ಕೊಡ್ಲಿಪೇಟೆ, ಫೆ. ೩: ಸಮೀಪದ ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮ ಸಭೆಯು ಅಧ್ಯಕ್ಷೆ ಸವಿತಾ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಆವರಣದಲ್ಲಿ ನಡೆಯಿತು. ಸಭೆಯಲ್ಲಿ ಪ್ರಮುಖವಾಗಿ ವಿದ್ಯುತ್ ಹಾಗೂ ಕಾಡಾನೆಗಳ ಹಾವಳಿ ಬಗ್ಗೆ ಸಾರ್ವಜನಿಕರು ಚರ್ಚೆ ನಡೆಸಿದರು.
ವಿದ್ಯುತ್ ಇಲಾಖೆಯ ಅಭಿಯಂತರ ಅಪ್ಪೇಶ್ ಅವರು ಇಲಾಖೆಯ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ಸಂದರ್ಭ ಸೂಕ್ತ ಸಮಯದಲ್ಲಿ ವಿದ್ಯುತ್ ಬಿಲ್ ಪಾವತಿ ಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭ ಮಧ್ಯೆ ಪ್ರವೇಶಿಸಿದ ಸಾರ್ವಜನಿಕರು, ಮಳೆಗಾಲದಲ್ಲಿ ನಿರಂತರವಾಗಿ ಈ ಭಾಗದಲ್ಲಿ ವಿದ್ಯುತ್ ವ್ಯತ್ಯಯವಾಗುತ್ತಿದ್ದು, ಮಳೆಗೆ ಮುಂಚಿತವಾಗಿ ಮರಗಳ ರೆಂಬೆ ಕೊಂಬೆಗಳನ್ನು ತೆರವುಗೊಳಿಸದೆ ಇಲಾಖೆ ನಿರ್ಲಕ್ಷö್ಯ ವಹಿಸುತ್ತಿದೆ ಎಂದು ಆರೋಪಿಸಿದರು.
ಮಲ್ಲಿಪಟ್ಟಣ ಮುಖ್ಯ ರಸ್ತೆ ಬದಿಯಲ್ಲಿ ವಿದ್ಯುತ್ ಲೈನ್‌ಗಳು ತೀರಾ ಕೆಳಗೆ ಜೋತು ಬಿದ್ದಿದ್ದು ಅಪಾಯಕಾರಿ ಸ್ಥಿತಿಯಲ್ಲಿದೆ. ಒಂದು ತಿಂಗಳ ಹಿಂದೆ ಕೂಡ್ಲೂರುವಿನಲ್ಲಿ ಹುಲ್ಲು ತೆಗೆದುಕೊಂಡು ಹೋಗುತ್ತಿದ್ದ ಟ್ರಾö್ಯಕ್ಟರ್ ವಿದ್ಯುತ್ ಲೈನ್‌ಗಳಿಗೆ ತಗುಲಿ ಬೆಂಕಿಗೆ ಆಹುತಿಯಾಗಿದೆ. ನಷ್ಟ ಅನುಭವಿಸಿದ ಕೃಷಿಕನಿಗೆ ಈವರೆಗೆ ಪರಿಹಾರ ನೀಡಿಲ್ಲ. ಜನರ ಜೀವಕ್ಕೆ ಅಪಾಯ ಎದುರಾಗುವ ಮೊದಲು ವಿದ್ಯುತ್ ಮಾರ್ಗ ದುರಸ್ತಿಪಡಿಸುವಂತೆ ಒತ್ತಾಯಿಸಿದರು.
ಹೇಮಾವತಿ ಪುನರ್ ವಸತಿ ಯೋಜನೆಯಡಿ ಎಸ್.ಸಿ/ಎಸ್.ಟಿ. ಸಮುದಾಯಕ್ಕೆ ಮಂಜೂರಾಗಿರುವ ಕೊಳವೆ ಬಾವಿಗಳನ್ನು ಕೊರೆದು ಐದು ವರ್ಷವಾದರೂ ವಿದ್ಯುತ್ ಸಂಪರ್ಕ ನೀಡದೆ ಸತಾಯಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಗ್ರಾಮಸ್ಥರು, ಶೀಘ್ರವಾಗಿ ವಿದ್ಯುತ್ ಸಂಪರ್ಕ ನೀಡುವಂತೆ ಆಗ್ರಹಿಸಿದರು.
