ಕುಶಾಲನಗರ, ಫೆ. ೩: ಕೊಡಗಿನ ಹೆಬ್ಬಾಗಿಲು, ಜೀವನದಿ ಕಾವೇರಿಯ ತಟದಲ್ಲಿ ಕುಶಾಲನಗರ ತಾಲೂಕಿನ ಕನ್ನಡ ಸಾಹಿತ್ಯ ಪ್ರಥಮ ಸಮ್ಮೇಳನ ಅದ್ಧೂರಿಯಾಗಿ ನಡೆಯಿತು.
ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸಿ ಕೊಪ್ಪ-ಕುಶಾಲನಗರ ಗಡಿಭಾಗದ ಕಾವೇರಿ ನದಿ ಸೇತುವೆ ಬಳಿ ಸುಮಾರು ೧ ಕಿ.ಮೀ. ಉದ್ದದ ಮೆರವಣಿಗೆಗೆ ಸಾಹಿತಿಗಳಾದ ಬಾಚರಣಿಯಂಡ ಪಿ. ಅಪ್ಪಣ್ಣ ಚಾಲನೆ ನೀಡಿದರು. ವೇದಿಕೆ ಕಾರ್ಯಕ್ರಮ ನಡೆಯುವ ಕುಶಾಲನಗರ ಪಟ್ಟಣದ ರೈತ ಸಹಕಾರ ಭವನ ತನಕ ಸಮ್ಮೇಳನಾಧ್ಯಕ್ಷ ನಿವೃತ್ತ ಪತ್ರಕರ್ತ ಮತ್ತು ಉಪನ್ಯಾಸಕರು ಸಾಹಿತಿ ಆದ
ಬಿ.ಆರ್ ನಾರಾಯಣ ಅವರೊಂದಿಗೆ ಅಲಂಕೃತ ವಾಹನದಲ್ಲಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಕೇಶವಕಾಮತ್ ಮತ್ತು
ಕೆ.ಎಸ್. ಮೂರ್ತಿ ಅವರೊಂದಿಗೆ ಅದ್ಧೂರಿ ಮೆರವಣಿಗೆ ನಡೆಯಿತು.
ಮೆರವಣಿಗೆಯಲ್ಲಿ ಮಾಜಿ ಸೈನಿಕರ ಸಂಘ, ಆಶಾ ಕಾರ್ಯಕರ್ತೆಯರು, ಕೊಡವ ಸಮಾಜ, ಗೌಡ ಸಮಾಜ, ದೇವಾಂಗ ಸಂಘ, ಕಲಶÀ ಹೊತ್ತ ಮಹಿಳೆಯರು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ವಿವಿಧ ಸಂಘ-ಸAಸ್ಥೆಗಳ ಸದಸ್ಯರು ಕನ್ನಡ ಬಾವುಟವನ್ನು ಹೊತ್ತು ಸಾಗಿದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪುರಸಭೆ ಅಧ್ಯಕ್ಷ ಬಿ. ಜಯವರ್ಧನ ಅವರು, ಸಮ್ಮೇಳನದ ವೇದಿಕೆ ಬಳಿ ರಾಷ್ಟç ಧ್ವಜಾರೋಹಣ ನೆರವೇರಿಸಿದರೆ, ಕಸಾಪ ಜಿಲ್ಲಾಧ್ಯಕ್ಷ ಎಂ.ಪಿ ಕೇಶವ ಕಾಮತ್ ಪರಿಷತ್ತಿನ ಧ್ವಜಾರೋಹಣ ನೆರವೇರಿಸಿದರು. ತಾಲೂಕು ಅಧ್ಯಕ್ಷ ಕೆ.ಎಸ್ ಮೂರ್ತಿ ಕನ್ನಡ ಧ್ವಜಾರೋಹಣ ನೆರವೇರಿಸಿದರು.
ಪಟ್ಟಣದ ಸರಹದ್ದಿನಲ್ಲಿ ಗಣ್ಯರ ನೆನಪಿನ ದ್ವಾರಗಳ ಉದ್ಘಾಟನೆ ಏಕಕಾಲಕ್ಕೆ ನಡೆಯಿತು. ಎಸ್.ಎನ್. ನರಸಿಂಹಮೂರ್ತಿ ನೆನಪಿನ ದ್ವಾರವನ್ನು ಜಿಲ್ಲಾ ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್, ವಾಲ್ನೂರು ವೀರಪ್ಪಗೌಡ ನೆನಪಿನ ದ್ವಾರವನ್ನು ಹಿರಿಯ ಸಹಕಾರಿ ಎ.ವಿ. ಶಾಂತಕುಮಾರ್ ಮತ್ತು ಕುಡ ಅಧ್ಯಕ್ಷ ಎಂ.ಎA. ಚರಣ್ ಉದ್ಘಾಟಿಸಿದರು. ಕೂಡಿಗೆ ಮೂಡ್ಲಿ ಗೌಡರ ಹೆಸರಿನ ದ್ವಾರವನ್ನು ಉದ್ಯಮಿ ಎಸ್.ಕೆ. ಸತೀಶ್, ಗುಡ್ಡೆಹೊಸೂರು
ಬಿ.ಟಿ. ವಿಶ್ವನಾಥ ಅವರ ನೆನಪಿನ ದ್ವಾರವನ್ನು ಎಂ.ಹೆಚ್. ನಜೀರ್ ಅಹಮದ್ ಉದ್ಘಾಟಿಸಿದರು.
ಎಸ್.ಎನ್. ಲಕ್ಷಣ ಶೆಟ್ಟರ ಉದ್ಯಮಿ
(ಮೊದಲ ಪುಟದಿಂದ) ಎಸ್.ಎಲ್. ಶ್ರೀಪತಿ, ಗುಂಡೂರಾವ್ ಸಭಾಂಗಣವನ್ನು ಹಿರಿಯ ನಾಗರಿಕರಾದ ಜಿ.ಎಲ್. ನಾಗರಾಜ್ ಉದ್ಘಾಟಿಸಿದರು. ಕಸಾಪ ವಿಶೇಷ ಆಹ್ವಾನಿತರಾದ ಬಿ.ಬಿ. ಭಾರತೀಶ್ ಕೊಡಗಿನ ಗೌರಮ್ಮ ವೇದಿಕೆ ಉದ್ಘಾಟನೆ ಮಾಡಿದರು.
ಕಲಾ ತಂಡಗಳ ಉದ್ಘಾಟನೆಯನ್ನು ಧರ್ಮಸ್ಥಳ ಯೋಜನೆಯ ಜಿಲ್ಲಾ ನಿರ್ದೇಶಕಿ ಲೀಲಾವತಿ, ವಿವಿಧ ಮಳಿಗೆಗಳ ಉದ್ಘಾಟನೆಯನ್ನು ಕರ್ನಾಟಕ ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ ಮತ್ತು ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಉದ್ಘಾಟಿಸಿ ಮಳಿಗೆಗಳನ್ನು ವೀಕ್ಷಿಸಿದರು.
-ಎನ್.ಎನ್. ಚಂದ್ರಮೋಹನ್