ನಾಪೋಕ್ಲು, ಫೆ. ೨: ನಾಪೋಕ್ಲು ಗ್ರಾಮ ಪಂಚಾಯಿತಿಯ ಪ್ರಬಾರ ಪಿಡಿಓ ಆಗಿ ಕಾರ್ಯನಿರ್ವಹಿಸುತ್ತಿದ್ದ ಗ್ರೇಡ್ ೧ ಕಾರ್ಯದರ್ಶಿ ಎಂ.ಎಸ್. ಚೋಂದಕ್ಕಿ ಅವರನ್ನು ಎಮ್ಮೆಮಾಡು ಗ್ರಾಮ ಪಂಚಾಯಿತಿಯ ಪ್ರಬಾರ ಪಿಡಿಓ ಆಗಿ ನೇಮಕ ಮಾಡಲಾಗಿದೆ. ತೆರವಾದ ಈ ಸ್ಥಾನಕ್ಕೆ ಮದೆ ಗ್ರಾಮ ಪಂಚಾಯಿತಿಯ ಪಿಡಿಓ ನಂಜುAಡಸ್ವಾಮಿ ಅವರನ್ನು ಹೆಚ್ಚುವರಿ ಪ್ರಬಾರ ಪಿಡಿಓ ಆಗಿ ನಾಪೋಕ್ಲು ಗ್ರಾಮ ಪಂಚಾಯಿತಿಗೆ ನೇಮಕ ಮಾಡಲಾಗಿದೆ. ಎಮ್ಮೆಮಾಡು ಗ್ರಾಮ ಪಂಚಾಯಿತಿ ಗ್ರೇಡ್ ೨ ಕಾರ್ಯದರ್ಶಿ, ಪಾರ್ವತಿ ಅವರನ್ನು ನಾಪೋಕ್ಲು ಗ್ರಾಮ ಪಂಚಾಯಿತಿಗೆ ಗ್ರೇಡ್ ೨ ಕಾರ್ಯದರ್ಶಿ,ಯಾಗಿ ಹಾಗೂ ನಾಪೋಕ್ಲು ಗ್ರಾಮ ಪಂಚಾಯಿತಿಯ ದ್ವಿತೀಯ ದರ್ಜೆ ಸಹಾಯಕರಾದ ನಂದಿನಿ ಎ.ಎಸ್. ಅವರನ್ನು ಮಡಿಕೇರಿಯ ತಾಲೂಕು ಪಂಚಾಯಿತಿ ಕಚೇರಿಗೆ ನಿಯೋಜಿಸಿ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಆದೇಶ ಹೊರಡಿಸಿದ್ದಾರೆ.