ಆಗಳಿ ಗ್ರಾಮದ ಶಾಲೆಯ ಸಮೀಪವಿರುವ ಟ್ರಾನ್ಸ್ಫಾರ್ಮರ್ ನಿಂದ ಶಾಲಾ ಮಕ್ಕಳಿಗೆ ಅಪಾಯ ವಿದ್ದು, ತಕ್ಷಣ ತೆರವುಗೊಳಿಸಬೇಕು. ಕೆರೆಕೇರಿ ಶಾಲೆಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ ಎಂದು ಆಯಾ ಶಾಲೆಯ ಶಿಕ್ಷಕರುಗಳು ಸಭೆಯ ಗಮನಕ್ಕೆ ತಂದರು. ಇಲಾಖೆಗೆ ಸಂಬAಧಿಸಿದAತೆ ಬಂದಿರುವ ಅಹವಾಲುಗಳನ್ನು ತಕ್ಷಣ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಅಪ್ಪೇಶ್ ಹೇಳಿದರು.
ಅರಣ್ಯ ಇಲಾಖೆಯ ಕೊಡ್ಲಿಪೇಟೆ ಉಪ ವಲಯಾಧಿಕಾರಿ ಗೋವಿಂದ್ ರಾಜ್ ಅವರು ಇಲಾಖಾ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಆನೆ ಧಾಳಿಯಿಂದ ಕೃಷಿ ಬೆಳೆಗಳನ್ನು ಕಳೆದುಕೊಂಡವರಿಗೆ ಇಲಾಖೆ ವತಿಯಿಂದ ಸೂಕ್ತ ಪರಿಹಾರ ನೀಡಲಾಗಿದೆ ಎಂದರು.
ಹೇಮಾವತಿ ಹಿನ್ನೀರು ಪ್ರದೇಶ ಹಾಗೂ ಮೀಸಲು ಅರಣ್ಯ ವ್ಯಾಪ್ತಿ ಯಲ್ಲಿ ಅನೆಗಳ ಹಾವಳಿ ಹೆಚ್ಚಾಗಿದ್ದು, ರೈಲ್ವೇ ಕಂಬಿಗಳ ಬ್ಯಾರಿಕೇಡ್ ಅಳವಡಿಸುವುದು ಹಾಗೂ ಮೂರು ರಸ್ತೆಗಳು ಸೇರುವ ಸ್ಥಳಗಳಲ್ಲಿ ಸೋಲಾರ್ ಲೈಟ್‌ಗಳನ್ನು ಅಳವಡಿಸು ವಂತೆ ಸಾರ್ವಜನಿಕರು ಮನವಿ ಮಾಡಿದರು.
ಆರೋಗ್ಯ ಇಲಾಖೆಯ ಗ್ರಾಮೀಣ ಸಮುದಾಯ ಅಧಿಕಾರಿ ಕೇಶವಮೂರ್ತಿ ಮಾತನಾಡಿ, ಆಯುಷ್ಮಾನ್ ಹೆಲ್ತ್ ಕಾರ್ಡ್ ಮತ್ತು ಅಭಾ ಕಾರ್ಡ್ಗಳನ್ನು ಗ್ರಾಮ ಒನ್ ಕೇಂದ್ರದಲ್ಲಿ ಉಚಿತವಾಗಿ ಮಾಡಿಕೊಡಲಾಗುತ್ತಿದೆ ಎಂದರು.
ನಿಲುವಾಗಿಲು ಸರಕಾರಿ ಶಾಲೆಯಲ್ಲಿ ಒಬ್ಬರೇ ಶಿಕ್ಷಕರಿದ್ದು, ಇವರು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲವೆಂದು ಗ್ರಾಮಸ್ಥ ಸೋಮಶೇಖರ್ ಆರೋಪಿಸಿದರು. ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಜಾನ್ ಅವರು ಈ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸುವುದಾಗಿ ತಿಳಿಸಿದರು. ತಾಲೂಕು ಪಂಚಾಯಿತಿ ಅಭಿಯಂತರ ರಾಜೇಶ್ ಮಾತನಾಡಿ, ಮಹಾತ್ಮಾ ಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಫಲಾನುಭವಿಯಾಗಲು ಜಾಬ್ ಕಾರ್ಡ್ ಅತ್ಯವಶ್ಯಕವಾಗಿದ್ದು ಗ್ರಾಮ ಪಂಚಾಯಿತಿಗಳಲ್ಲಿ ಜಾಬ್ ಕಾರ್ಡ್ ಮಾಡಿಸಿಕೊಳ್ಳಬೇಕೆಂದು ತಿಳಿಸಿದರು.
