ಕುಶಾಲನಗರ, ಫೆ.೩ : ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಗೆ ನೂತನ ಪೊಲೀಸ್ ಇನ್ಸ್ಪೆÀಕ್ಟರ್ ಆಗಿ ಶ್ರೀಕಾಂತ್ ಅವರನ್ನು ಸರ್ಕಾರ ನಿಯೋಜನೆ ಮಾಡಿದೆ.
ಪಟ್ಟಣ ಠಾಣೆ ಮತ್ತು ಸಂಚಾರಿ ಠಾಣೆಯನ್ನು ಮೇಲ್ದರ್ಜೆಗೇರಿಸಿದ್ದು, ಉಸ್ತುವಾರಿ ಅಧಿಕಾರಿಯಾಗಿ ಶ್ರೀಕಾಂತ್ ಅವರನ್ನು ನೇಮಕ ಮಾಡಲಾಗಿದೆ. ಕುಶಾಲನಗರದಲ್ಲಿ ವೃತ್ತ ನಿರೀಕ್ಷಕರಾಗಿರುವ ಮಹೇಶ್ ಅವರು ಕುಶಾಲನಗರ ಗ್ರಾಮಾಂತರ ಮತ್ತು ಸುಂಟಿಕೊಪ್ಪ ಪೊಲೀಸ್ ಠಾಣೆಯ ಉಸ್ತುವಾರಿ ವಹಿಸಲಿದ್ದಾರೆ