(ಕೆ.ಎಂ ಇಸ್ಮಾಯಿಲ್ ಕಂಡಕರೆ)

ಮಡಿಕೇರಿ, ಫೆ. ೨: ಅಪ್ರತಿಮ ಕ್ರೀಡಾಪಟುಗಳನ್ನು ರಾಜ್ಯ, ದೇಶ ಹಾಗೂ ಅಂತರರಾಷ್ಟಿçÃಯ ಮಟ್ಟಕ್ಕೆ ಕೊಡುಗೆಯಾಗಿ ನೀಡಿದ ಹೆಗ್ಗಳಿಕೆ ಪುಟ್ಟ ಜಿಲ್ಲೆ ಕೊಡಗಿಗೆ ಸಲ್ಲುತ್ತದೆ. ಹಾಕಿಯಲ್ಲಿ ಕರ್ನಾಟಕದ ಪಂಜಾಬ್, ಫುಟ್ಬಾಲ್‌ನಲ್ಲಿ ಕರ್ನಾಟಕದ ಕಲ್ಕತ್ತಾ ಎಂಬ ಹೆಗ್ಗಳಿಕೆಗೆ ಕೊಡಗು ಪಾತ್ರವಾಗಿದೆ.

ರಾಷ್ಟಿçÃಯ ಕ್ರೀಡೆ ಹಾಕಿಗೆ ಕೊಡಗು ಜಿಲ್ಲೆಯಲ್ಲಿ ಅತೀ ಹೆಚ್ಚು ತರಬೇತಿ, ಪ್ರೋತ್ಸಾಹ ನೀಡಲಾಗುತ್ತಿದೆ.

ಹಾಕಿಯಲ್ಲಿ ಹಲವಾರು ಒಲಿಂಪಿಯನ್‌ಗಳನ್ನು ನೀಡಿದ ಹಿರಿಮೆ ಜಿಲ್ಲೆಗೆ ಇದೆ. ಇನ್ನುಳಿದಂತೆ ಫುಟ್ಬಾಲ್, ಕ್ರಿಕೆಟ್ ಕಬಡ್ಡಿ, ಅಥ್ಲೆಟಿಕ್ಸ್, ಬಾಲ್ ಬ್ಯಾಡ್ಮಿಂಟನ್, ಶಟಲ್ ಬ್ಯಾಡ್ಮಿಂಟನ್, ಹೀಗೆ ನಾನಾ ಕ್ರೀಡೆಯಲ್ಲಿ ಕೊಡಗಿನ ಕ್ರೀಡಾಪಟುಗಳು ಸಾಧನೆಗೈದಿದ್ದಾರೆ.

ವಿಪರ್ಯಾಸವೆಂದರೆ ಕ್ರೀಡಾ ಸಾಧಕರಲ್ಲಿ ಬಹುತೇಕರು ಜಿಲ್ಲೆಯಲ್ಲಿ ತರಬೇತಿ ಪಡೆದು ಕ್ರೀಡೆಗಳಲ್ಲಿ ಸಾಧನೆ ಮಾಡಿದವರು. ಹೊರ ಜಿಲ್ಲೆ ಹಾಗೂ ರಾಜ್ಯಗಳಲ್ಲಿ ತರಬೇತಿ ಪಡೆದು ಭಾರತವನ್ನು ಪ್ರತಿನಿಧಿಸಿದವರು. ಕಾರಣವೇನೆಂದರೆ ಕೊಡಗು ಜಿಲ್ಲೆಯಲ್ಲಿ ಸುಸಜ್ಜಿತವಾದ ಮೈದಾನ, ಆಧುನಿಕ ರೀತಿಯ ತರಬೇತಿ ಕೇಂದ್ರಗಳಿಲ್ಲ. ನಾಮಕಾವಸ್ಥೆಗೆ ಮಾತ್ರ ಕೊಡಗು ಕ್ರೀಡಾ ಜಿಲ್ಲೆ. ಕ್ರೀಡೆಗೆ ಪೂರಕವಾದ ತರಬೇತಿ ಕೇಂದ್ರ ಹಾಗೂ ಮೈದಾನ ಕೊಡಗಿನಲ್ಲಿ ಇಲ್ಲ.