ಆದರ್ಶ ಗ್ರಾಮ ಯೋಜನೆಯಡಿ ಅಳವಡಿಸಿರುವ ಹೈ ಮಾಸ್ಟ್ ದೀಪಗಳಿಗೆ ಸೋಲಾರ್ ಅಳವಡಿಕೆ ಅವೈಜ್ಞಾನಿಕವಾಗಿದೆ. ಸೋಲಾರ್ ಬದಲಾಯಿಸಿ ವಿದ್ಯುತ್ ಸಂಪರ್ಕ ನೀಡಬೇಕು. ಕೋಣಿಗನಹಳ್ಳಿ ಗ್ರಾಮದಲ್ಲಿ ಕೈಗೊಂಡಿರುವ ಜೆಜೆಎಂ ಕಾಮಗಾರಿ ಸಂಪೂರ್ಣ ಕಳಪೆ ಯಾಗಿದೆ. ಪಂಚಾಯಿತಿ ಸಮೀಪದ ಸಮುದಾಯ ಭವನದಲ್ಲಿ ಒಣ ಕಸಗಳನ್ನು ಹಾಕುತ್ತಿದ್ದು ಜನ ಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ನ್ಯಾಯದಹಳ್ಳ ಶಾಲೆಯಲ್ಲಿ ನೀರಿನ ಸಮಸ್ಯೆ ಬಗೆಹರಿಸಬೇಕು. ವಿದ್ಯುತ್ ಕಂಬಗಳಲ್ಲಿ ಬೀದಿ ದೀಪವಿಲ್ಲದ ಕಾರಣ ಹೆಂಚುಗಳನ್ನು ತೆಗದು ಕಳ್ಳತನವಾಗುತ್ತಿದೆ ಎಂಬ ವಿಚಾರಗಳ ಕುರಿತು ಗ್ರಾಮಸ್ಥರಾದ ಚಂದ್ರಶೇಖರ್, ಸೋಮಶೇಖರ್, ದೇವರಾಜ್, ಸುಬ್ಬಯ್ಯ, ವಿರೂಪಾಕ್ಷ, ಪುಟ್ಟರಾಜು, ಶೇಖರ್, ಪಾಲಾಕ್ಷ, ಸುರೇಶ್ ಅವರುಗಳು ಸಭೆಯ ಗಮನಕ್ಕೆ ತಂದು ಕ್ರಮಕ್ಕೆ ಆಗ್ರಹಿಸಿದರು.
ಸಭೆಯಲ್ಲಿ ಪಂಚಾಯಿತಿ ಮಟ್ಟದ ಗಣಿತ ಸ್ಪರ್ಧೆಯಲ್ಲಿ ವಿಜೇತರಾದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಮತ್ತು ಬಹುಮಾನಗಳನ್ನು ಗ್ರಾ.ಪಂ.ನಿAದ ವಿತರಿಸಲಾಯಿತು.
ನೋಡಲ್ ಅಧಿಕಾರಿಯಾಗಿ ಶಿಕ್ಷಣ ಇಲಾಖೆಯ ದೇವರಾಜ್ ಭಾಗವಹಿಸಿದ್ದರು. ಗ್ರಾ.ಪಂ. ಉಪಾಧ್ಯಕ್ಷೆ ಕುಸುಮಾ, ಪಿಡಿಓ ಗಿರೀಶ್, ಸದಸ್ಯರಾದ ಜಯರಾಜ್, ಕಿಶನ್‌ಕುಮಾರ್, ರವಿ, ಕೀರ್ತಿ, ಶಾಲಿನಿ, ರಮೇಶ್, ಹರೀಶ್, ಕಮಲಮ್ಮ, ರಾಧ ಉಪಸ್ಥಿತರಿದ್ದರು.
ಕಂದಾಯ ಇಲಾಖೆಯ ಶ್ರೀವಿದ್ಯಾ, ಕಾಫಿ ಮಂಡಳಿಯ ವಲಯ ವಿಸ್ತರಣಾಧಿಕಾರಿ ರಂಜಿತ್ ಕುಮಾರ್, ತೋಟಗಾರಿಕೆ ಇಲಾಖೆಯ ಸಹಾಯಕ ಅಧಿಕಾರಿ ಈಶ್ವರ್ ಕಲ್ಯಾಣಿ, ಸಮಾಜ ಕಲ್ಯಾಣ ಇಲಾಖೆಯ ಅಲ್ತಾಫ್ ಹುಸೇನ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಮಲಮ್ಮ ಅವರುಗಳು ತಮ್ಮ ಇಲಾಖೆಗಳ ಯೋಜನೆ ಬಗ್ಗೆ ಮಾಹಿತಿ ನೀಡಿದರು.