ಚೆಯ್ಯಂಡಾಣೆ, ಫೆ. ೩: ಮೂರು ಶತಮಾನಗಳ ಇತಿಹಾಸವಿರುವ ಕೊಡಗು ಜಿಲ್ಲೆಯಲ್ಲಿ ಹಲವಾರು ಪವಾಡಗಳಿಗೆ ಹೆಸರಾದಂತಹ ಎಡಪಾಲ ಅಂಡತ್‌ಮಾನಿ ದರ್ಗಾ ಶರೀಫ್‌ನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಪವಾಡ ಪುರುಷರ ಹೆಸರಿನಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ವಾರ್ಷಿಕ ಉರೂಸ್ ಸಮಾರಂಭವನ್ನು ಈ ವರ್ಷವೂ ವಿಜೃಂಭಣೆಯಿAದ ತಾ. ೫,೬,೭ ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುವುದೆಂದು ಎಡಪಾಲ ಮುಸ್ಲಿಂ ಜಮಾಅತ್ ಅಧ್ಯಕ್ಷ ಕೆ.ಯು. ಶಾಫಿ ತಿಳಿಸಿದ್ದಾರೆ.

ತಾ. ೫ ರಂದು ಭಾನುವಾರ ಸಂಜೆ ೪ ಗಂಟೆಗೆ ಎಡಪಾಲ ಮುಸ್ಲಿಂ ಜಮಾಅತ್ ಅಧ್ಯಕ್ಷ ಕೆ ಯು ಶಾಫಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ರಾತ್ರಿ ಸಿರಾಜುದ್ದೀನ್ ದಾರಿಮಿ ಕಕ್ಕಾಡ್ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ತಾ. ೬ ರಂದು ಸಂಜೆ ಸನ್ಮಾನ ಹಾಗೂ ದುಆ ಮಜ್ಲಿಸ್ ನಡೆಯಲಿದ್ದು ಸಯ್ಯದ್ ಹಮೀದಲಿ ಶಿಹಾಬ್ ತಂಘಳ್ ಪಾಣಕ್ಕಾಡ್ ನೇತೃತ್ವ ವಹಿಸಲಿದ್ದಾರೆ, ಮುಖ್ಯ ಭಾಷಣವನ್ನು ಅಲ್ ಹಾಜ್ ಕೆ.ಎಂ. ಮೊಯ್ದು ಪೈಝಿ ಮಾಡಲಿದ್ದಾರೆ. ರಾತ್ರಿ ಶಮೀರ್ ಆಶ್ರಫಿ ಕಾಟ್ಟಾಂಪಳ್ಳಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.

ತಾ ೭ರಂದು ರಾತ್ರಿ ಉಸ್ತಾದ್ ಬಶೀರ್ ಪೈಝಿ ದೇಶ ಮಂಗಲA ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ನಾಇಬ್ ಖಾಝಿ ಅಬ್ದುಲ್ಲ ಪೈಝಿ, ಮುದರ್ರಿಸ್ ನಿಝಾರ್ ಪೈಝಿ ಸೇರಿದಂತೆ ಧಾರ್ಮಿಕ ಪಂಡಿತರು, ಧರ್ಮಗುರುಗಳು, ಸಮಾಜ ಸೇವಕರು, ಜನಪ್ರತಿನಿಧಿಗಳು ಹಾಗೂ ಮತ್ತಿತರರು ಭಾಗವಹಿಸಲಿದ್ದಾರೆ. ತಾ ೬ ಸೋಮವಾರ ಹಾಗೂ ೭ರ ಮಂಗಳವಾರ ಎಲ್ಲಾ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಕೂಡ ನಡೆಯಲಿದೆ.

-ಅಶ್ರಫ್