ಮಡಿಕೇರಿ, ಫೆ. ೩: ವ್ಯಾಪಾರಿಯೋರ್ವರ ಮೊಬೈಲ್‌ನಿಂದ ಫೋನ್ ಪೇ ಮತ್ತು ಗೂಗಲ್ ಪೇ ಮೂಲಕ ಲಕ್ಷಾಂತರ ರೂಪಾಯಿ ಹಣ ಲಪಟಾಯಿಸಿದ್ದ ಯುವಕನನ್ನು ಸೈಬರ್ ಕ್ರೆöÊಂ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ.

ಕುಶಾಲನಗರ ಬಳಿಯ ಗುಮ್ಮನಕೊಲ್ಲಿಯ ದಿನಸಿ ಅಂಗಡಿಯ ಮಾಲೀಕರೋರ್ವರ ಮೊಬೈಲ್‌ನಿಂದ ಮಾಲೀಕರ ಅರಿವಿಗೆ ಬಾರದೆ ಫೋನ್ ಪೇ ಹಾಗೂ ಗೂಗಲ್ ಪೇ ಮೂಲಕ ರೂ.೪,೭೬,೪೫೬ ಮೊತ್ತವನ್ನು ಯುವಕನೋರ್ವ ಆತನ ಸ್ನೇಹಿತರ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ.

ಮೊಬೈಲ್ ಮೂಲಕ ಹಣ ಲಪಟಾಯಿಸಿದಾತನ ಬಂಧನ

(ಮೊದಲ ಪುಟದಿಂದ) ವ್ಯಾಪಾರಿಯ ಪುತ್ರಿ ಅನುಷ ಎಂಬಾಕೆ ಸೈಬರ್ ಕ್ರೆöÊಂ ಪೊಲೀಸರಿಗೆ ದೂರು ನೀಡಿದ್ದಳು. ದೂರಿನ ಆಧಾರದಲ್ಲಿ ತನಿಖೆೆ ಮುಂದುವರಿಸಿದ ಪೊಲೀಸರು, ಗುಡ್ಡೆಹೊಸೂರು ಬಳಿಯ ಬೊಳ್ಳೂರು ಗ್ರಾಮ ನಿವಾಸಿ ನೂತನ್ (೨೩) ಎಂಬಾತನನ್ನು ಬಂಧಿಸಿ ಆತನಿಂದ ರೂ. ೪,೭೬,೪೫೬ ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ಪೊಲೀಸ್ ಅಧೀಕ್ಷಕ ರಾಮರಾಜನ್ ಹಾಗೂ ಹೆಚ್ಚುವರಿ ಅಧೀಕ್ಷಕ ಸುಂದರ್‌ರಾಜ್ ಅವರುಗಳು ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಇಎನ್ ಅಪರಾಧ ಠಾಣೆ ನಿರೀಕ್ಷಕ ರಾಘವೇಂದ್ರ, ಉಪನಿರೀಕ್ಷಕÀ ಹೆಚ್.ಇ. ದೇವರಾಜು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.