ಕುಶಾಲನಗರ, ಫೆ. ೩: ಕುಶಾಲನಗರ ತಾಲೂಕಿನ ಕನಸುಗಳನ್ನು ನನಸು ಮಾಡುವಲ್ಲಿ ಪ್ರತಿಯೊಬ್ಬರು ಕೈಜೋಡಿಸಬೇಕೆಂದು ಮಡಿಕೇರಿ ವಿಧಾನ ಸಭಾ ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ಕರೆ ನೀಡಿದರು.
ಕುಶಾಲನಗರದಲ್ಲಿ ನಡೆದ ಪ್ರಥಮ ಸಾಹಿತ್ಯ ಸಮ್ಮೇಳನದಲ್ಲಿ ಆಶಯ ನುಡಿಗಳನ್ನಾಡಿ, ಕಳೆದ ೨ ದಶಕಗಳ ಹೋರಾಟದ ಮೂಲಕ ಕುಶಾಲನಗರ ತಾಲೂಕು ರಚನೆಯಾಗಿದ್ದು, ಸರ್ಕಾರದ ಮೂಲಕ ತಾಲೂಕಿನ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಲಾಗಿದೆ. ಕುಶಾಲನಗರ ಕೇಂದ್ರಕ್ಕೆ ಡಬಲ್ ಧಮಾಕ ಎಂಬAತೆ ಜೊತೆಜೊತೆಗೆ ಕುಶಾಲನಗರ ಪಟ್ಟಣ ಪುರಸಭೆಯಾಗಿ ಮೇಲ್ದರ್ಜೇಗೇರಿಕೆಯಾಗಿದೆ. ಬಿಜೆಪಿ ಸರ್ಕಾರದ ಮೂಲಕ ಅಭಿವೃದ್ಧಿಗೆ ಬೇಕಾದ ಎಲ್ಲಾ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಎಲ್ಲಾ ಪ್ರಯತ್ನ ನಡೆದಿದೆ ಎಂದರು. ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಕಾರಣಕರ್ತರಾದ ಎಲ್ಲರಿಗೂ ಶಾಸಕರಂಜನ್ ಅಭಿನಂದನೆ ಸಲ್ಲಿಸಿದರು.
ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಸ್ಮರಣ ಸಂಚಿಕೆ ಮುಖಪುಟ ಬಿಡುಗಡೆಗೊಳಿಸಿ ಮಾತನಾಡಿ, ನಾಡಿನ ನೆಲ ಜಲ ಸಂರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕೆಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಎಂ.ಪಿ ಕೇಶವ ಕಾಮತ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಪುರಸಭೆ ಅಧ್ಯಕ್ಷ ಬಿ. ಜಯವರ್ಧನ್, ಸಮ್ಮೇಳನದ ಆರ್ಥಿಕ ಸಮಿತಿ ಅಧ್ಯಕ್ಷ ವಿ.ಪಿ ಶಶಿಧರ್, ನಿಕಟ ಪೂರ್ವ ಅಧ್ಯಕ್ಷ ಲೋಕೇಶ್ ಸಾಗರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಐ ಮುನೀರ್ ಅಹಮ್ಮದ್, ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ. ರಮೇಶ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಪಿ ಚಂದ್ರಕಲಾ, ರೇವತಿ ರಮೇಶ್, ಮಾಜಿ ತಾಲೂಕು ಅಧ್ಯಕ್ಷ ಡಿ.ಜಿ ಪ್ರೇಮ್ಕುಮಾರ್, ಎಂ.ಡಿ. ರಂಗಸ್ವಾಮಿ, ತಾಲೂಕು ಘಟಕದ ಅಧ್ಯಕ್ಷರಾದ ಎಸ್.ಡಿ ವಿಜೇತ್, ನವೀನ್ ಅಂಬೆಕಲ್ಲು, ಕೋಳೆರ ದಯಾ ಚಂಗಪ್ಪ, ಡಿ. ರಾಜೇಶ್ ಪದ್ಮನಾಭ, ಹೋಬಳಿ ಅಧ್ಯಕ್ಷರಾದ ಸೆಬಾಸ್ಟೀನ್, ಎಂ.ಎನ್. ಮೂರ್ತಿ ಮತ್ತಿತರರು ಇದ್ದರು. ಧನಲಕ್ಷಿö್ಮ ಮತ್ತು ಕಾಮಾಕ್ಷಿ ತಂಡದವರಿAದ ನಾಡಗೀತೆ, ಬಿ.ಎನ್ ಪುಷ್ಪ ತಂಡದಿAದ ರೈತಗೀತೆ, ಕುಶಾಲನಗರ ಮಹಿಳಾ ಭಜನ ಮಂಡಳಿಯವರಿAದ ಉದ್ಘಾಟನಾ ಗೀತೆ ಹಾಡಿದರು.
ಚಿತ್ರ ಕಲಾವಿದ ಸತೀಶ್ ಅವರಿಂದ ಸ್ಥಳದಲ್ಲಿಯೇ ಚಿತ್ರ ಬಿಡಿಸಿ ಸಬಿಕರ ಮತ್ತು ಗಣ್ಯರ ಗಮನ ಸೆಳೆದರು. ಕಾಳಪ್ಪ ಅವರು ಉದ್ಘಾಟನಾ ಸಂದರ್ಭ ನೃತ್ಯ ಮೆರುಗು ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕೆ.ಎಸ್ ಮೂರ್ತಿ ಸ್ವಾಗತಿಸಿದರು. ಜಿಲ್ಲಾ ಪದಾಧಿಕಾರಿಗಳಾದ ಡೆನ್ನಿಸ್ ಡಿಸೋಜ ಕಾರ್ಯಕ್ರಮ ನಿರ್ವಹಿಸಿದರು. ಹೇಮಲತಾ, ಟಿ.ವಿ ಶೈಲ ನಿರೂಪಣೆ, ಕೆ.ವಿ ಉಮೇಶ್ ವಂದಿಸಿದರು.