಎನ್. ಸಂದೀಪ್, ಚೋನಿರ ಜೆ. ಕಾಳಯ್ಯ, ಅಜ್ಜಮಾಡ ಪಿ. ಮೋಹನ್, ಮತ್ರಂಡ ಎಂ. ಮುತ್ತಪ್ಪ, ಚಟ್ಟಂಗಡ ಕೆ. ಗೀತಾ, ಅರೆಯಡ ಟಿ. ಬೊಳ್ಳಮ್ಮ, ಬಿ.ಆರ್. ಪುರುಷೋತ್ತಮ್, ಬಿ.ಆರ್. ಬೇಬಿ, ಕಾಳಿಮಾಡ ಎ. ಪ್ರಶಾಂತ್, ಹೆಚ್.ಎಸ್. ಕೇತು, ಐಪುಮಾಡ ದೇವಯ್ಯ, ಕಾಳಿಮಾಡ ಕೆ. ಬೆಳ್ಯಪ್ಪ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎ.ಬಿ. ಯತಿರಾಜ್, ಗಣ್ಯರು ಉಪಸ್ಥಿತರಿದ್ದರು. ಸಂಘದ ಸಿಬ್ಬಂದಿಗಳಾದ ಬಿ.ಕೆ. ಪ್ರಿಯಾಸ್ ನಿರೂಪಿಸಿ, ಬಿ.ಎಸ್. ಮುತ್ತಪ್ಪ ಪ್ರಾರ್ಥಿಸಿ ನಿರ್ದೇಶಕ ಮತ್ರಂಡ ಎಂ. ಮುತ್ತಪ್ಪ ಸ್ವಾಗತಿಸಿ, ವಂದಿಸಿದರು. ಸಹಕಾರಿ ಕ್ಷೇತ್ರದಲ್ಲಿ ದುಡಿದ ಸುತ್ತಮುತ್ತಲಿನ ಗ್ರಾಮದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
-ಹೆಚ್.ಕೆ. ಜಗದೀಶ್