ನಾಪೋಕ್ಲು, ಫೆ. ೩: ಸ್ಥಗಿತಗೊಂಡಿದ್ದ ಕೊಡವ ಕೌಟುಂಬಿಕ ಹಾಕಿ ಉತ್ಸವ ಐದು ವರ್ಷಗಳ ಬಳಿಕ ಕೊಡವ ಹಾಕಿ ಅಕಾಡೆಮಿ ವತಿಯಿಂದ ಅಪ್ಪಚೆÀಟ್ಟೋಳಂಡ ಕುಟುಂಬಕ್ಕೆ ಅವಕಾಶ ನೀಡಿದ್ದು, ಈ ಜವಾಬ್ದಾರಿಯನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದು ಹಾಕಿ ಉತ್ಸವ ಆಯೋಜನಾ ಸಮಿತಿಯ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಹೇಳಿದರು.

ಇಲ್ಲಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಶುಕ್ರವಾರ ಹಾಕಿ ಉತ್ಸವದ ಗ್ಯಾಲರಿ ನಿರ್ಮಾಣ ಕಾರ್ಯಕ್ಕೆ ಅತಿಥಿಗಳು ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದ ಬಳಿಕ ಮಾತನಾಡಿದ ಮನು ಮುತ್ತಪ್ಪ ಅವರು ಈಗಾಗಲೇ ಕೊಡವ ಕೌಟುಂಬಿಕ ಹಾಕಿ ಉತ್ಸವ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನವನ್ನು ಪಡೆದಿದೆ. ಗಿನ್ನಿಸ್ ದಾಖಲಾಗಿ ಕೊಡಗಿನ ಕ್ರೀಡಾಪಟುಗಳು ರಾಜ್ಯ, ರಾಷ್ಟçಮಟ್ಟದಲ್ಲಿ ಪ್ರತಿನಿಧಿಸಿ ಕೊಡಗಿಗೆ ಕೀರ್ತಿ ತರುವಂತಾಗಬೇಕು. ಗ್ಯಾಲರಿ ನಿರ್ಮಾಣ ದೊಡ್ಡ ಕೆಲಸವಾಗಿದ್ದು, ಎಲ್ಲಾ ಗ್ರಾಮಸ್ಥರು, ಶಾಲೆ ಆಡಳಿತ ಮಂಡಳಿ ಸಹಕಾರ ನೀಡುವಂತೆ ಮನವಿ ಮಾಡಿದರು.

ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯನ್ನು ನಾಪೋಕ್ಲುವಿನ ಪಬ್ಲಿಕ್ ಶಾಲೆಯ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣ ಸೇರಿದಂತೆ ಒಟ್ಟು ಮೂರು ಮೈದಾನಗಳಲ್ಲಿ ಆಯೋಜಿಸಲಾಗುತ್ತಿದೆ. ಕೊಡವ ಹಾಕಿ ಅಕಾಡೆಮಿಯು ಹಾಕಿ ಉತ್ಸವದ ಧ್ವಜವನ್ನು ಅಪ್ಪಚೆಟ್ಟೋಳಂಡ ಕುಟುಂಬಸ್ಥರಿಗೆ ಈಗಾಗಲೆ ಹಸ್ತಾಂತರಿಸಿದ್ದು, ವ್ಯವಸ್ಥಿತ ಪಂದ್ಯಾವಳಿ ಆಯೋಜನೆಗೆ ಅಗತ್ಯ ಸಿದ್ಧತಾ ಕಾರ್ಯಗಳು ನಡೆಯುತ್ತಿವೆ. ವ್ಯವಸ್ಥಿತ ಗ್ಯಾಲರಿ ನಿರ್ಮಾಣ ಕಾರ್ಯ ನಾಳೆಯಿಂದ ಆರಂಭಗೊಳ್ಳಲಿದೆ. ಕೊಡವ ಹಾಕಿ ನಮ್ಮೆಯ ಮೂಲಕ ಕೊಡವ ಕುಟುಂಬಗಳ ಯುವ ಪ್ರತಿಭೆಗಳು ರಾಷ್ಟçಮಟ್ಟದಲ್ಲಿ ಕೀರ್ತಿ ತರುವಂತಾಗಬೇಕು. ಯುವ ಕ್ರೀಡಾಪಟುಗಳ ಭವಿಷ್ಯ ಉಜ್ವಲವಾಗಬೇಕು ಎಂದರು.

