ಮಡಿಕೇರಿ, ಫೆ. ೩: ಕೊಡವಾಮೆ ಸಂಘಟನೆಯ ಬುಡಕಟ್ಟು ಸಂಸ್ಕೃತಿ ಅಧ್ಯಯನ ಕೇಂದ್ರದ ವತಿಯಿಂದ ತಾ. ೧೧ ರಂದು ಮೂರ್ನಾಡು ಕೊಡವ ಸಮಾಜದಲ್ಲಿ ‘ಕೊಡವ ಚರಿತ್ರೆ’ ವಿಚಾರದ ಬಗ್ಗೆ ವಿಚಾರಗೋಷ್ಠಿ ನಡೆಯಲಿದೆ.
‘ಬ್ರಿಟಿಷರು ಕೊಡಗಿಗೆ ಬರುವ ಮುನ್ನ ಹಾಗೂ ನಂತರ’ ಎಂಬ ಬಗ್ಗೆ ಮಲ್ಲಂಗಡ ಝರೀನ ಕಾಳಯ್ಯ, ‘ಕೊಡಗು ನೆಲೆಯ ಹೆಸರು ಹಾಗೂ ಚರಿತ್ರೆ’ ಬಗ್ಗೆ ಡಾ. ಕೆ.ಪಿ. ಲಲಿತ ಅವರುಗಳು ವಿಚಾರ ಮಂಡಿಸಲಿದ್ದಾರೆ. ತಾ. ೧೧ ರಂದು ಬೆಳಿಗ್ಗೆ ೯ ರಿಂದ ಕಾರ್ಯಕ್ರಮ ಆರಂಭವಾಗಲಿದೆ.