ಕೊಡವ ಹಾಕಿ ಅಂತರರಾಷ್ಟಿçÃಯ ಮಟ್ಟದಲ್ಲಿ ಗಮನಸೆಳೆದಿದೆ. ಆದರೆ ಕೊಡವ ಹಾಕಿ ಆಯೋಜಿಸುವಾಗ ಮೈದಾನಕ್ಕಾಗಿ ಲಕ್ಷಾಂತರ ರೂ. ಖರ್ಚು ಮಾಡಿ ಮೈದಾನಗಳನ್ನು ಸಿದ್ಧಪಡಿಸಬೇಕಾದ ಅನಿವಾರ್ಯತೆ ಇದೆ.

ನಿರ್ವಹಣೆ ಇಲ್ಲದ ಜಿಲ್ಲಾ ಕ್ರೀಡಾಂಗಣ!

ಕ್ರೀಡಾ ತವರಿನ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿರುವ ಜನರಲ್ ತಿಮ್ಮಯ್ಯ ಮೈದಾನ ಸೂಕ್ತ ನಿರ್ವಹಣೆ ಇಲ್ಲದೆ ಬಳಲುತ್ತಿದೆ.

ಬೆಳಗಿನ ಜಾವದಲ್ಲಿ ಅಭ್ಯಾಸಕ್ಕೆ ಆಗಮಿಸುವ ಕ್ರೀಡಾಪಟುಗಳಿಗೆ ಯಾವುದೇ ರೀತಿಯ ಸೌಕರ್ಯಗಳು ಇಲ್ಲದಿರುವುದು ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಮೈದಾನದಲ್ಲಿ ಮದ್ಯದ ಬಾಟಲಿಗಳು ರಾರಾಜಿಸುತ್ತಿವೆೆ. ಕೆಲವೊಮ್ಮೆ ಮೈದಾನದ ಮಧ್ಯ ಭಾಗದಲ್ಲೇ ಮದ್ಯದ ಬಾಟಲಿಗಳು ಕಾಣಸಿಗುತ್ತವೆÉ.

ಇತರೆ ಜಿಲ್ಲೆಗಳಲ್ಲಿ ಇರುವ ಕ್ರೀಡಾಂಗಣದಲ್ಲಿ ಫುಟ್ಬಾಲ್, ಕ್ರಿಕೆಟ್ ಇನ್ನಿತರ ಎಲ್ಲಾ ಆಟಗಳನ್ನು ಆಡಲು ಎಲ್ಲಾ ರೀತಿಯ ಸೌಕರ್ಯಗಳು ಇವೆ. ಅದರೊಂದಿಗೆ ಅಥ್ಲೆಟಿಕ್ಸ್ಗೆ ಬಳಸಲು

(ಮೊದಲ ಪುಟದಿಂದ) ಸಿಂಥೆಟಿಕ್ ಟ್ರಾö್ಯಕ್ ಕೂಡ ಇದೆ. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿರುವ ಏಕೈಕ ಟರ್ಫ್ ಮೈದಾನ ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ ಒಳಪಟ್ಟಿದೆ. ಈ ಮೈದಾನ ಸಾರ್ವಜನಿಕರಿಗೆ ಲಭ್ಯವಿಲ್ಲ.

ಗುಂಡಿಗಳಿAದ ತುಂಬಿರುವ ಫುಟ್ಬಾಲ್ ಮೈದಾನದಲ್ಲೇ ಆಡಬೇಕಾದ ದುಸ್ಥಿತಿ

ಜಿಲ್ಲೆಯ ಬಹುತೇಕ ರಸ್ತೆಗಳು ಗುಂಡಿಗಳಿAದ ಕೂಡಿವೆÀ. ಅದೇ ರೀತಿಯಲ್ಲಿ ಜಿಲ್ಲಾ ಕೇಂದ್ರ ಮಡಿಕೇರಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದ ಕೆಳಭಾಗದಲ್ಲಿರುವ ಕಾಲ್ಚೆಂಡು ಮೈದಾನ ಇದಕ್ಕೆ ಹೊರತಾಗಿಲ್ಲ. ಮೈದಾನದ ಎತ್ತ ನೋಡಿದರೂ ದೊಡ್ಡ ದೊಡ್ಡ ಗುಂಡಿಗಳು ಕಾಣಸಿಗುತ್ತವೆÉ. ಬೆಳಗ್ಗಿನ ಸಮಯದಲ್ಲಿ ಪ್ರತೀ ದಿನ ಮಡಿಕೇರಿ ನಗರದ ಎಂ.ಸಿ.ಸಿ ಫುಟ್ಬಾಲ್ ಕ್ಲಬ್ ಸದಸ್ಯರು ಫುಟ್ಬಾಲ್ ಅಭ್ಯಾಸದಲ್ಲಿ ತೊಡಗಿಕೊಂಡಿರುತ್ತಾರೆ.

