ಮಡಿಕೇರಿ, ಫೆ. ೩: ಕೊಡಗು ಜಿಲ್ಲಾ ಮೊಗೇರ ಸಮಾಜ ಹೆಬ್ಬೆಟ್ಟಗೇರಿ ಕೆ. ನಿಡುಗಣೆ ಗ್ರಾಮ ಶಾಖೆ ವತಿಯಿಂದ ಕೆ.ನಿಡುಗಣೆ ಗ್ರಾಮ ಪಂಚಾಯಿತಿ ನಂದಿಮೊಟ್ಟೆಯಲ್ಲಿರುವ ಜಿಲ್ಲಾ ಸರಕಾರಿ ಗೋಶಾಲೆಯಲ್ಲಿ ಶ್ರಮದಾನ ಮತ್ತು ದನ, ಕರುಗಳಿಗೆ ಮೇವು ಕಲ್ಪಿಸಲು ಅಗತ್ಯವಿರುವ ಹುಲ್ಲನ್ನು ನಾಟಿ ಮಾಡುವ ಕಾರ್ಯ ನಡೆಯಿತು.
ಸಮಾಜದ ಗೌರವ ಅಧ್ಯಕ್ಷ ಪಿ.ಎಂ. ರವಿ, ಮುಖಂಡ ಜನಾಧÀðನ ಪಿ.ಬಿ., ಜಯ ಪಿ.ಕೆ., ಜಿಲ್ಲಾ ಸಮಿತಿ ಸದಸ್ಯರಾದ ಸೋಮಯ್ಯ ಹೆಬ್ಬಟ್ಟಗೇರಿ, ಪೊಡಿಯ ತಾಳತ್ಮನೆ. ವೈದ್ಯಾಧಿಕಾರಿ ಪ್ರಸನ್ನ, ಸಮಾಜದ ಸದಸ್ಯರಾದ ಗುರುವ, ಚಂದ್ರ ಪಿ.ಬಿ., ಕುಶ, ಶಶಿ, ಮಂಜುನಾಥ್, ಭರತ್, ಕಮಲಾಕ್ಷ್ಷಿ, ಹೊನ್ನಮ್ಮ, ಭವ್ಯ, ಚೀತು, ಮುನ್ನ, ಡಯಾನ, ಸೌಮ್ಯ, ಅಕ್ಕಮ್ಮ, ಅಣ್ಣು, ಸೇರಿದಂತೆ ಗೋ ಶಾಲೆಯ ಸಿಬ್ಬಂದಿಗಳು ಇದ್ದರು.