ಕುಶಾಲನಗರ, ಫೆ. ೪: ಕುಶಾಲನಗರ ಕಾವೇರಿ ನದಿ ದಂಡೆ ಸಂಪೂರ್ಣ ತ್ಯಾಜ್ಯಮಯವಾಗಿ ಕಂಡುಬAದಿತು. ಈ ಹಿನ್ನೆಲೆಯಲ್ಲಿ ಸ್ಥಳೀಯ ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಕುಶಾಲನಗರದಲ್ಲಿ ಶುಕ್ರವಾರ ನಡೆದ ಕನ್ನಡ ಸಾಹಿತ್ಯ ಸಮ್ಮೇಳನ ಸಂದರ್ಭ ಗಡಿಭಾಗದ ಕಾವೇರಿ ನದಿ ಸೇತುವೆ ಬಳಿ ಸಾವಿರಾರು ಸಂಖ್ಯೆಯ ಜನರು ತಿಂಡಿ ತಿನ್ನಲು ಬಳಸಿದ ತಟ್ಟೆ ಮತ್ತಿತರ ತ್ಯಾಜ್ಯಗಳನ್ನು ನದಿ ದಂಡೆಗೆ ಎಸೆದಿರುವ ದೃಶ್ಯ ಕಂಡುಬAದಿತ್ತು. ಇದನ್ನು ಗಮನಿಸಿದ ಕರ್ನಾಟಕ ಕಾವಲು ಪಡೆ ಜಿಲ್ಲಾಧ್ಯಕ್ಷ ಎಂ.ಕೃಷ್ಣ, ಯಾವುದೇ ಕಾರ್ಯಕ್ರಮ ಸಂದರ್ಭ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಒತ್ತಾಯಿಸಿದ ಹಿನ್ನೆಲೆಯಲ್ಲಿ ಪುರಸಭೆ ಪೌರಕಾರ್ಮಿಕರು ತೆರವುಗೊಳಿಸಲು ಕ್ರಮ ಕೈಗೊಂಡ ದೃಶ್ಯ ಗೋಚರಿಸಿತು.