ಮಡಿಕೇರಿ, ಫೆ. ೩: ಮಂಡ್ಯದ ಅಡಿಷನಲ್ ಎಸ್.ಪಿ.ಯಾಗಿ ಕೊಡಗಿನವರಾದ ಚೆಯ್ಯಂಡ ತಿಮ್ಮಯ್ಯ (ಅರುಣ್) ಅವರು ನೇಮಕಗೊಂಡಿದ್ದಾರೆ. ಜಿಲ್ಲೆಯ ಬಲಮುರಿ ನಿವಾಸಿ ಚೆಯ್ಯಂಡ ಈರಪ್ಪ ಹಾಗೂ ಲೀಲಾ ದಂಪತಿ ಪುತ್ರರಾಗಿರುವ ತಿಮ್ಮಯ್ಯ ಅವರು, ೧೯೯೪ರ ಬ್ಯಾಚ್‌ನಲ್ಲಿ ಎಸ್.ಐ.ಯಾಗಿ ಇಲಾಖೆಗೆ ಸೇರ್ಪಡೆಗೊಂಡು ಉಡುಪಿ - ಕಾರವಾರ ಮತ್ತಿತರೆಡೆಗಳಲ್ಲಿ ಎಎಸ್‌ಪಿ ಆಗಿ ಕರ್ತವ್ಯ ನಿರ್ವಹಿಸಿದ್ದರು. ಕೊಡಗಿನ ಎಎಸ್‌ಪಿ ಸುಂದರರಾಜ್ ಅವರ ಬ್ಯಾಚ್‌ನವರಾದ ಇವರು, ಈ ಹಿಂದೆ ಕೆ.ಪಿ.ಟಿ.ಸಿ.ಎಲ್.ನಲ್ಲಿ ವಿಜಿಲೆನ್ಸ್ ವಿಭಾಗದಲ್ಲಿ ಎಸ್.ಪಿ.ಯಾಗಿದ್ದರು. ಇದೀಗ ಮಂಡ್ಯ ಜಿಲ್ಲೆಯ ಅಡಿಷನಲ್ ಎಸ್‌ಪಿಯಾಗಿ ನಿಯುಕ್ತಿಗೊಂಡಿದ್ದು, ಅಧಿಕಾರ ವಹಿಸಿಕೊಂಡಿದ್ದಾರೆ.