ಆದರೆ ಮೈದಾನದಲ್ಲಿರುವ ಬೃಹತ್ ಗುಂಡಿಗಳಿಗೆ ಸಿಲುಕಿ ಆಟಗಾರರು ಗಾಯಗೊಂಡು ಮೈದಾದತ್ತ ಮುಖಮಾಡುವುದನ್ನೇ ನಿಲ್ಲಿಸಿದ್ದಾರೆ. ಎಂ.ಸಿ.ಸಿ ತಂಡದ ಸದಸ್ಯರು ಮೈದಾನದ ಗುಂಡಿಗಳನ್ನು ಮುಚ್ಚಿ ತಾತ್ಕಾಲಿಕವಾಗಿ ಪರಿಹಾರ ಕಂಡಿದ್ದರು. ಆದರೆ ಫುಟ್ಬಾಲ್ ಮೈದಾನದಲ್ಲಿ ಇತರೆ ಕ್ರೀಡಾಕೂಟದ ಆಯೋಜನೆಗೆ ಕ್ರೀಡಾ ಇಲಾಖೆ ಅನುಮತಿ ನೀಡಿ, ನಂತರ ಮೈದಾನದ ಗುಣಮಟ್ಟದ ಕಡೆ ಮುಖ ಮಾಡುವುದನ್ನೇ ಮರೆತಿದೆ.

ಕಳೆದ ವರ್ಷ ಜಿಲ್ಲಾ ಕ್ರೀಡಾಂಗಣದ ಫುಟ್ಬಾಲ್ ಮೈದಾನ ಹಾಗೂ ಪಕ್ಕದಲ್ಲೇ ಇರುವ ಬಾಸ್ಕೆಟ್‌ಬಾಲ್ ಕೋರ್ಟ್ ಅಭಿವೃದ್ಧಿಪಡಿಸಲು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಕ್ರೀಡಾ ಇಲಾಖೆ ೨೫ ಲಕ್ಷ ರೂ. ಪ್ರಸ್ತಾವನೆ ಸಲ್ಲಿಸಲಾಗಿತ್ತು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ನಿರ್ದೇಶಕರ ವರ್ಗಾವಣೆಯ ನಂತರ ಈ ಯೋಜನೆ ನೆನಗುದಿಗೆ ಬಿದ್ದಿದೆ.

ದಸರಾ ಹಬ್ಬದ ಸಂದರ್ಭ ಫುಟ್ಬಾಲ್ ಮೈದಾನದಲ್ಲಿ ವಾಹನಗಳ ಪಾರ್ಕಿಂಗ್ ಮಾಡಲು ಅವಕಾಶ ನೀಡಿ, ಮೈದಾನವನ್ನು ಹಾಳುಗೆಡವಲು ಜಿಲ್ಲಾಡಳಿತ ಪ್ರತಿ ವರ್ಷ ಅವಕಾಶ ಮಾಡಿಕೊಡುತ್ತಿದೆ. ಫುಟ್ಬಾಲ್ ಮೈದಾನದ ಪಕ್ಕದಲ್ಲೇ ಬಾಸ್ಕೆಟ್ ಬಾಲ್ ಮೈದಾನದ ನೆಲಹಾಸು ಸಂಪೂರ್ಣವಾಗಿ ಕಿತ್ತುಬಂದಿದೆ.

ಬಾಸ್ಕೆಟ್ ಬಾಲ್ ಮೈದಾನ ಪಕ್ಕದಲ್ಲಿ ಕಾಡು ಬೆಳೆದು ನಿಂತಿದೆ. ಪಕ್ಕದಲ್ಲೇ ಕ್ರೀಡಾ ಇಲಾಖೆಯ ಕಚೇರಿ ಕೂಡ ಇದೆ. ಆದರೂ ಕೂಡ ಆಟದ ಮೈದಾನದ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದಿರುವುದು ದುರದೃಷ್ಟವೇ ಸರಿ. ಬಾಕ್ಸಿಂಗ್ ಕಟ್ಟಡ, ಸ್ಕೇಟಿಂಗ್ ರಿಂಕ್ ಕಟ್ಟಡಗಳು ನಿರ್ಜೀವವಾಗಿವೆ.