ಈ ಸಂದರ್ಭ ಹಾಕಿ ಅಕಾಡೆಮಿ ಉಪಾಧ್ಯಕ್ಷ ಬಡಕದ ದೀನಾ ಪೂವಯ್ಯ, ನಿರ್ದೇಶಕ ಕುಲ್ಲೇಟಿರ ಅರುಣ್ ಬೇಬ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ, ಬಿಜೆಪಿ ಸ್ಥಾನಿಯ ಸಮಿತಿ ಅಧ್ಯಕ್ಷ ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಎಂ.ಎ. ಮನ್ಸೂರ್ ಆಲಿ, ಬಾಚಮಂಡ ಲವ ಚಿಣ್ಣಪ್ಪ, ಅರೆಯಡ ರತ್ನಾ ಪೆಮ್ಮಯ್ಯ ನಾಪೋಕ್ಲು ಕೊಡವ ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ, ಕಾರ್ಯದರ್ಶಿ ನಾಯಕಂಡ ದೀಪಕ್ (ದೀಪು), ಶಿವಾಜಿ ಕ್ಲಬ್ ಅಧ್ಯಕ್ಷ ಕೇಲೇಟಿರ ದೀಪು ದೇವಯ್ಯ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರ್ವತಿ, ಸದಸ್ಯರಾದ ಶಿವಚಾಳಿಯಂಡ ಜಗದೀಶ್, ಕನ್ನಂಬಿರ ಸುಧಿ ತಿಮ್ಮಯ್ಯ, ಕುಂಡ್ಯೋಳAಡ ರಮೇಶ್ ಮುದ್ದಯ್ಯ, ಬಿಜೆಪಿ ಪ್ರಮುಖ ಕೋಡಿರ ಪ್ರಸನ್ನ, ಗ್ರಾ.ಪಂ. ಅಧ್ಯಕ್ಷ ಮುಕ್ಕಾಟಿರ ಸಂಪನ್ ಸುಬ್ಬಯ್ಯ, ನೆಲಜಿ ವಿಎಸ್‌ಎಸ್‌ಎನ್ ಅಧ್ಯಕ್ಷ ಮಾಳೆಯಂಡ ವಿಜು, ನೆಲಜಿ ಫಾರ್ಮರ್ಸ್ ಕ್ಲಬ್ ಅಧ್ಯಕ್ಷ ಮಂಡಿರ ನಂದ, ಕೆಪಿಎಸ್ ಶಾಲೆಯ ಉಪಾಧ್ಯಕ್ಷ ಕೆ.ಎ. ಹ್ಯಾರಿಸ್, ಪ್ರಬಾರ ಪ್ರಾಂಶುಪಾಲೆ ಡಾ.ಅವನಿಜ ಸೋಮಯ್ಯ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಿದ್ದಾಟಂಡ ಜಿನ್ನು ನಾಣಯ್ಯ, ಬಿಜೆಪಿ ತಾಲೂಕು ಕಾರ್ಯದರ್ಶಿ ಅಮ್ಮಂಡ ಮನು ಮಹೇಶ್, ಕೊಡವ ಸಮಾಜದ ಕಾರ್ಯದರ್ಶಿ ಕುಲ್ಲೇಟಿರ ಅಜಿತ್ ನಾಣಯ್ಯ, ಭಗವತಿ ದೇವಾಲಯದ ಕಾರ್ಯದರ್ಶಿ ಜಾಲಿ ಪೂವಪ್ಪ, ಅಪ್ಪಚೆಟ್ಟೋಳಂಡ ಕುಟುಂಬಸ್ಥರು ಹಾಗೂ ಇನ್ನಿತರರಿದ್ದರು.

- ದುಗ್ಗಳ ಸದಾನಂದ.