ಮಡಿಕೇರಿ, ಫೆ. ೩: ಮಡಿಕೇರಿಯ ಸಾಮ್ಯ ಆಯುರ್ವೇದಿಕ್ ಕ್ಲಿನಿಕ್‌ನ ವೈದ್ಯೆ ಅದಿತಿಯವರು ಮಡಿಕೇರಿಯ ಸುದರ್ಶನ ವೃತ್ತದ ಸಮೀಪ ಇರುವ ಬ್ಲಾಸಂ ಶಾಲೆಯ ವಿದ್ಯಾರ್ಥಿಗಳಿಗೆ ಅರಿವು ಕಾರ್ಯಕ್ರಮ ಏರ್ಪಡಿಸಿದ್ದರು. ಮಕ್ಕಳಲ್ಲಿ ರೋಗನಿರೋಧಕ ಶಕ್ತಿಯ ವರ್ಧನೆಗಾಗಿ ಯಾವ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಯಾವ ರೀತಿಯ ಆಹಾರವನ್ನು ಸೇವಿಸಬೇಕೆಂದು ಅರಿವು ಮೂಡಿಸಿದರು. ಹಾಗೆಯೆ ರೋಗನಿರೋಧಕ ಶಕ್ತಿಯ ವರ್ಧನೆಗಾಗಿ ಆಯುರ್ವೇದದಲ್ಲಿ “ಅತ್ಯುತೃಷ್ಠ ಸ್ವರ್ಣಾಮೃತ’’ ಪ್ರಾಶನದ ಸೇವನೆ ಬಗ್ಗೆ ತಿಳಿ ಹೇಳಿದರು.