ಷಟಲ್ ಬ್ಯಾಡ್ಮಿಂಟನ್ ಬಗ್ಗೆ ಕಾಳಜಿ...!

ಜಿಲ್ಲಾ ಕ್ರೀಡಾಂಗಣ ಜನರಲ್ ತಿಮ್ಮಯ್ಯ (ಮ್ಯಾನ್ಸ್ ಕಾಂಪೌAಡ್)ಫುಟ್ಬಾಲ್ ಮೈದಾನದ ಪಕ್ಕದಲ್ಲೇ ಷಟಲ್ ಬ್ಯಾಡ್ಮಿಂಟನ್ ಹಾಗೂ ಜಿಮ್ ತರಬೇತಿ ಹಾಗೂ ಅಭ್ಯಾಸ ಕೇಂದ್ರ ಇದೆ. ಷಟಲ್ ಬ್ಯಾಡ್ಮಿಂಟನ್ ಕೋರ್ಟ್ ಅನ್ನು ಕ್ರೀಡಾ ಇಲಾಖೆ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತಿದೆ.

ಷಟಲ್ ಬ್ಯಾಡ್ಮಿಂಟನ್ ಆಡಲು ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿಗಳು, ಪ್ರತಿನಿತ್ಯ ಬೆಳಗ್ಗೆ ಹಾಗೂ ಸಂಜೆ ತೆರಳುತ್ತಾರೆ. ಈ ಕಾರಣಕ್ಕಾಗಿ ಷಟಲ್ ಬ್ಯಾಡ್ಮಿಂಟನ್ ಮೈದಾನವನ್ನು ಅಚ್ಚುಕಟ್ಟಾಗಿ ಕ್ರೀಡಾ ಇಲಾಖೆ ನಿರ್ವಹಣೆ ಮಾಡುತ್ತಿದೆ.

ಆದರೆ ಷಟಲ್ ಬ್ಯಾಡ್ಮಿಂಟನ್ ಕೋರ್ಟ್ ಪಕ್ಕದಲ್ಲೇ ಇರುವ ಫುಟ್ಬಾಲ್ ಮೈದಾನ, ಬಾಸ್ಕೆಟ್‌ಬಾಲ್ ಕೋರ್ಟ್, ಜನರಲ್ ತಿಮ್ಮಯ್ಯ ಕ್ರೀಡಾಂಗಣ ಅವ್ಯವಸ್ಥೆ ಸರಿಪಡಿಸಲು ಯಾರೂ ಮುಂದಾಗಿಲ್ಲ.

ಇತಿಹಾಸ ಪುಟ ಸೇರಿದ ಗಾಂಧಿ ಮೈದಾನ!

ಮಡಿಕೇರಿ ನಗರದ ಹೃದಯಭಾಗದಲ್ಲಿರುವ ಗಾಂಧಿ ಮೈದಾನ ಇತಿಹಾಸ ಪುಟಕ್ಕೆ ಸೇರ್ಪಡೆಯಾಗಿದೆ. ಗಾಂಧಿ ಮೈದಾನದಲ್ಲಿ ದೊಡ್ಡ ಮಟ್ಟದ ಕ್ರೀಡಾಕೂಟಗಳನ್ನು ಆಯೋಜಿಸಲು ಸಾಧ್ಯವಿಲ್ಲ. ಕಾರಣವೇನೆಂದರೆ ನಾಡಹಬ್ಬ ದಸರಾ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಕುಳಿತುಕೊಳ್ಳಲು ಮೈದಾನದಲ್ಲಿ ಶಾಶ್ವತವಾದ ಛಾವಣಿ ಹಾಕಿ ಗ್ಯಾಲರಿ ನಿರ್ಮಿಸಲಾಗಿದೆ. ಈ ಹಿಂದೆಯೂ ಗಾಂಧಿ ಮೈದಾನ ಆಟಕ್ಕೆ ಯೋಗ್ಯವಾಗಿರಲಿಲ್ಲ.

ನಗರಸಭೆ ವ್ಯಾಪಾರ ಮಳಿಗೆ, ವಾಹನ ಪಾರ್ಕಿಂಗ್‌ಗೆ ಅವಕಾಶ ನೀಡುತ್ತಿದ್ದರು. ಅದಲ್ಲದೇ ತಿಂಗಳಿಗೆ ಐದಾರು ಬಾರಿ ವ್ಯಾಪಾರ ಮಳಿಗೆಗಳು ಗಾಂಧಿ ಮೈದಾನದಲ್ಲಿ ಕಾಣಸಿಗುತ್ತಿತ್ತು. ಇದೀಗ ಮಡಿಕೇರಿ ನಗರದ ಕ್ರೀಡಾಪಟುಗಳು ತರಬೇತಿ ಹಾಗೂ ಅಭ್ಯಾಸ ಮಾಡುತ್ತಿದ್ದ ಗಾಂಧಿ ಮೈದಾನ ಇತಿಹಾಸ ಪುಟ ಸೇರಿದಂತಾಗಿದೆ.

ಕ್ರೀಡಾ ಜಿಲ್ಲೆಯಲ್ಲಿರುವ ಮೈದಾನಗಳನ್ನು ಆಡಳಿತ ವರ್ಗ ತನ್ನ ಮನಬಂದAತೆ ಕಾರ್ಯಕ್ರಮಗಳಿಗೆ ಬಳಸಿಕೊಳ್ಳುತ್ತಿರುವುದು ವಿಪರ್ಯಾಸ ಸಂಗತಿಯಾಗಿದೆ.

ಒಲAಪಿಯನ್‌ಗಳ ಊರಿನಲ್ಲಿ ಕ್ರೀಡಾಂಗಣಗಳೇ ಇಲ್ಲ!

ಭಾರತ ಹಾಕಿ ಕ್ರೀಡೆಗೆ ಅಪಾರ ಕೊಡುಗೆ ನೀಡಿದ ಸೋಮವಾರಪೇಟೆ ಪಟ್ಟಣದಲ್ಲಿ ಕ್ರೀಡಾಂಗಣಗಳೇ ಇಲ್ಲ.

ಬಿ.ಪಿ. ಗೋವಿಂದ, ಎಸ್.ವಿ ಸುನಿಲ್, ಅರ್ಜುನ್ ಹಾಲಪ್ಪ ಅವರಂತಹ ಒಲಿಂಪಿಯನ್‌ಗಳನ್ನು ನಾಡಿಗೆ ನೀಡದ ಸೋಮವಾರಪೇಟೆ ಪಟ್ಟಣದಲ್ಲಿ ಕಳೆದ ಹತ್ತು ವರ್ಷಗಳಿಂದ ನಿರ್ಮಾಣವಾಗುತ್ತಿರುವ ಆಷ್ಟೊçÃಟರ್ಫ್ ಮೈದಾನ ಕಾಮಗಾರಿ ಇದುವರೆಗೆ ಪೂರ್ಣಗೊಂಡಿಲ್ಲ.

ಹಾಕಿ, ಫುಟ್ಬಾಲ್, ಬಾಸ್ಕೆಟ್‌ಬಾಲ್, ಕ್ರಿಕೆಟ್ ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್ ಆಡಲು ಸೋಮವಾರಪೇಟೆ ಪಟ್ಟಣದಲ್ಲಿ ಯಾವುದೇ ರೀತಿಯ ಸುಸಜ್ಜಿತವಾದ ಹೊರಾಂಗಣವಾಗಲಿ, ಒಳಾಂಗಣ ಕ್ರೀಡಾಂಗಣಗಳಿಲ್ಲ. ಕಳೆದ ಒಂದು ದಶಕದಿಂದ ಸೋಮವಾರಪೇಟೆ ಜನರ ಕನಸಿನ ಹಾಕಿ ಟರ್ಫ್ ಕಾಮಗಾರಿ ಪೂರ್ಣಗೊಂಡಿಲ್ಲ. ಟರ್ಫ್ ಮೈದಾನದ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ.

ಹಾಗೂ ಟರ್ಫ್ ನಿರ್ಮಾಣವಾಗಿರುವ ಜಾಗವೇ ಅವೈಜ್ಞಾನಿಕವಾಗಿದೆ ಎಂದು ಸೋಮವಾರಪೇಟೆ ಪಟ್ಟಣದ ಕ್ರೀಡಾಪಟುಗಳು ಹೇಳುತ್ತಾರೆ.

ವೀರಾಜಪೇಟೆ ತಾಲೂಕಿನಲ್ಲಿ ಕಚ್ಚಾ ಮೈದಾನಗಳೇ ಕ್ರೀಡಾಂಗಣ!

ವೀರಾಜಪೇಟೆ ಪಟ್ಟಣದಲ್ಲಿ ಯಾವುದೇ ಸಾರ್ವಜನಿಕ ಮೈದಾನವಿಲ್ಲ. ಇರುವ ಏಕೈಕ ಸಣ್ಣದಾದ ತಾಲೂಕು ಮೈದಾನ ವಾಹನ ಪಾರ್ಕಿಂಗ್ ಸ್ಥಳವಾಗಿದೆ. ಕ್ರೀಡಾಪಟುಗಳು ಪಾಳುಬಿದ್ದ ಗದ್ದೆ, ಕಚ್ಚಾ ಮೈದಾನದಲ್ಲೇ ಅಭ್ಯಾಸ ಮಾಡುತ್ತಿದ್ದಾರೆ. ಅದಲ್ಲದೇ ಯಾವುದೇ ಒಳಾಂಗಣ ಕ್ರೀಡಾಂಗಣ ಕೂಡ ಇಲ್ಲ.

ಪಟ್ಟಣದ ಛತ್ರ ಕರೆ ಬಳಿ ಇರುವ ಯುವಜನ ಮತ್ತು ಕ್ರೀಡಾ ಇಲಾಖೆಗೆ ಸೇರಿರುವ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣ ಯೋಗ್ಯವಲ್ಲದಾಗಿದೆ. ನೆಲಹಾಸು ಸಂಪೂರ್ಣ ಕಿತ್ತುಬಂದಿದೆ.

ಒಳಾAಗಣದ ಹೊರ ಭಾಗ ಕಾಡುಗಳಿಂದ ಕೂಡಿದೆ. ಫುಟ್ಬಾಲ್, ಕ್ರಿಕೆಟ್, ಹಾಕಿ ಆಡಲು ವೀರಾಜಪೇಟೆ ನಗರದಲ್ಲಿ ಸಾರ್ವಜನಿಕ ಮೈದಾನವಿಲ್ಲ. ಇತ್ತೀಚೆಗಷ್ಟೇ ಅಂರ‍್ರಾಷ್ಟಿçÃಯ ಮಾಜಿ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ಅವರ ನೇತೃತ್ವದಲ್ಲಿ ವೀರಾಜಪೇಟೆಯಲ್ಲಿ ಕ್ರೀಡಾ ಸೌಕರ್ಯಕ್ಕಾಗಿ ಬೃಹತ್ ಪ್ರತಿಭಟನೆ ನಡೆದಿತ್ತು.

ಕೊಡಗಿನಲ್ಲಿ ಕ್ರೀಡೆಗೆ ಬೇಕಾದ ಸುಸಜ್ಜಿತವಾದ ತರಬೇತಿ ಕೇಂದ್ರ ಹಾಗೂ ಕ್ರೀಡಾಂಗಣವಿಲ್ಲ. ಇಂದಿಗೂ ಕೂಡ ಕೊಡಗಿನ ಗ್ರಾಮೀಣ ಭಾಗದಲ್ಲಿ ಪಾಳು ಬಿದ್ದ ಗದ್ದೆಗಳೇ ಕ್ರೀಡಾಪಟುಗಳ ಮೈದಾನವಾಗಿದೆ.

ಕ್ರೀಡೆಯಲ್ಲಿ ಸದಾ ಮುಂದಿರುವ ಹಾಗೂ ಅಪ್ರತಿಮ ಕ್ರೀಡಾಪಟುಗಳನ್ನು ದೇಶಕ್ಕೆ ನೀಡುತ್ತಿರುವ ಕೊಡಗು ಜಿಲ್ಲೆಯಲ್ಲಿ ಸುಸಜ್ಜಿತವಾದ ಕ್ರೀಡಾಂಗಣಗಳನ್ನು ನಿರ್ಮಿಸಲು ಸರ್ಕಾರ ಮುಂದಾಗಬೇಕಾಗಿದೆ.